ವಚನ ವಾಚನ : ಅಲ್ಲಮನ ಒಂದು ಬೆಡಗಿನ ವಚನ

  ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ ಗಂಡ ಗಂಡರನರಸಿ ತೊಳಲಿ ಬಳಲುತ್ತೈದಾರೆ ಖಂಡ ಮಂಡಲದೊಳಗೆ ಕಂಡೆನೊಂದು ಚೋದ್ಯವ. ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು ಗುಹೇಶ್ವರನಲ್ಲಿಯೇ ನಿರ್ವಯಲಾಯಿತ್ತು ಭಾವಾರ್ಥ : ಪರಶಿವ ತತ್ತ್ವದಲ್ಲಿ ಉದಯಿಸಿದ ಚಿತ್ ಬ್ರಹ್ಮಾಂಡದಿಂದ ಈ ಪ್ರಪಂಚ ಹುಟ್ಟಿಕೊಂಡಿತು. ಅದರಿಂದ ಹೊರಬಂದ ಜೀವರು ತಮ್ಮ ಮೂಲ ಸ್ವಭಾವವನ್ನೆ ಮರೆತರು, ಮಿಥ್ಯೆಯನ್ನು ನಂಬಿದರು. ತಮ್ಮ ನಿಲುವು ಯಾವುದೆಂಬುದನ್ನೆ ಅರಿಯದೆ ವ್ಯರ್ಥವಾಗಿ ಪರಬ್ರಹ್ಮವನ್ನರಸಿ ತೊಳಲಿಬಳಲತೊಡಗಿದರು.  ಇದು ಅಪೂರ್ಣ ಜ್ಞಾನದ ಪರಿಣಾಮ. ವಿವೇಕನೆಂಬ ಶಿಷ್ಯನು ಜ್ಞಾನವೆಂಬ ದರ್ಪಣದಿಂದ ಪರಬ್ರಹ್ಮವನ್ನು […]

ಅಲ್ಲಮಪ್ರಭುಗಳ ವಚನ : ಬೆಳಗಿನ ಹೊಳಹು

ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ, ಜೀವನವೆಂಬ ಪಯಣದಲ್ಲಿ ಬಂಡಿಯಂತಿರುವ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಈ ವಚನದ ಸಾರಾಂಶ. ಕಾಲುಗಳೆರಡು ಗಾಲಿ ಕಂಡಯ್ಯಾ ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ ಬಂಡಿಯ ಹೊಡೆವವರ್ಯೆವರು ಮಾನಿಸರು ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ ಅದರಿಚ್ಚೆಯನರಿದು ಹೊಡೆಯದಿರ್ದಡೆ ಅದರಚ್ಚು ಮುರಿದಿತ್ತು ಗುಹೇಶ್ವರಾ || ಅಲ್ಲಮಪ್ರಭು || ಈ ವಚನದಲ್ಲಿ ಅಲ್ಲಮಪ್ರಭು ದೇಹವನ್ನು ಬಂಡಿಗೆ ಹೋಲಿಸುತ್ತಾ ಕಾಲುಗಳನ್ನು ಬಂಡಿಯ ಗಾಲಿ ಎಂದು ಬಣ್ಣಿಸಿದ್ದಾರೆ. ಮನುಷ್ಯನ ದೇಹ ಆತ್ಮ ಮತ್ತು ಮನಸ್ಸಿನ ಸಂಬಂಧಗಳು […]

ಕಾಯಕವೇ ಕೈಲಾಸವಾದ ಕಾರಣ… : ಬೆಳಗಿನ ಹೊಳಹು

ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕು; ಲಿಂಗಪೂಜೆಯಾದರೂ ಮರೆಯಬೇಕು; ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ; ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು  | ~ ಆಯ್ದಕ್ಕಿ ಮಾರಯ್ಯ ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ. ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ. ಆದ್ದರಿಂದಲೇ ಎಂಥಾ ಸನ್ನಿವೇಶದಲ್ಲೂ ಬಿಡದೆ ಕಾಯಕ ಮಾಡಬೇಕು. ಮೊದಲ ಆದ್ಯತೆ ಅದಕ್ಕೇ ಮೀಸಲಿರಬೇಕು ಅನ್ನುತ್ತಾನೆ ಶರಣ ಆಯ್ದಕ್ಕಿ ಮಾರಯ್ಯ. ನಾವು ದಿನದ ಪ್ರತಿ ತುತ್ತನ್ನೂ ನಮ್ಮ ದುಡಿಮೆಯ ಫಲವಾಗಿ ಉಣ್ಣುತ್ತೇವೆ. […]

