lotus

ತಿಳಿವು ಘಟಿಸುವ ಘಳಿಗೆಯೇ ಜ್ಞಾನೋದಯ

ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ ~ ಚೇತನಾ ತೀರ್ಥಹಳ್ಳಿ ವಾಸ್ತವದಲ್ಲಿ ಕತ್ತಲೆಂಬುದಿಲ್ಲ. ಇರುವುದೇನಿದ್ದರೂ ಬೆಳಕಿನ ಗೈರು ಹಾಜರಿಯಷ್ಟೆ. ಬೇಕಿದ್ದರೆ ಪರಿಶೀಲಿಸಿ. ಕತ್ತಲು ತುಂಬಿದ ಕೋಣೆಯಲ್ಲಿ ಒಂದು ದೀಪದ ಕುಡಿ ಬೆಳಕು ತರಬಲ್ಲದು. ಆದರೆ ಬೆಳಕೇ ಬೆಳಕಾಗಿರುವ ಕಡೆ ಕತ್ತಲನ್ನು ತಂದು ತುಂಬಲು ಸಾಧ್ಯವಿಲ್ಲ. ಬೆಳಕನ್ನು ತಡೆದು, ಕೃತಕವಾಗಿ ಕತ್ತಲನ್ನು ಸೃಷ್ಟಿಸಬಹುದು. […]

ಮೊದಲ ಹೆಜ್ಜೆ ಪ್ರಯಾಣಕ್ಕೆ ಮುನ್ನುಡಿ : ಅರಳಿಮರ POSTER

ನೆಲಕ್ಕೂರಿದ ಹೆಜ್ಜೆಯನ್ನು ಎತ್ತಿಡದೆ ನಡಿಗೆ ಸಾಧ್ಯವಾಗುವುದೇ? ನಡಿಗೆ ಸಾಧ್ಯವಾಗದೆ ಪ್ರಯಾಣ ಸಾಧ್ಯವಾಗುವುದೇ? ಆ ಮೊದಲ ಹೆಜ್ಜೆಯೇ ಸಾವಿರಾರು ಮೈಲುಗಳ ಪ್ರಯಾಣಕ್ಕೆ ಮುನ್ನುಡಿಯಾಗಿದೆ! ನೆಲದ ಮೇಲೆ ಊರಿದ ಕಾಲನ್ನು ತೆಗೆಯದೆ ನಡಿಗೆ ಸಾಧ್ಯವಿಲ್ಲ. ನಡಿಗೆ ಸಾಧ್ಯವಾಗದೆ ಹೋದರೆ ಪ್ರಯಾಣವೂ ಸಾಧ್ಯವಿಲ್ಲ. “ಒಂದು ಹೆಜ್ಜೆ ಎತ್ತಿಡುವ ಮೂಲಕ ಸಾವಿರಾರು ಮೈಲುಗಳ ಪ್ರಯಾಣ ಆರಂಭವಾಗುತ್ತದೆ” ಎಂದು ಲಾವೋತ್ಸು ಹೇಳಿದ್ದನ್ನು ಹೀಗೆ ಅರ್ಥೈಸಬಹುದು.  ನಾವು ನೆಲಕ್ಕಂಟಿಕೊಂಡಿರುತ್ತೇವೆ. ನಮಗೆ ನೆಲೆಯೂರಿದ ಹೆಜ್ಜೆಯನ್ನು ಎತ್ತಲು ಭಯ. ಎಲ್ಲಿ ನೆಲೆ ಕಳೆದುಕೊಂಡುಬಿಡುತ್ತೇವೋ ಎಂದು ಆತಂಕ. ಆದ್ದರಿಂದಲೇ ನಾವು  […]

