‘ಕೌಸಲ್ಯಾ ಸುಪ್ರಜಾ ರಾಮ’ ಸಂಪೂರ್ಣ ಸುಪ್ರಭಾತ ಮತ್ತು ರಚನೆಕಾರರ ಮಾಹಿತಿ…

ಈಗ ನಾವು ಕೇಳುವ ‘ಕೌಸಲ್ಯಾ ಸುಪ್ರಜಾ ರಾಮ’ ಎಂದು ಆರಂಭವಾಗುವ ‘ವೆಂಕಟೇಶ ಸುಪ್ರಭಾತ’ ಸಂಪೂರ್ಣವಾಗಿ ವಿಶ್ವಾಮಿತ್ರನಿಂದ ಹೇಳಲ್ಪಟ್ಟಿದ್ದು ಅಥವಾ ವಾಲ್ಮೀಕಿಯಿಂದ ರಚಿಸಲ್ಪಟ್ಟಿದ್ದಲ್ಲ. ಇದನ್ನು ರಚಿಸಿದವರು… ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸ೦ಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ || “ಕೌಸಲ್ಯೆಯ ಸತ್ಪುತ್ರನಾದ ಶ್ರೀರಾಮನೇ, ಪೂರ್ವದಿಕ್ಕಿನಲ್ಲಿ ಪ್ರಾತಃಕಾಲ ಕಾಣುತ್ತಿದೆ, ಏಳು, ಎಲೈ ನರಶ್ರೇಷ್ಠನೆ, ದೇವತಾರಾಧನೆ ಮೊದಲಾದ ಕಾರ್ಯಗಳನ್ನು ಮಾಡು” ಈ ಸುಪ್ರಭಾತ ಶ್ಲೋಕ ರಾಮಾಯಣ ಬಾಲಕಾಂಡದಲ್ಲಿ (1.23.2) ಬರುತ್ತದೆ. ಇಲ್ಲಿ ವಿಶ್ವಾಮಿತ್ರ ಋಷಿಯು ಕಾಡಿನಲ್ಲಿ ಮಲಗಿದ್ದ […]

ಗಾಯತ್ರಿ ಮಂತ್ರ : ನೀವು ತಿಳಿದಿರಬೇಕಾದ 8 ಮೂಲಭೂತ ಸಂಗತಿಗಳು

ಸನಾತನ ಧರ್ಮದಲ್ಲಿ ಅತಿಹೆಚ್ಚು ಪ್ರಾಮುಖ್ಯತೆಯೊಡನೆ ಹೇಳಲ್ಪಡುವ ಮಂತ್ರ ‘ಗಾಯತ್ರಿ ಮಂತ್ರ’. ಈ ಮಂತ್ರ ಮೂಲಭೂತ ಸಂಗತಿಗಳನ್ನು ಮತ್ತು ಗಾಯತ್ರಿ ಮಾತೆಯ ಕುರಿತು ಕೆಲವು ಮಾಹಿತಿಗಳನ್ನು 8 ಚಿತ್ರಿಕೆಗಳ ಮೂಲಕ ಇಲ್ಲಿ ನೀಡಲಾಗಿದೆ.  1 ಮಂತ್ರ ಮತ್ತು ಅರ್ಥ 2. ಗಾಯತ್ರಿ… ಸಾವಿತ್ರಿ… 3. ಹಂಸವಾಹಿನಿ 4. ಧ್ಯಾನ ರೂಪ 5. ವಿಶ್ವಾಮಿತ್ರನೇ ದ್ರಷ್ಟಾರ 6. ಋಗ್ವೇದ ಮೂಲ 7. ಎಲ್ಲೆಲ್ಲಿ ಪ್ರಸ್ತಾಪಗೊಂಡಿದೆ…? 8. ಪುರಾಣ ಕಥೆ

‘ತ್ರಿಶಂಕು’ ಯಾರು? ‘ತ್ರಿಶಂಕು ಸ್ವರ್ಗ’ ಎಂದರೇನು?

