ಧೃತರಾಷ್ಟ್ರ ವಿದುರನಿಂದ ಸಲಹೆ ಪಡೆದ 3 ಸಂದರ್ಭಗಳು; ಅದರಿಂದ ನಾವು ಕಲಿಯಬಹುದಾದ ಪಾಠ

ಮೂರು ಬಾರಿ ವಿದುರನಿಂದ ಉಪದೇಶ ಪಡೆದ ಧೃತರಾಷ್ಟ್ರ, ಮೊದಲ ಬಾರಿ ಅದನ್ನು ತಿರಸ್ಕರಿಸಿದ್ದ. ಎರಡನೆ ಬಾರಿ ಅನುಸರಿಸಲಾಗದ ಅಸಹಾಯಕತೆ ತೋರಿಕೊಂಡಿದ್ದ. ಮೂರನೆ ಬಾರಿ ಅದನ್ನು ಸ್ವೀಕರಿಸಿ, ಶಾಂತಿಯನ್ನೂ ನೆಮ್ಮದಿಯ ಅಂತ್ಯವನ್ನೂ ಪಡೆದ ~ ಸಾ. ಹಿರಣ್ಮಯಿ ಮಹಾಭಾರತದಲ್ಲಿ ವಿದುರನ ಪಾತ್ರ ಮಹತ್ವದ್ದು. ದಾಸೀಪುತ್ರನಾದ ಕಾರಣದಿಂದ ರಾಜನೆಂದು ಗುರುತಿಸಿಕೊಳ್ಳದೆ ಹೋದರೂ ಕುರುಕುಲವನ್ನು ಸಮರ್ಥವಾಗಿ ಮುನ್ನಡೆಸಲು ಮಾರ್ಗದರ್ಶನ ನೀಡುವ ಮಹತ್ತರ ಜವಾಬ್ದಾರಿ ವಿದುರನ ಮೇಲಿತ್ತು. ಧೃತರಾಷ್ಟ್ರ ಅಧಿಕಾರ ವಹಿಸಿಕೊಂಡ ಮೇಲೆ ರಾಜಕಾರ್ಯಗಳಲ್ಲದೆ ವೈಯಕ್ತಿಕವಾಗಿ ವಿದುರನಿಂದ ಸಲಹೆ ಕೇಳಿದ ಮತ್ತು ತಿರಸ್ಕರಿಸಿದ […]