ಪ್ರತಿಯೊಂದು ಜೀವಪರ ತಿಳಿವೂ ಒಟ್ಟು ಮನುಷ್ಯರ ಕೊಡುಗೆ : ಬೆಳಗಿನ ಹೊಳಹು

“ಜ್ಞಾನ ಮಾನವೀಯತೆಗೆ ಸೇರಿದ್ದು. ಅದು ಯಾವುದೇ ದೇಶ – ಧರ್ಮಗಳಿಗೆ ಸೇರಿದ್ದಲ್ಲ…. “ ಜ್ಞಾನಕ್ಕೆ ಗಡಿಗಳಿಲ್ಲ. ಅದು ಯಾವುದೇ ಸಂಪ್ರದಾಯ ಅಥವಾ ಪರಂಪರೆಗೆ ಒಳಪಡುವುದಿಲ್ಲ. ಸೃಷ್ಟಿಯಲ್ಲಿ ಸುಪ್ತವಾಗಿರುವ ತಿಳಿವನ್ನು ಕಂಡುಕೊಳ್ಳುವುದು ಜ್ಞಾನ. ಅದನ್ನು ಭೂಮಿಯ ಮೇಲಿನ ಯಾವ ಭಾಗದಲ್ಲಿ ನೆಲೆಸಿರುವ ಮನುಷ್ಯನೂ ಸಾಧಿಸಬಲ್ಲ. ತಾನು ಪಡೆದ ಜ್ಞಾನವನ್ನು ನಿರೂಪಿಸಿ ಅಥವಾ ಅನ್ವಯಗೊಳಿಸಿ ವಿತರಿಸುವುದು ವಿಜ್ಞಾನ. ಜ್ಞಾನ ವಿಜ್ಞಾನಗಳು ಇಡಿಯ ಮನುಕುಲದ ಆಸ್ತಿ.  ಆದ್ದರಿಂದ “ಇದು ನಮ್ಮದು” ಎಂದು ಬೀಗುವುದಾಗಲೀ “ಇದು ನಮ್ಮದು ಮಾತ್ರ” ಎಂದು ಮುದ್ರೆಯೊತ್ತುವುದಾಗಲೀ ಸರಿಯಲ್ಲ. […]