ಒಂದು ವರ್ಷ ಪೂರೈಸಿದ ‘ಅರಳಿಮರ’ : ಓದುಗರಿಗೆ ವಂದನೆ ಮತ್ತು ನಿವೇದನೆ

ನಮಸ್ಕಾರ. ಕಳೆದ ಶಿವರಾತ್ರಿ ಜಾಗರಣೆಯಂದು (ಫೆ.13ರ ನಡು ರಾತ್ರಿ) ಲೋಕಾರ್ಪಣೆಗೊಂಡ ಅರಳಿಮರ ಜಾಲತಾಣಕ್ಕೆ ವರ್ಷ ತುಂಬಿದೆ. ವರ್ಷ ಪೂರ್ತಿ ಒಂದು ದಿನವೂ ತಪ್ಪದಂತೆ ಲೇಖನಗಳನ್ನು ಪ್ರಕಟಿಸುವ ಉತ್ಸಾಹ ಮತ್ತು ಬಲ ತುಂಬಿದ್ದು ನೀವು. ಹೀಗೆ, ಈವರೆಗೆ ನಾವು ಪ್ರಕಟಿಸಿದ ಲೇಖನಗಳ ಸಂಖ್ಯೆ 1,250 ದಾಟಿದೆ. ಈ ಸಂದರ್ಭದಲ್ಲಿ ಜಾಲತಾಣದ ವಿನ್ಯಾಸವನ್ನು ಬದಲಿಸುವ ಪ್ರಯತ್ನ ಮಾಡಿದ್ದೇವೆ. ವಿಡಿಯೋಗಳು, ಚಿತ್ರಿಕೆಗಳು ಸುಲಭವಾಗಿ ಸಿಗುವಂತೆ ರೂಪಿಸಲಾಗಿದೆ. ಈ ಬದಲಾವಣೆ ನಿಮಗೆ ಇಷ್ಟವಾಗುವುದೆಂಬ ನಂಬಿಕೆ ನಮ್ಮದು. ಮುಂದಿನ ದಿನಗಳಲ್ಲಿ ಜಾಲತಾಣದ ಸ್ವರೂಪ ಮತ್ತಷ್ಟು […]