ಜಾತಿವ್ಯವಸ್ಥೆಯೇ ಮೂಲ ಕಂಟಕ ~ ಧರ್ಮೋ ರಕ್ಷತಿ ರಕ್ಷಿತಃ #1 : ಅರಳಿಮರ ಸಂವಾದ

ಅಷ್ಟಕ್ಕೂ ಧರ್ಮವು ಸಂಕಷ್ಟಕ್ಕೆ ಸಿಲುಕಿದ್ದಾದರೂ ಎಲ್ಲಿ ಎನ್ನುವುದನ್ನು ಶೋಧಿಸಹೊರಟರೆ, ಇತಿಹಾಸವನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸನಾತನ ಧರ್ಮದ ಎಲ್ಲಾ ಸಂಕಷ್ಟಗಳಿಗೂ, ಸಮಸ್ಯೆಗಳಿಗೂ, ಕಂಟಕಕ್ಕೂ ಮೂಲ ಬೇರಾಗಿರುವುದು ಈ ”ಜಾತಿವ್ಯವಸ್ಥೆ/ತಾರತಮ್ಯ ವ್ಯವಸ್ಥೆ” ಎಂಬ ಸತ್ಯವು ಅರಿವಾಗುತ್ತದೆ. ಜಾತಿ ವ್ಯವಸ್ಥೆಯೇ ಸನಾತನ ಧರ್ಮದ ಎಲ್ಲಾ ಸಮಸ್ಯೆಗಳ ತಾಯಿ ಬೇರು. ಈ ಜಾತಿ ವ್ಯವಸ್ಥೆಯೆಂಬ ಸಮಸ್ಯೆಯ ಮೂಲ ಬೇರನ್ನು ಸುಡದಹೊರತು ಸನಾತನ ಧರ್ಮಕ್ಕೆ ಉಳಿಗಾಲವಿಲ್ಲ ~ ಅಪ್ರಮೇಯ ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಗೀತೆಯ ವಾಕ್ಯ ಧರ್ಮಾಂಧರ ಕೈಸೇರಿ ಬಹಳಷ್ಟು ನಜ್ಜುಗುಜ್ಜಾಗಿದೆ. ಕೃಷ್ಣ […]

ಸಮಾಜ ಸುಧಾರಕ ಆಧ್ಯಾತ್ಮಿಕ ಪಥದರ್ಶಕ : ಶ್ರೀ ನಾರಾಯಣ ಗುರು

“ಪ್ರಪಂಚದ ನಾನಾ ದೇಶಗಳಲ್ಲಿ ಹಲವಾರು ಸಂತರು, ದಾರ್ಶನಿಕರನ್ನು ನಾನು ಭೇಟಿಯಾಗಿದ್ದೇನೆ. ಆದರೆ, ಶ್ರೀ ನಾರಾಯಣ ಗುರುಗಳಂಥ ಮಹಾ ಪುರುಷರನ್ನು ನಾನು ಎಲ್ಲೂ ಕಂಡಿಲ್ಲ!” ಎಂದು ಕವಿ ರವೀಂದ್ರರು ಉದ್ಗರಿಸಿದ್ದರು  ~ ಗಾಯತ್ರಿ ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ. ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು. ಮನುಷ್ಯನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು. ಇರುವುದೊಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು; ಜಾತಿಯ ಬಗ್ಗೆ ಕೇಳಬೇಡ, […]