ಲಾವೋತ್ಸೇ ಎಂಬ ಜಗತ್ತಿನ ಮೊದಲ ಹಿಪ್ಪಿ

ಬದುಕು ಇರುವುದೇ ಖುಶಿಗಾಗಿ, ಸಂಭ್ರಮಿಸಲು. ಕೇವಲ ಬಳಕೆಗಾಗಿ ಅಲ್ಲ. ಬದುಕು ಮಾರುಕಟ್ಟೆಯ ಸರಕಲ್ಲ, ಅದೊಂದು ಕಾವ್ಯ ; ಅದನ್ನು ಕವಿತೆಯ ಹಾಗೆಯೇ ಬಾಳಬೇಕು, ಹಾಡು, ಕುಣಿತದ ಹಾಗೆ ಸಂಭ್ರಮಿಸಬೇಕು ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಲಾವೋ ತ್ಸು’ವಿಗೆ ಹೀಗನಿಸಿತು… : ಅರಳಿಮರ POSTER

“ನೆಲೆ ಕಳಚಿದ ಎಲೆ ಮುಂದೇನು ಎಂದು ಯೋಚಿಸುತ್ತದೆಯೇ? ಅಸ್ತಿತ್ವ ಅದರ ಕಾಳಜಿ ವಹಿಸುತ್ತೆ. ಕಾಲದ ಹರಿವಿನ ಜೊತೆಗೆ ಅದು ಸದ್ಯಕ್ಕೆ ಹುಲ್ಲು ಹಾಸಿನ ಮೇಲೆ ನೆಲೆಸಿದೆ. ಮತ್ತೆ ಹರಿವಿನ ಜೊತೆಗೇ ಅದರ ಭವಿಷ್ಯವೂ ನಿರ್ಧಾರವಾಗುತ್ತೆ” ಎಂದು ಲಾವೋ ತ್ಸುಗೆ ಅನಿಸಿತು… ಲಾವೋ ತ್ಸು, ಚೀನಾದ ಮಹಾ ದಾರ್ಶನಿಕ. ಝೆನ್ ಕವಲಿನ ಅನುಭಾವಿ ಸಂತ. ಅವನು ತನ್ನ ಸ್ವಂತ ತಿಳಿವನ್ನಾಧರಿಸಿ ತನ್ನದೇ ಆದ ದಾರಿಯೊಂದನ್ನು ಹಾಕಿಕೊಂಡ. ಅದನ್ನು `ದಾವ್’ ಎಂದು ಕರೆದ. ದಾವ್ ಎಂದರೇನೇ `ದಾರಿ’. ಪ್ರತಿಯೊಬ್ಬರೂ ತಮ್ಮ […]

ತಾವೋ ತಿಳಿವು #41 ~ ಸಂತರಿಗೆ ಸ್ವಂತ ಬುದ್ಧಿ ಇರುವುದಿಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಸಂತರಿಗೆ ಸ್ವಂತ ಬುದ್ಧಿ ಇರುವುದಿಲ್ಲ. ಸಾಮಾನ್ಯರಲ್ಲಿ ಅವರು ‘ಅಸಾಮಾನ್ಯ’ ವನ್ನು ಕಾಣುತ್ತಾರೆ. ಅವರಿಗೆ ಒಳ್ಳೆಯವರ ಬಗ್ಗೆ ಪ್ರೀತಿ ಕೆಟ್ಟವರ ಬಗ್ಗೆಯೂ ಪ್ರೀತಿ ಪ್ರೀತಿ ಒಂದು ಸಹಜ ಸ್ವಭಾವ. ಅವರಿಗೆ ನಂಬಿಕೆಯ ಬಗ್ಗೆ ನಂಬಿಕೆ ಅಪನಂಬಿಕೆಯ ಬಗ್ಗೆಯೂ ನಂಬಿಕೆ ನಂಬಿಕೆ ಒಂದು ಹುಟ್ಟು ಗುಣ. ಅವರು ಭೂಮಿಗೆ ಹತ್ತಿರವಾಗಿ ಬದುಕುತ್ತಾರೆ ನೆಲದ ವ್ಯವಹಾರದಲ್ಲಿ ತಲೆಹಾಕುತ್ತಾರೆ ಜನ ಕಣ್ಣು, ಕಿವಿ ಅರಳಿಸಿ ಅವರನ್ನು ಬೆರಗಿನಿಂದ ನೋಡುತ್ತಾರೆ ಒಟ್ಟಿನಲ್ಲಿ […]

ತಾವೋ ತಿಳಿವು #13 : ತಾವೋ ಯಾಕೆ ಶಾಶ್ವತ?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಶಾಶ್ವತ, ಅನಂತ. ಯಾಕೆ ಶಾಶ್ವತ ? ಅದು ಹುಟ್ಟೇ ಇಲ್ಲ ಎಂದಮೇಲೆ ಸಾಯುವ ಮಾತೆಲ್ಲಿಂದ ಬಂತು. ಯಾಕೆ ಅನಂತ ? ಸ್ವಂತದ್ದು ಏನೂ ಇಲ್ಲ ಎಂದಮೇಲೆ ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ. ಸಂತ ಹಿಂದಿದ್ದಾನೆ, ಹಾಗೆಂದೇ ತಾವೋ ಮುಂದಿದೆ. ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ ಎಲ್ಲದರಲ್ಲೂ ಒಂದಾಗಿದೆ. ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ ಪರಿಪೂರ್ಣವಾಗಿ ಮೈದುಂಬಿಕೊಂಡಿದೆ.

ತಾವೋ ತಿಳಿವು #7 : ದುಡಿಯದಿರುವುದು ಸಹಜವಾದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಉತ್ತಮರಿಗೆ ಮಹಾತ್ಮರ ಪಟ್ಟ ಸಿಕ್ಕಾಗ ಉಳಿದ ಕಸುವನ್ನೂ ಕಳೆದುಕೊಳ್ಳುತ್ತಾರೆ ಜನ ಆಸ್ತಿಯನ್ನು ಅಪೂರ್ವ ಎಂದಾಗ ಕನ್ನ ಹಾಕಲು ಹಾತೊರೆಯುತ್ತಾರೆ ಜನ ಸಂತ, ಸ್ವತಃ ಮುಂದೆ ನಿಂತು ; ಜನ ಕಲಿತದ್ದನ್ನು ಖಾಲಿ ಮಾಡಿ ಮೊಗೆದು ಮೊಗೆದು ತುಂಬುತ್ತಾನೆ ಖಾಲಿ ಹೂವುಗಳನ್ನ ಚೂಟಿ ಚೂಟಿ ಬೇರುಗಳಿಗೆ ಉಣಿಸುತ್ತಾನೆ ನೀರು ಅಂಗಿಯೊಳಗೆ ಗುಂಗಿಯ ಹುಳ ಬಿಟ್ಟು ದೊಂಬರಾಟದವನ ಮಾಡುತ್ತಾನೆ ತಬ್ಬಿಬ್ಬು ದುಡಿಯದಿರುವುದು ಸಹಜವಾದಾಗ ಎಲ್ಲ ಉಸಿರಾಟ ನಿರಾತಂಕ.    

ತಾವೋ ತಿಳಿವು #3

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ   ಒಳ್ಳೆಯತನ ಎಷ್ಟು ಒಳ್ಳೆಯದಾಗಬಲ್ಲದು ಎಂಬುದಕ್ಕೆ ನೀರು, ಒಂದು ಉತ್ತಮ ಉದಾಹರಣೆ ~ ಜಗತ್ತಿನ ಪ್ರತೀ ಜೀವವನ್ನು ಬೆಳೆಸುತ್ತದೆಯಾದರೂ ನೀರು, ಎಂದೂ ಯಾವದನ್ನೂ ಕ್ಲೇಮ್ ಮಾಡಿಲ್ಲ. ಎತ್ತರದಲ್ಲಿ ಹುಟ್ಟಿದರೂ ಜನ ಹೆದರುವ, ಬಾಳಲು ನಾಚುವ ತಗ್ಗುಗಳಲ್ಲೂ ನಿರಾತಂಕವಾಗಿ ಮನೆ ಮಾಡುತ್ತದೆ ಇದು ಪಕ್ಕಾ ತಾವೋ ಸ್ವಭಾವ. ~ ನೀರು ಸೂಕ್ಷ್ಮದಲ್ಲಿ ನುಗ್ಗುತ್ತದೆ ಆಳದಲ್ಲಿ ಇಳಿಯುತ್ತದೆ ಒಮ್ಮೆ ಅಂತಃಕರಣ, ಒಮ್ಮೊಮ್ಮೆ ಆಗ್ರಹ ಎಲ್ಲವನ್ನೂ ಒಳಗೊಳ್ಳೋದು ಅನ್ಯಾಯದ ವಿರುದ್ಧ ಆಕ್ರೋಶ […]

ತಾವೋ ತಿಳಿವು #2

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ           ಇರುವುದು ಮತ್ತು ಇರದಿರುವುದು ಹುಟ್ಟಿಸುತ್ತವೆ ಒಂದನ್ನೊಂದು. ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು. ದೂರ – ಸಮೀಪ ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು. ಆಳ ಮತ್ತು ಎತ್ತರ ಸವಾರಿ ಮಾಡುತ್ತವೆ, ಒಂದರ ಮೇಲೊಂದು. ಭೂತ ಮತ್ತು ಭವಿಷ್ಯ ಹಿಂಬಾಲಿಸುತ್ತವೆ, ಒಂದನ್ನೊಂದು. ಆದ್ದರಿಂದಲೇ ಸಂತನ ಕೆಲಸದಲ್ಲಿ ದುಡಿಮೆ ಇಲ್ಲ, ಕಲಿಸುವಿಕೆಯಲ್ಲಿ ಮಾತಿಲ್ಲ. ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ ಹೆಣ ಹೊರುವಲ್ಲಿಯೂ; ತಾಯಿಯಾಗಲೊಲ್ಲ, […]

ತಾವೋ ತಿಳಿವು #1

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅನ್ಯರಿಗೆ ಕಲಿಸಬಹುದಾದ ತಾವೋ ಅನನ್ಯ ಹೇಗಾದೀತು? ಹೆಸರನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದರೆ ಆ ಹೆಸರು ಕಳ್ಳ ಹೆಸರಲ್ಲವೇ? ಹೆಸರಿಲ್ಲದ್ದು ಮಾತ್ರ ಅನನ್ಯ; ಹೆಸರೇ ಸಂಕಟಗಳ ಮಹಾತಾಯಿ. ಕಳಚಿದಾಗ ಕಂಗೊಳಿಸುವ ಅವ್ಯಕ್ತ ಹೊದ್ದಾಗ ಮಾತ್ರ ದಾರಿ ತಪ್ಪಿಸುವ ವ್ಯಕ್ತ; ವ್ಯಕ್ತ, ಅವ್ಯಕ್ತ ಇಬ್ಬರೂ ಕತ್ತಲೂರಿನ ವಾರಸದಾರರು. ಕತ್ತಲೆ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡಾಗಲೇ ತೆರೆದುಕೊಂಡ ಬೆಳಕಿನೂರಿನ ದಾರಿ.