ಸೃಷ್ಟಿಯ ಒಳಹೆಣಿಗೆಯಲ್ಲೊಂದು ಕೊಂಡಿ : ವಿಶ್ವಪ್ರಜ್ಞಾವಂತಿಕೆ ~ ಭಾಗ 2

ನಾವು ವ್ಯಕ್ತಿ ಹಾಗೂ ವಿಶ್ವ ಎಂಬ ಎರಡು ತುದಿಗಳ ನಡುವಿನ ಜಾಲದಲ್ಲಿ ಇದ್ದೇವೆ. ವಿಶ್ವ ಪ್ರಜ್ಞೆಯನ್ನು ಆದಿ ಮೂಲದ ಗಂಟು ಎಂದು ಕೊಂಡರೆ, ನಮ್ಮೆಲ್ಲರ ಪ್ರಜ್ಞೆಗಳು ಅದರಿಂದ ಹೊರಟ ಎಳೆಗಳು. ಅಥವಾ ನಾವೆಲ್ಲ ಎಳೆಗಳು ಸೇರಿ ಆ ಗಂಟು ಉಂಟಾಗಿದೆ. ಆದ್ದರಿಂದಲೇ ಈ ಎರಡರಲ್ಲಿ ಯಾವುದೊಂದರ ಮೇಲೆ ಬೀರುವ ಪರಿಣಾಮ ಮತ್ತೊಂದನ್ನು ಪ್ರಭಾವಿಸದೆ ಇರಲಾರದು ~ ಆನಂದಪೂರ್ಣ ಹಿಂದಿನ ಭಾಗವನ್ನು ಇಲ್ಲಿ ಓದಿ ವಿಶ್ವಪ್ರಜ್ಞೆ ಅಸ್ತಿತ್ವದ ಯೋಚನಾ ತರಂಗಗಳ ಒಟ್ಟು ಮೊತ್ತ, ಹಾಗೆಯೇ ಮೂಲ ಸ್ರೋತವೂ ಕೂಡ. […]

ವಿಶ್ವಪ್ರಜ್ಞಾವಂತಿಕೆ : ವಿಕಸನದ ಪರಮೋನ್ನತ ಹಂತ ~ ಭಾಗ 1

  ಅಹಂಪ್ರಜ್ಞೆ (ದೇಹದ ಗುರುತಿನದ್ದು) ವಿಕಸನಗೊಂಡು ಸ್ವಯಂಪ್ರಜ್ಞೆಯಾಗಿಯೂ (ಆತ್ಮದ ತಿಳಿವಿನದ್ದು), ಸ್ವಯಂಪ್ರಜ್ಞೆಯು ವಿಕಸಗೊಂಡು ವಿಶ್ವಪ್ರಜ್ಞೆಯಾಗಿಯೂ ಬೆಳೆದಾಗ ವ್ಯಕ್ತಿಯು ಜಗತ್ತಿನ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವನಾಗುತ್ತಾನೆ. ~ ಆನಂದಪೂರ್ಣ ಜೇನುಹುಳುಗಳ ಸಂತತಿ ಅವಸಾನಗೊಂಡರೆ ಮಾನವ ಜಗತ್ತು ನಾಲ್ಕು ವರ್ಷಗಳಲ್ಲಿ ಇಲ್ಲವಾಗಿಹೋಗುತ್ತದೆ ಎಂದಿದ್ದರು ಐನ್‍ಸ್ಟೀನ್. ಈ ಹೇಳಿಕೆಯ ವೈಜ್ಞಾನಿಕ ಸತ್ಯಾಸತ್ಯತೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದವು. ವಾದ-ವಿವಾದಗಳೂ ಉಂಟಾದವು. ಐನ್‍ಸ್ಟೀನ್ ಹೇಳಿಕೆಯನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಯಾವ ಕೀಟ ಅಥವಾ ಜೀವಿಯ ಅವಸಾನ ಜಗತ್ತಿನಲ್ಲಿ ಯಾವ ಬದಲಾವಣೆ ಉಂಟುಮಾಡುವುದು ಎಂಬ ವ್ಯಾಪಕ ಅಧ್ಯಯನ ಆರಂಭಗೊಂಡಿತು. […]