ಯೋಗ ವಾಸಿಷ್ಠ ರಚಿಸಿದವರು ಯಾರು? ಈ ಕೃತಿ ಯಾವುದರ ಕುರಿತಾಗಿದೆ?

ಆಖ್ಯಾನ – ಉಪಾಖ್ಯಾನಗಳ ಮೂಲಕ ಬ್ರಹ್ಮತತ್ತ್ವವನ್ನು ಬೋಧಿಸುವುದು ಯೋಗ ವಾಸಿಷ್ಠ ಕೃತಿಯ ವೈಶಿಷ್ಟ್ಯ. ಇದಕ್ಕೆ ಮಹಾ ರಾಮಾಯಣ, ಆರ್ಷ ರಾಮಾಯಣ, ವಸಿಷ್ಠ ರಾಮಾಯಣ, ಜ್ಞಾನ ವಸಿಷ್ಠ ರಾಮಾಯಣ ಎಂಬ ಇತರ ಹೆಸರುಗಳೂ ಇವೆ. ಯೋಗ ವಾಸಿಷ್ಠದ ರಚನೆಕಾರ ವಾಲ್ಮೀಕಿ ಮಹರ್ಷಿಗಳು. ರಾಮ ಮತ್ತು ರಘುವಂಶದ ಕುಲಗುರು ವಸಿಷ್ಠರ ನಡುವೆ ನಡೆದ ಆಧ್ಯಾತ್ಮಿಕ ಸಂಭಾಷಣೆಯೇ ಯೋಗ ವಾಸಿಷ್ಠದ ತಿರುಳು. ಜ್ಞಾನ ಮತ್ತು ಸ್ವರೂಪದಲ್ಲಿ ಇದನ್ನು ಭಗವದ್ಗೀತೆಗೆ ಹೋಲಿಸಲಾಗುತ್ತದೆ. ವಿಶೇಷವಾಗಿ ಇದು ಅದ್ವೈತಸಿದ್ಧಾಂತವನ್ನು ಮನದಟ್ಟು ಮಾಡಿಸುವ ಕೃತಿಯಾಗಿದೆ. ‘ಈ ಜೀವನ. […]