ತಾವೋ ತಿಳಿವು #51 ~ ಸಂತ ಸುಮ್ಮನಿದ್ದರೆ ಏಳಿಗೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ರಾಜ್ಯವನ್ನು ಆಳಲು ತಾವೋಗಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ನಿಯಂತ್ರಣಕ್ಕೆ ಮೂಗುದಾರ ಹಾಕಿದಾಗ, ಸಿದ್ಧಾಂತಗಳ ಕೆಳಗಿನ ಮಣೆ ಸರಿಸಿದಾಗ ಜಗತ್ತಿಗೆ ತನ್ನನ್ನು ತಾನು ಆಳುವುದು ಸಾಧ್ಯವಾಗುತ್ತದೆ. ನಿಷೇಧಗಳು ಹೆಚ್ಚಾಗುತ್ತ ಹೋದಂತೆ ಜನ ಚಾಲಾಕಿಗಳಾಗುತ್ತ ಹೋಗುತ್ತಾರೆ. ಆಯುಧಗಳು ಅಪಾರವಾದಾಗ ಜನರಲ್ಲಿ ಕಳವಳ ವಿಪರೀತವಾಗುತ್ತದೆ. ಕರುಣೆ ಉಲ್ಬಣಗೊಂಡಾಗ ಜನ ಭರವಸೆ ಕಳೆದುಕೊಳ್ಳುತ್ತಾರೆ ಅಂತೆಯೇ ಸಂತ, ಕಾನೂನಿನ ಮಾತಾಡುವುದಿಲ್ಲ ಆಗ ಜನ ನ್ಯಾಯವಂತರಾಗುತ್ತಾರೆ. ಅರ್ಥಶಾಸ್ತ್ರದ ಬೊಗಳೆ ಬಿಡುವುದಿಲ್ಲ ಜನರ ಕೈಯಲ್ಲಿ […]

ತಾವೋ ತಿಳಿವು #46 : ಯಾರು ಈ ಸಂಯಮಿಗಳು?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ದೇಶವನ್ನು ಮುನ್ನಡೆಸಲು ತಕ್ಕಡಿ ಎಷ್ಟು ಮುಖ್ಯವೋ ತಕ್ಕಡಿ ಹಿಡಿಯುವವನ ಸಂಯಮವೂ ಅಷ್ಟೇ ಮುಖ್ಯ. ಯಾರು ಈ ಸಂಯಮಿಗಳು? ರುಚಿಯ ಬಗ್ಗೆ ತಕರಾರು ಮಾಡದವರು, ಆಕಾಶವನ್ನು ಮೈತುಂಬ ಹೊದ್ದವರು, ಬೆಳಕಿನಂತೆ ಹಬ್ಬಿಕೊಳ್ಳುವವರು, ಪರ್ವತಗಳಂತೆ ನೆಲಕ್ಕೆ ಕಾಲೂರಿ ನಿಂತವರು, ಬದುಕು ಕಟ್ಟಿಕೊಟ್ಟ ಬುತ್ತಿಯನ್ನೆಲ್ಲ ಕಣ್ಣಿಗೊತ್ತಿಕೊಂಡು ಉಣ್ಣುವವರು. ಕಣ್ಣಳತೆಯಲ್ಲಿ ಯಾವ ಮೈಲಿಗಲ್ಲೂ ಇಲ್ಲದವರು. ಅವರು ಯಾವುದನ್ನೂ ಕಟ್ಚಿಹಾಕುವುದಿಲ್ಲ ಅಂತೆಯೇ ಅವರಿಗೆ ಯಾವುದೂ ಅಸಾಧ್ಯವಲ್ಲ. ತಾಯಿ ಮಗುವನ್ನು ಕಾಡುವಂತೆ ಅವರು […]

ತಾವೋ ತಿಳಿವು #44 ~ ಉಸಿರಿನ ಹಾಗೆ ಸರಾಗ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಖಾಲಿ ಕಣಿವೆಯ ಚೈತನ್ಯ, ಅನನ್ಯ. ಅಂತೆಯೇ ತಾವೋ ಮಹಾಮಾಯಿ ಸಕಲ ಜಗತ್ತುಗಳ ಹಡೆದವ್ವ. ಗಾಳಿಯ ಹಾಗೆ, ಕಾಣಿಸದಿದ್ದರೂ ಉಸಿರಿನ ಹಾಗೆ ಸರಾಗ.

