ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ, ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕವಾಗಿತ್ತು. ..
ಕಿನ್ನರಿ ಬ್ರಹ್ಮಯ್ಯನ ವಚನಗಳು
ಕಿನ್ನರಿ ಬ್ರಹ್ಮಯ್ಯನು ‘ಮಹಾಲಿಂಗ ತ್ರಿಪುರಾಂತಕ’ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದು, ಸದ್ಯ 18 ದೊರೆತಿವೆ. ಅವುಗಳಲ್ಲಿ ಮಹಾದೇವಿಯಕ್ಕನ ಜೊತೆಗೆ ನಡೆಸಿದ ಸಂವಾದ, ಶಿವನ ಮಹಿಮೆ, ಬಸವಾದಿ ಶರಣರ ವರ್ಣನೆ ಕಂಡುಬರುತ್ತದೆ. ಮಹಾದೇವಿಯಕ್ಕನ ವೈರಾಗ್ಯವನ್ನು ಒರೆಹಚ್ಚಿ ನೋಡಿದವನು ಎಂದು ಹೇಳಲಾಗಿದೆ । ಮಾಹಿತಿ ಕೃಪೆ : https://lingayatreligion.com/
ಘಟ್ಟಿವಾಳಯ್ಯನ ವಚನಗಳು
ಶಿವ ಶರಣ, ವಚನಕಾರ ಘಟ್ಟಿವಾಳಯ್ಯನವರ 6 ವಚನಗಳು ಇಲ್ಲಿವೆ…
ಮಾದಕವ್ಯಸನಿಗಳ ಕಿವಿ ಹಿಂಡುವ ಸರ್ವಜ್ಞನ 8 ವಚನಗಳು : Be positive video
ಪಲಾಯನವಾದಿ ವ್ಯಕ್ತಿಗಳು ಮಾತ್ರ ವ್ಯಸನಿಗರಾಗುತ್ತಾರೆ. ತಮ್ಮನ್ನು ತಾವು ಖುಷಿಯಾಗಿಟ್ಟುಕೊಳ್ಳುವ ಹೊಣೆಯಿಂದ ಪಲಾಯನ, ದುಃಖ ನಿರ್ವಹಿಸಲಾಗದ ಪಲಾಯನ, ಸಂತಸ ನಿಭಾಯಿಸಲಾಗದ ಪಲಾಯನ, ನಷ್ಟ ಭರಿಸಲಾಗದ ಪಲಾಯನ, ಲಾಭದ ಜವಾಬ್ದಾರಿ ಹೊರಲಾಗದ ಪಲಾಯನ… ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ತನ್ನ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಮಾದಕ ದ್ರವ್ಯದ ಮೊರೆ ಹೋಗುವ ಜನರು ವ್ಯಸನಕ್ಕೆ ಅಂಟಿಕೊಂಡುಬಿಡುತ್ತಾರೆ. ಇಂಥವರು ಹಿಂದೆಯೂ ಇದ್ದರು, ಈಗಲಂತೂ ಇದ್ದೇ ಇರುತ್ತಾರೆ; ದುರದೃಷ್ಟವಶಾತ್, ಮುಂದೆಯೂ ಇರುತ್ತಾರೆ. ಹೀಗೆ ವ್ಯಸನಕ್ಕೆ ಅಂಟಿಕೊಂಡ ಬೇಜವಾಬ್ದಾರಿ ಪಲಾಯನವಾದಿಗಳಲ್ಲಿ ನೀವೂ ಒಬ್ಬರಾಗಿದ್ದೀರಾ ನೋಡಿಕೊಳ್ಳಿ. ಅಥವಾ ನಿಮ್ಮ ಸುತ್ತಮುತ್ತ […]