ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video

ಸಕಾರಾತ್ಮಕ ಚಿಂತನೆ ಸುಖ ಜೀವನಕ್ಕೆ ಅತ್ಯಗತ್ಯವಾದ ಅಂಶ. ಇದು ನಮ್ಮನ್ನು ಸಂತೃಪ್ತರನ್ನಾಗಿಯೂ ಸಾಹಸಿಗರನ್ನಾಗಿಯೂ ಮಾಡುವುದು. ಸದಾ ಕ್ರಿಯಾಶೀಲವಾಗಿರಿಸುವುದು. ಸಕಾರಾತ್ಮಕ ಚಿಂತನೆ ಹರಡುವ ಧನಾತ್ಮಕ ಕಂಪನಗಳು (positive vibes) ನಮ್ಮ ಸುತ್ತಮುತ್ತಲಿನವರನ್ನೂ ಪ್ರಭಾವಿಸುವುದು.  ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು ಯಾವುವು? ಈ ಕಿರು ಚಿತ್ರಿಕೆಯಲ್ಲಿ ನೋಡೋಣ ಬನ್ನಿ…

ನಾರ್ಸಿಸಿಸ್ಟ್ ಪ್ರೇಮಿಯನ್ನು ಗುರುತಿಸುವುದು ಹೇಗೆ?

ನೀವು ಒಬ್ಬ/ಳು ಪ್ರೇಮಿಯಾಗಿದ್ದು, ನಿಮ್ಮಲ್ಲಿ ನಾರ್ಸಿಸಿಸ್ಟ್ ಗುಣವಿದ್ದರೆ, ನಿಮ್ಮ ಪ್ರೇಮ ಯಾವತ್ತೂ ಸಫಲವಾಗುವುದಿಲ್ಲ. ಏಕೆಂದರೆ ಪ್ರೇಮವು ಪರಸ್ಪರ ಪೂರಕವಾದ ಪ್ರಕ್ರಿಯೆ. ಅಲ್ಲಿ ನೀವು ನಿಮ್ಮ ಕುರಿತು ಕಡಿಮೆ ಮತ್ತು ಪ್ರೇಮಿಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿ ಈ ಕೆಳಗಿನ ಸಂಭಾಷಣೆಯಲ್ಲಿ ಕಾಣಿಸುವಂಥ ಆಲೋಚನೆ ಅಥವಾ ಅಸಹನೆ ಇರುವುದೇ ಆದರೆ, ನೀವು ನಾರ್ಸಿಸಿಸ್ಟ್ ಆಗಿದ್ದೀರಿ ಎಂದರ್ಥ ~ ಅಲಾವಿಕಾ ಈ ಸಂಭಾಷಣೆಯನ್ನು ಗಮನಿಸಿ. ಪ್ರೇಮಿಗಳಿಬ್ಬರು ಮಾತಾಡುತ್ತಾ ಕುಳಿತಿರುತ್ತಾರೆ. ಅವಳ ಫೋನ್’ಗೆ ಅವಳ ಅಮ್ಮನ ಕರೆ ಬರುತ್ತದೆ. ಅವನು : […]

ನಿಮ್ಮೊಳಗೆ ಯಾವ ವಿಶೇಷ ಗುಣ ಅಡಗಿದೆ? ಪ್ರಶ್ನೆಗಳಿಗೆ ಉತ್ತರಿಸಿ, ಪತ್ತೆ ಮಾಡಿ!

ನಿಮ್ಮೊಳಗೆ ಅಡಗಿರುವ ವಿಶೇಷ ಗುಣವನ್ನು ಪತ್ತೆ ಮಾಡಲು ಇಲ್ಲೊಂದು ದಾರಿ ಇದೆ. ಈ ಕೆಳಗಿನ ಪ್ರಶ್ನೆಗಳಿಗೆ 5 ಸೆಕೆಂಡ್’ಗಳಿಗಿಂತ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ ನಿಮ್ಮ ಆಯ್ಕೆಯನ್ನು ಗುರುತು ಮಾಡಿ. ಅನಂತರದ ಸೂಚನೆಗಳನ್ನು ಅನುಸರಿಸಿ…. 1. ಟೀವಿ ಆನ್ ಮಾಡಿದ ಕೂಡಲೆ ನೀವು ಏನನ್ನು ನೋಡಬಯಸುತ್ತೀರಿ? A) ಹದ್ದುಗಳ ಡಾಕ್ಯುಮೆಂಟರಿ B) ಕ್ರೀಡೆ  C) ಆ್ಯಕ್ಷನ್ ಮೂವಿ D) ನ್ಯೂಸ್ 2. ನೀವು ಯಾವುದಾದರೂ ಕ್ರೀಡೆಯಲ್ಲಿ ಆಸಕ್ತರಾಗಿದ್ದೀರಾ? ಅಥವಾ ವ್ಯಾಯಾಮ ಮಾಡುತ್ತೀರಾ? A) ಎರಡೂ ಇಲ್ಲ B) ನಾನು ಕ್ರೀಡೆಯಲ್ಲಿ […]

ಪುರಂದರ ದಾಸರ ವಿಕಸನ ಪಾಠ : ಒಂದು ಕೀರ್ತನೆ

ದಾಸರೆಂದ ಕೂಡಲೇ ಮೊದಲು ನೆನಪಾಗುವುದು ಪುರಂದರ ದಾಸರು. ಗಹನ ಆಧ್ಯಾತ್ಮಿಕ ತತ್ತ್ವಗಳನ್ನು ಹೇಳುತ್ತಲೇ ಸರಳ ಬದುಕಿನ ಪಾಠಗಳನ್ನೂ ತಮ್ಮ ಕೀರ್ತನೆಗಳ ಮೂಲಕ ಬೋಧಿಸಿದ ದಾಸಶ್ರೇಷ್ಠರು ಇವರು. ಭಕ್ತಿಯಲ್ಲಿ ಪುರಂದರ ಭಜನೆ ಮಾಡುತ್ತಲೇ ಪ್ರಭುತ್ವಕ್ಕೆ ಚಾಟಿ ಏಟು ನೀಡುವ ಕೀರ್ತನೆಗಳನ್ನೂ ರಚಿಸಿದವರು. ಧಾರ್ಮಿಕರಾಗಿದ್ದುಕೊಂಡೇ, ಢಂಬಾಚಾರವನ್ನು ಕಟುವಾಗಿ ಟೀಕಿಸಿದವರು. ಪುರಂದರ ದಾಸರು, ‘ಒಳಗಿದ್ದುಕೊಂಡೇ ಕೊಳೆಯನ್ನು ತೊಳೆಯುವ’ ಅಪಾಯಕಾರಿ ಸಾಹಸಕ್ಕೊಂದು ಮಾದರಿ.  ಇಲ್ಲಿ ನೀಡಲಾಗಿರುವ ಕೀರ್ತನೆ ಸಾರ್ವಕಾಲಿಕ ವ್ಯಕ್ತಿತ್ವ ವಿಕಸನದ ಪಾಠದಂತಿದೆ. ಮನುಷ್ಯನ ಅಂತರಂಗ ವಿಕಸ ಸಾಧ್ಯವಾಗಬೇಕೆಂದರೆ, ಜೀವನ ಯಾನಕ್ಕೆ ಸೂಕ್ತವಾದ […]

ಮಾದಕವ್ಯಸನಿಗಳ ಕಿವಿ ಹಿಂಡುವ ಸರ್ವಜ್ಞನ 8 ವಚನಗಳು : Be positive video

ಪಲಾಯನವಾದಿ ವ್ಯಕ್ತಿಗಳು ಮಾತ್ರ ವ್ಯಸನಿಗರಾಗುತ್ತಾರೆ. ತಮ್ಮನ್ನು ತಾವು ಖುಷಿಯಾಗಿಟ್ಟುಕೊಳ್ಳುವ ಹೊಣೆಯಿಂದ ಪಲಾಯನ, ದುಃಖ ನಿರ್ವಹಿಸಲಾಗದ ಪಲಾಯನ, ಸಂತಸ ನಿಭಾಯಿಸಲಾಗದ ಪಲಾಯನ, ನಷ್ಟ ಭರಿಸಲಾಗದ ಪಲಾಯನ, ಲಾಭದ ಜವಾಬ್ದಾರಿ ಹೊರಲಾಗದ ಪಲಾಯನ…  ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ತನ್ನ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಮಾದಕ ದ್ರವ್ಯದ ಮೊರೆ ಹೋಗುವ ಜನರು ವ್ಯಸನಕ್ಕೆ ಅಂಟಿಕೊಂಡುಬಿಡುತ್ತಾರೆ.  ಇಂಥವರು ಹಿಂದೆಯೂ ಇದ್ದರು, ಈಗಲಂತೂ ಇದ್ದೇ ಇರುತ್ತಾರೆ; ದುರದೃಷ್ಟವಶಾತ್, ಮುಂದೆಯೂ ಇರುತ್ತಾರೆ. ಹೀಗೆ ವ್ಯಸನಕ್ಕೆ ಅಂಟಿಕೊಂಡ ಬೇಜವಾಬ್ದಾರಿ ಪಲಾಯನವಾದಿಗಳಲ್ಲಿ ನೀವೂ ಒಬ್ಬರಾಗಿದ್ದೀರಾ ನೋಡಿಕೊಳ್ಳಿ. ಅಥವಾ ನಿಮ್ಮ ಸುತ್ತಮುತ್ತ […]

ನಮಗೆ ನಾವೆ ಹೇಳಿಕೊಳ್ಳುವ 12 ಸುಳ್ಳುಗಳು! : ಮೊದಲ ಕಂತು ~ 1ರಿಂದ 3

ನಮಗೆ ನಾವೆ ಹೇಳಿಕೊಳ್ಳುವ ಸುಳ್ಳುಗಳು ಯಾವತ್ತೂ ಯಾವ ಕಾರಣಕ್ಕೂ ಒಳಿತನ್ನುಂಟು ಮಾಡುವುದಿಲ್ಲ. ಅವುಗಳಿಂದ ಕೆಡುಕು ಕಟ್ಟಿಟ್ಟ ಬುತ್ತಿ. ನಮಗೆ ನಾವೆ ಹೇಳಿಕೊಳ್ಳುವ ಸುಳ್ಳು ನಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಕತ್ತರಿಸಿ  ಹಾಕುವ ಚಿನ್ನದ ಕತ್ತರಿ ~ ಅಲಾವಿಕಾ ಸುಳ್ಳು ಒಂದು ಥರದ ವ್ಯಸನ. ಅದೊಂಥರಾ ಆಯಾ ಕ್ಷಣವನ್ನು ತಳ್ಳಿ ಹಾಕುವ ನಶೆ. ಹೇಗೋ ಆ ಘಳಿಗೆ, ಆ ಘಟನೆಯನ್ನು ದಾಟಿಬಿಟ್ಟರೆ ಸಾಕೆಂದು ನಾವು ಧರಿಸುವ ಭ್ರಮೆಯ ರೆಕ್ಕೆ. ಇತರರಿಗೆ ಸುಳ್ಳು ಹೇಳುವುದು ಒಂದು ಥರವಾದರೆ, ನಮಗೆ ನಾವೇ ಹೇಳಿಕೊಳ್ಳು […]