ತಾವೋ ತಿಳಿವು #43 ~ ಬೆಳಕನ್ನು ಧರಿಸುವುದೆಂದರೆ ಹೀಗೆ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನುರಿತ ಪ್ರಯಾಣಿಕನಿಗೆ ಪೂರ್ವ ಸಿದ್ಧತೆಗಳಲ್ಲಿ ನಂಬಿಕೆಯಿಲ್ಲ. ಒಳ್ಳೆಯ ಕಲಾವಿದನೂ ಹಾಗೆಯೇ ಒಳಗಣ್ಣಿಗೆ ಮಾತ್ರ ತಲೆ ಬಾಗುತ್ತಾನೆ. ಪ್ರಖರ ವಿಜ್ಞಾನಿಗೆ, ಸಿದ್ಧಾಂತಗಳ ಹಂಗಿಲ್ಲ ಮಾತು ಬಲ್ಲವ, ತಡವರಿಸುವುದಿಲ್ಲ ಬೆರಳು ಬಳಸದೇ ಎಣಿಸುವವನೇ ಚತುರ ವ್ಯಾಪಾರಿ. ಅಂತೆಯೇ ಸಂತ, ಎಲ್ಲರ ಕೈಗೂ ಸಿಗುತ್ತಾನೆ ಯಾರನ್ನೂ ತಿರಸ್ಕರಿಸುವುದಿಲ್ಲ ಯಾವ ಸಂದರ್ಭವನ್ನೂ ದೂರುವುದಿಲ್ಲ ಎಲ್ಲವನ್ನೂ ಬಳಸಿಕೊಳ್ಳುತ್ತಾನೆ. ಬೆಳಕನ್ನು ಧರಿಸುವುದೆಂದರೆ, ಹೀಗೆ. ಒಳ್ಳೆ ಮನುಷ್ಯ ಯಾರು? ಕೆಟ್ಟ ಮನುಷ್ಯನ ಶಿಕ್ಷಕ. ಕೆಟ್ಟ […]

ತಾವೋ ತಿಳಿವು #42 ~ ನಂಬದವರನ್ನು ನಂಬುವುದು ಅಸಾಧ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಕಡಿಮೆ ಮಾತು, ಸಹಜ ಸ್ವಭಾವ ಇಡೀ ದಿನ ಬೀಸದ ಗಾಳಿಯಂತೆ ಇಡೀ ದಿನ ಸುರಿಯದ ಮಳೆಯಂತೆ. ಮೋಡ ಸರಿದ ಮೇಲೆ, ಬಿಸಿಲು ಬೀಳಲೇ ಬೇಕು. ಗಾಳಿ, ಮಳೆ, ಮೋಡ, ಬಿಸಿಲು ಯಾವುದೂ ಶಾಶ್ವತವಲ್ಲ ಅಂದ ಮೇಲೆ ಮನುಷ್ಯ ಯಾವ ಲೆಕ್ಕ? ತಾವೋಗೆ ತೆರೆದುಕೊಂಡಾಗ, ತಾವೋ ಅಪ್ಪಿಕೊಳ್ಳುವುದು. ಹೆಸರಿನ ಬೆನ್ನು ಹತ್ತಿದರೆ, ಹೆಸರೇ ಬೆನ್ನ ಏರುವುದು. ದಾರಿ ಕಳೆದುಕೊಂಡವರು, ಬದುಕಿಗೂ ಎರವಾಗುವರು. ನಂಬದವರನ್ನು ನಂಬುವುದು ಅಸಾಧ್ಯ.

