ನಾಲ್ಕು ಯೋಗಗಳು ಮತ್ತು ಪತಂಜಲಿಯ ಅಷ್ಟಾಂಗ ಯೋಗ

ಇಂದು (ಜೂನ್ 21) ವಿಶ್ವ ಯೋಗ ದಿನ. ಈ ಸಂದರ್ಭದಲ್ಲಿ ನಾಲ್ಕು ಯೋಗಗಳು ಮತ್ತು ಪತಂಜಲಿಯ ಅಷ್ಟಾಂಗ ಯೋಗ ಸೂತ್ರದ ಸರಳ ವಿವರಣೆ ಇಲ್ಲಿ ನೀಡಲಾಗಿದೆ.  ಕಪಿಲನ ಸಾಂಖ್ಯ ಮತ್ತು ಪತಂಜಲಿಯ ಯೋಗಪದ್ಧತಿಗಳು ಭಾರತವು ಜಗತ್ತಿಗೆ ನೀಡಿದ ಉತ್ಕೃಷ್ಟ ಕೊಡುಗೆಗಳಾಗಿವೆ. ಸಾಂಖ್ಯ ದರ್ಶನವಾದರೆ, ಯೋಗ ಅನುಷ್ಠಾನ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಪ್ರಕೃತಿ ಎನ್ನುವುದು ವಿಶ್ವದ ಮೂಲವಸ್ತುಗಳ ಸಂಗ್ರಹ ಎನ್ನುವುದು ಈ ಎರಡೂ ಶಾಸ್ತ್ರಗಳ ಕಾಣ್ಕೆಯಾಗಿದೆ.  ಪುರುಷರು(ಮನುಷ್ಯರು ಅಥವಾ ಜೀವಾತ್ಮರು) ಪ್ರೇರಕ ಶಕ್ತಿಗಳಂತೆ ವರ್ತಿಸುತ್ತಾರೆ. ಜೀವಿಗಳ ಉಪಸ್ಥಿತಿಯಲ್ಲಿ  ಈ ಪ್ರಕೃತಿ […]