ಆಚೆಗೂ ಸಲ್ಲದೆ, ಈಚೆಗೂ ಸಲ್ಲದೆ ನಡುವೆ ಸಿಲುಕಿಕೊಂಡವರ ಪಾಡು ನೋಡಿ ‘ತ್ರಿಶಂಕು ಸ್ವರ್ಗ’ ‘ತ್ರಿಶಂಕುವಿನ ಸ್ಥಿತಿ’ ಎಂದು ಹೇಳುವುದು ರೂಢಿಯಲ್ಲಿದೆ. ಈ ನುಡಿಗಟ್ಟು ಚಾಲ್ತಿಗೆ ಬಂದುದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ ~ ಗಾಯತ್ರಿ ಇಕ್ಷ್ವಾಕು ವಂಶದಲ್ಲಿ ತ್ರಿಶಂಕು ಎಂಬ ರಾಜನಿದ್ದ. ಅವನಿಗೆ ಶರೀರದ ಮೇಲಿನ ವ್ಯಾಮೋಹದಿಂದ ಸಶರೀರವಾಗಿ ಸ್ವರ್ಗ ಪ್ರವೇಶ ಮಾಡಬೇಕೆಂಬ ಬಯಕೆಯಾಯಿತು. ತಕ್ಷಣವೇ ತನ್ನ ಕುಲಗುರುಗಳಾದ ವಸಿಷ್ಠರಿಗೆ ತನ್ನ ಆಸೆಯನ್ನು ತಿಳಿಸಿದ. ಆಗ ವಸಿಷ್ಠರು, “ನೀನು ಎಷ್ಟೇ ಶ್ರೇಷ್ಠ ರಾಜನಾದರೂ, ಎಷ್ಟೇ ಶ್ರೇಷ್ಠ ಯಾಗಗಳನ್ನುಮಾಡಿದ್ದರೂ, ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಧರ್ಮಶಾಸ್ತ್ರದಲ್ಲಿ ಹೇಳಿಲ್ಲ.ಯಾರಾದರೂ ಸರಿ, ಶರೀರವನ್ನು ತ್ಯಜಿಸುವುದು ಅನಿವಾರ್ಯ, ಅದರ ನಂತರವೇಸ್ವರ್ಗ ಲೋಕದ ಪ್ರವೇಶ ಸಿಗುತ್ತದೆ. ಹಾಗಾಗಿ ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಸಾಧ್ಯ” ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು. ಆಗ ತ್ರಿಶಂಕು ವಸಿಷ್ಠರ ಮಕ್ಕಳ ಬಳಿ ಹೋಗಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ. ಅವರು, “ನಮ್ಮ ತಂದೆಯವರು ಸಾಧ್ಯವಿಲ್ಲ ಎಂದ ಮೇಲೆ ಅದು ಸಾಧ್ಯವಿಲ್ಲ, ಯಾರೂ ಸಶರೀರವಾಗಿ ಸ್ವರ್ಗ ಸೇರಲು ಆಗುವುದಿಲ್ಲ” ಎಂದು ಹೇಳಿಬಿಟ್ಟರು. ಅಸಮಾಧಾನಗೊಂಡ ತ್ರಿಶಂಕು ತಾನು ಬೇರೆ ಗುರುಗಳನ್ನು ಹುಡುಕಿ ತನ್ನ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತೇನೆ ಎಂದು ಹೇಳಿ ಹೋರಟುಹೋದ. ಆಗ ಅವರು, “ನೀನು ನಮ್ಮ ತಂದೆಯಾದ, ನಿನ್ನ ಗುರುಗಳೂ ಆದ ವಸಿಷ್ಠರ ಮಾತನ್ನು ಧಿಕ್ಕರಿಸಿ ಮತ್ತೊಬ್ಬ ಗುರುವನ್ನು ಹುಡುಕಲು ಹೊರಟಿರುವೆ. ನಿನ್ನಿಂದ ಗುರುವಾಕ್ಯ ಉಲ್ಲಂಘನೆ ಮತ್ತು ಅವಮಾನ ನಡೆದಿದೆ. ಅದಕ್ಕೆ […]