ತಾವೋ ತಿಳಿವು #22 ~ ಮಾಡಬೇಕಾದ ಕೆಲಸ ಮಾಡಿ ಮರೆತುಬಿಟ್ಟಾಗ ಮಾತ್ರ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತುದಿಗಾಲ ಮೇಲೆ ನಿಂತವ ಉರುಳಿ ಬೀಳುವ ಸಾಧ್ಯತೆಗಳೇ ಹೆಚ್ಚು. ಎಲ್ಲರಿಗಿಂತ ಮುಂದೆ ಓಡಿ ಹೋದವ ಬಹಳ ದೂರ ಹೋಗಲಾರ. ಮಿಂಚಲು ಪ್ರಯತ್ನಿಸುವವನ ಬೆಳಕು, ಕಂದುತ್ತ ಹೋಗುವುದು. ತನ್ನನ್ನು ತಾನು ಸಾರಿಕೊಳ್ಳುವವ ತನಗೆ ತಾನೇ ಅಪರಿಚಿತ. ಪರರ ಮೇಲೆ ಹತೋಟಿ ಸಾಧಿಸಬಲ್ಲವ ತನ್ನ ಮೇಲೆ ಅಧಿಕಾರ ಹೊಂದಲು ಅಸಮರ್ಥ. ಕೆಲಸಕ್ಕೆ ಜೋತು ಬೀಳುವವ ಶಾಶ್ವತವಾದದ್ದನ್ನು ಸೃಷ್ಟಿಸಲಾರ. ಮಾಡಬೇಕಾದ ಕೆಲಸ ಮಾಡಿ ಮರೆತುಬಿಟ್ಟಾಗ ಮಾತ್ರ ‘ತಾವೋ’ ಜೊತೆಗೆ […]

ತಾವೋ ತಿಳಿವು #15 ~ ಮರಳಿದಾಗಲೆ ಅರಳುವುದು ಸಾಧ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ   ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ ಎದೆ ತಿಳಿಯಾಗುವುದು. ಸುತ್ತ ಬದುಕಿಗೆ ಸಾಕ್ಷಿಯಾದಾಗ ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು ಬೇರಿಗೆ ಶರಣಾಗುವುದು. ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ; ಮರಳಿದಾಗಲೆ ಅರಳುವುದು ಸಾಧ್ಯ. ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು; ನೆನಪಿದ್ದವರು ಮಾತ್ರ ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು, ಅಜ್ಜಿಯಂತೆ ಅಂತಃಕರುಣಿಗಳು ರಾಜನಂತೆ ಗಂಭೀರರು. ಅಪರೂಪದ ತಾವೋದಲ್ಲಿ ಮುಳುಗಿದವರು ಬದುಕಿನ ಯಾವ ಸವಾಲಿಗೂ ಸಿದ್ಧರು; ಎದುರಾದರೆ […]

ತಾವೋ ತಿಳಿವು #14 ~ ಸಚ್ಚಾರಿತ್ರದ ಮೂಲ ಬೇರುಗಳು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅಂಡಲೆಯುವ ಮನಕೆ ಆಮಿಷ ತೋರಿ ಸ್ವಂತದಲಿ ಒಂದಾಗಿಸುವುದು ಸಾಧ್ಯವೆ? ನಿಮ್ಮ ದೇಹವ ನೆನಸಿ ನೆನಸಿ ಹಸು ಕಂದನ ಕೋಮಲ ಶರೀರ ದಿವ್ಯವಾಗಿಸಬಹುದೆ? ಕಾಣುವ ಕಣ್ಣಿಗೆ ಸಾಣೆ ಹಿಡಿದು ಬರೀ ಬೆಳಕ ನೋಡುವುದು ಸಾಧ್ಯವೆ ? ಚಾಟಿ-ಹುಕುಮು ಮೂಗುದಾಣವಿಲ್ಲದೆಯೇ ಮೈ ನೇವರಿಸುತ್ತ ಬಂಡಿ ಓಡಿಸಬಹುದೆ? ಎಲ್ಲ ನಿಚ್ಚಳವಾಗಿ ಕಾಣುತ್ತಿರುವಾಗಲೂ ಒಂದು ಹೆಜ್ಜೆ ಹಿಂದೆ ಸರಿದು ನಿಶ್ಚಯ ಮಾಡಬಹುದೆ? ಬೀಜ ಬಿತ್ತಿ, ಪಾತಿ ಮಾಡಿ, ನೀರು ಹಾಕಿ […]