ಧ್ಯಾನದ 28 ಅತ್ಯುನ್ನತ ಗುಣಗಳು ಯಾವುವು?

“ಸಮಾಧಿಗೆ 28 ಅತ್ಯುನ್ನತ ಗುಣಗಳಿವೆ. ಆದ್ದರಿಂದಲೇ ತಥಾಗತರು ಅದರಲ್ಲಿ ತಲ್ಲೀನರಾಗುತ್ತಾರೆ ಎಂದು ಕೇಳಿದ್ದೇನೆ. ಅವು ಯಾವುವು? ದಯವಿಟ್ಟು ತಿಳಿಸಿ”  ಎಂದು ನಾಗಸೇನ ಭಂತೇಜಿ ಬಳಿ ರಾಜನೊಬ್ಬ ಕೇಳುತ್ತಾನೆ. ಅದಕ್ಕೆ ಅವರು ನೀಡಿದ ಉತ್ತರ ಹೀಗಿದೆ… ವ್ಯಕ್ತಿತ್ವದ ಸಂರಕ್ಷಣೆ ಮಾಡುತ್ತದೆ, ದೀರ್ಘಾಯು ನೀಡುತ್ತದೆ, ಶಕ್ತಿ ನೀಡುತ್ತದೆ, ಬಲ ವೃದ್ಧಿಸುತ್ತದೆ ಪರಿಶುದ್ಧಿ ನೀಡುತ್ತದೆ.  ಕುಖ್ಯಾತಿ ನೀಗುತ್ತದೆ ಸುಖ್ಯಾತಿ ತರುತ್ತದೆ. ಅತೃಪ್ತಿ ತೊಡೆದು ತೃಪ್ತಿ ನೀಡುತ್ತದೆ,  ಭಯ ಕಿತ್ತೆಸೆಯುತ್ತದೆ ಶ್ರದ್ಧೆ ನೀಡುತ್ತದೆ,  ಜಡತ್ವ ಕಿತ್ತೊಗೆಯುತ್ತದೆ ಉತ್ಸಾಹ ನೀಡುತ್ತದೆ. ರಾಗದಿಂದ ಬಿಡುಗಡೆ ಮಾಡಿಸುತ್ತದೆ […]