ಭಗವಂತನಿಗೆ ‘ಲೋಹಿತಾಕ್ಷ’ ಎಂಬ ಹೆಸರೇಕೆ? : ವಿಷ್ಣು ಸಹಸ್ರನಾಮದಿಂದ…

ಭಕ್ತರಿಗಾಗಿ, ದುಷ್ಟ ಶಿಕ್ಷಣಕ್ಕಾಗಿ ಕೆಂದಾವರೆಯಂಥ ಅರಳುಗಣ್ಣು ತೋರುವ ಭಗವಂತನನ್ನೇ ‘ಲೋಹಿತಾಕ್ಷ’ ಎನ್ನುವುದು. ಇದಕ್ಕೆ ಸಂಬಂಧಿಸಿದ ಎರಡು ಘಟನೆಗಳನ್ನು ನೋಡಿ…. ಲೋಕ+ಹಿತ+ಅಕ್ಷ – ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ. ಈ ಹೆಸರಿನ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು ನೋಡಬೇಕಾಗುತ್ತದೆ. ಮಹಾಭಾರತ ಯುದ್ದದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ದ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ […]