ರಮಣ ಮಹರ್ಷಿಗಳ ಪ್ರಶ್ನೋತ್ತರ ಮಾಲೆ ~ ಭಾಗ 1

ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ… ಪರಿವ್ರಾಜಕ: ಇಡಿಯ ವಿಶ್ವವೇ ಭಗವಂತನೆಂದು ಅರಿಯುವುದು ಹೇಗೆ? ರಮಣ ಮಹರ್ಷಿ : ನಿನ್ನಲ್ಲಿ ವಿವೇಕದ ದೃಷ್ಟಿಯನ್ನು ಬೆಳೆಸಿಕೊಂಡರೆ ಸಮಸ್ತೆ ವಿಶ್ವವೇ ಭಗವಂತನೆಂದು ತಿಳಿಯುವೆ. ಬ್ರಹ್ಮವನ್ನು ತಿಳಿಯದೆ ಅವನ ಸರ್ವವ್ಯಾಪಕ ತತ್ತ್ವವನ್ನು ಹೇಗೆ ತಿಳಿಯುವೆ? ಸಂದರ್ಶಕ: ಇದು ಹೇಗೆ ಅನುಭವಕ್ಕೆ ಬರುತ್ತದೆ? ರಮಣ ಮಹರ್ಷಿ : ಯಾರು […]

ವಿವೇಕ ವಿಚಾರ : ಹೃದಯವಂತಿಕೆಯ ಅಪಾರ ಶಕ್ತಿ

ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಇರಬೇಕಾದುದು ಹೃದಯವಂತಿಕೆ. ಬುದ್ಧಿಯಲ್ಲಿ ಮತ್ತು ವಿಚಾರ ಶಕ್ತಿಯಲ್ಲಿ ಏನಿದೆ? ಕೆಲವು ಹೆಜ್ಜೆಗಳು ಹೋಗಿ ಅಲ್ಲಿ ನಿಲ್ಲುವವು. ಸ್ಫೂರ್ತಿ ಬರುವುದು ಹೃದಯದಿಂದ. ಪ್ರೇಮವು ಅಸಾಧ್ಯವಾದ ಬಾಗಿಲನ್ನೂ ತೆರೆಸುವುದು. ಪ್ರಪಂಚದ ರಹಸ್ಯಕ್ಕೆಲ್ಲ ಪ್ರೇಮವೇ ಬಾಗಿಲು. ವಿಶ್ವದಷ್ಟು ವಿಶಾಲವಾಗಿ ನಿಮ್ಮ ಹೃದಯ ಮತ್ತು ಆಕಾಂಕ್ಷೆಗಳು ವಿಕಸಿತವಾಗಲಿ. ವಿಶಾಲಮತಿ ಹಾಗೂ ಶ್ರದ್ಧೆಗಳು ನಿಮ್ಮೆಲ್ಲರಲ್ಲೂ ಇರುವುದೆಂದು ನಾನು ಊಹಿಸುತ್ತೇನೆ. ಸಾಗರದಷ್ಟು ಆಳವಾಗಿ, ಆಗಸದಷ್ಟು ವಿಶಾಲವಾಗಿ ಇರಬೇಕು ನಿಮ್ಮ ಹೃದಯ. ಸತ್ಯ, ಪ್ರೇಮ ಮತ್ತು ನಿಷ್ಕಾಪಟ್ಯದ ಎದುರಿಗೆ ಯಾವುದೂ ನಿಲ್ಲಲಾರದು. ನೀವು […]