ನೂರು ಕೈಗಳಿಂದ ದುಡಿದು ಸಾವಿರ ಕೈಗಳಿಂದ ಹಂಚಿ : ಅಥರ್ವ ವೇದ

“ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ” – ನೂರು ಕೈಗಳಿಂದ ದುಡಿಯಿರಿ, ಸಾವಿರ ಕೈಗಳಿಂದ ಹಂಚಿರಿ ಅನ್ನುತ್ತದೆ ಅಥರ್ವ ವೇದ.  ನಮ್ಮಲ್ಲಿ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನೂ ದುಡಿಮೆಯಲ್ಲಿ ವಿನಿಯೋಗಿಸಬೇಕು. ಶಕ್ತಿಯನ್ನು ಪೋಲು ಮಾಡಬಾರದು. ಹೀಗೆ ದುಡಿದು ಗಳಿಸಿದ್ದನ್ನು ಸಹಜೀವಿಗಳೊಡನೆ ಹಂಚಿಕೊಳ್ಳಬೇಕು.  ನಮ್ಮ ಬುದ್ಧಿಶಕ್ತಿ, ನಮ್ಮ ತೋಳ್ಬಲಗಳೆಲ್ಲವೂ ಹೀಗೆ ಸ್ವಹಿತ ಮತ್ತು ಜನಹಿತಕ್ಕೆ ವಿನಿಯೋಗವಾಗಬೇಕು.  ಇದನ್ನೇ ಅಥರ್ವ ವೇದ ಹೇಳುತ್ತಿರುವುದು; “ನೂರು ಕೈಗಳಿಂದ ದುಡಿಯಿರಿ, ಸಾವಿರ ಕೈಗಳಿಂದ ಹಂಚಿರಿ” – “ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ” (3:24:5) ಎಂದು.  “ಆದ್ದರಿಂದ, […]