ಒಳಿತು ಮತ್ತು ಸಂಪತ್ತಿಗಾಗಿ ಭದ್ರಲಕ್ಷ್ಮಿಯ ದ್ವಾದಶ ನಾಮ ಸ್ತೋತ್ರಗಳು

ಶ್ರಾವಣ ಮಾಸದ ಶುಕ್ರವಾರಗಳಲ್ಲಿ ಲಕ್ಷ್ಮಿ ವರದ ಹಸ್ತಳಾಗಿ ಶ್ರದ್ಧಾವಂತರನ್ನು ಹರಸುತ್ತಾಳೆ ಎಂಬುದು ಪ್ರತೀತಿ. ಆದ್ದರಿಂದಲೇ ಇಂದು ವರಮಹಾ ಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತದೆ.  ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಜೃಂಭಣೆಯ ಆಚರಣೆಯಲ್ಲ, ಲಕ್ಷ್ಯಪೂರ್ಣ ಧ್ಯಾನ ಮತ್ತು ಪ್ರಯತ್ನ ಮುಖ್ಯ ಎಂಬುದು ಆಕೆಯ ಹೆಸರಲ್ಲೇ ಇದೆ. ಇಂದಿನ ಪೂಜೆ ಆ ನಿಟ್ಟಿನಲ್ಲಿ ನಡೆದರೆ, ನಮ್ಮ ನಮ್ಮ ಪಾಲಿನ ಸಂಪತ್ತು ನಮಗೆ ಅಗತ್ಯವಾಗಿ ದೊರೆಯುವುದು. || ಭದ್ರೈಷಾಮ್ ಲಕ್ಷ್ಮೀರ್ನಿಹಿತಾಧಿ ವಾಚೀ || ಋಗ್ವೇದ 10:71:2 “ಲಕ್ಷ್ಮಿಯ ವಾಕ್ಕಿನಲ್ಲೇ ಒಳಿತು ಬೆಸೆದುಕೊಂಡಿದೆ” ಅನ್ನುತ್ತದೆ ಋಗ್ವೇದ.  ಲಕ್ಷ್ಮಿ ಸ್ವಯಂ […]