ಪರಮಾತ್ಮ ಜೀವಾತ್ಮವಾಯಿತು : ಬೆಳಗಿನ ವಚನ

ಬಹುತೇಕ ಸೃಷ್ಟಿ ಕಥನ ಆರಂಭವಾಗುವುದೇ ಏಕದಿಂದ. ಬಹುತೇಕ ಭಾರತೀಯ (ವಿಶ್ವಾದ್ಯಂತ ಕೂಡಾ) ಧಾರ್ಮಿಕ, ಆಧ್ಯಾತ್ಮಿಕ, ಜನಪದ ನಂಬಿಕೆಗಳೂ ಏಕದಿಂದ ಅನೇಕವಾಗುವ ಸಿದ್ಧಾಂತವನ್ನೇ ಸಾರುತ್ತವೆ. ಶರಣ ಉರಿಲಿಂಗಪೆದ್ದಿ ಈ ವಚನದಲ್ಲಿ ಹೇಳಿರುವುದು ಅದನ್ನೇ. ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮನಾಯಿತು ಆ ಪರಮಾತ್ಮನೇ ಲಿಂಗ, ಜೀವಾತ್ಮನೇ ಅಂಗ ಸಂಗವೇ ಏಕಾತ್ಮ ತತ್ ಪದವೇ ಪರಮಾತ್ಮ ತ್ವಂ ಪದವೇ ಜೀವಾತ್ಮ ಅಸಿ ಪದವೇ ತಾದಾತ್ಮ್ಯವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ – ಉರಿಲಿಂಗಪೆದ್ದಿ

ನಿಮ್ಮ ನಿಲುವನು ಅನುಭವ ಸುಖಿ ಬಲ್ಲ : ವಚನ ವಿಚಾರ #1

ಈ ವಚನದಲ್ಲಿ ಅಲ್ಲಮ, ಕಲ್ಲಿನ ಕಿಚ್ಚು ಮತ್ತು ಬೀಜ – ವೃಕ್ಷಗಳ ಉದಾಹರಣೆ ಕೊಟ್ಟು, “ಗುಹೇಶ್ವರ, ನಿಮ್ಮ ನಿಲವನ್ನು ಅನುಭವಸುಖಿ ಬಲ್ಲ”ನೆಂದು ಹೇಳುತ್ತಿದ್ದಾನೆ. ಇದರ ಅರ್ಥ ನೇರ ಮತ್ತು ಸ್ಪಷ್ಟ. ಯಾರು ಅಸ್ತಿತ್ವದ (ಅಲ್ಲಮನ ವಚನದಂತೆ ಗುಹೇಶ್ವರ – ಪರಮ ಅಸ್ತಿತ್ವದ) ಅನುಭವವನ್ನು ದಕ್ಕಿಸಿಕೊಳ್ಳಬಲ್ಲರೋ, ಅವರಿಗೆ ಮಾತ್ರ ಅದರ ಇರುವು ಸ್ಪಷ್ಟವಾಗುತ್ತದೆ  ~ ಸಾ.ಹಿರಣ್ಮಯಿ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ? ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ? ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ, ನಿಮ್ಮ ನಿಲವನನುಭವಸುಖಿ ಬಲ್ಲ || ಅಲ್ಲಮನ ವಚನ || […]

ಅಕ್ಕ ಕಂಡ ಚೆನ್ನಮಲ್ಲಯ್ಯನ ಕನಸು…

ಚೆನ್ನಮಲ್ಲಿಕಾರ್ಜುನನ್ನು ಕನಸಿನಲ್ಲಿ ಕಂಡ ಕುರಿತು ಅಕ್ಕ ಮಹಾದೇವಿ ರಚಿಸಿರುವ ಎರಡು ವಚನಗಳು ಇಲ್ಲಿವೆ: ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ.  ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು  ಬಂದೆನ್ನ ನೆರೆದ ನೋಡವ್ವಾ.  ಆತನನಪ್ಪಿಕೊಂಡು ತಳವೆಳಗಾದೆನು.  ಚೆನ್ನಮಲ್ಲಿಕಾರ್ಜುನನ ಕಂಡು  ಕಣ್ಣಮುಚ್ಚಿ ತೆರೆದು ತಳವೆಳಗಾದೆನು.  ~ ಅಕ್ಕ ಕೇಳೌ, ನಾನೊಂದು ಕನಸ ಕಂಡೆ.  ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.  ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು  ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.  ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.  […]