ಭಗವಂತನಿಗೆ ‘ಲೋಹಿತಾಕ್ಷ’ ಎಂಬ ಹೆಸರೇಕೆ? : ವಿಷ್ಣು ಸಹಸ್ರನಾಮದಿಂದ…

ಭಕ್ತರಿಗಾಗಿ, ದುಷ್ಟ ಶಿಕ್ಷಣಕ್ಕಾಗಿ ಕೆಂದಾವರೆಯಂಥ ಅರಳುಗಣ್ಣು ತೋರುವ ಭಗವಂತನನ್ನೇ ‘ಲೋಹಿತಾಕ್ಷ’ ಎನ್ನುವುದು. ಇದಕ್ಕೆ ಸಂಬಂಧಿಸಿದ ಎರಡು ಘಟನೆಗಳನ್ನು ನೋಡಿ…. ಲೋಕ+ಹಿತ+ಅಕ್ಷ – ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ. ಈ ಹೆಸರಿನ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು ನೋಡಬೇಕಾಗುತ್ತದೆ. ಮಹಾಭಾರತ ಯುದ್ದದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ದ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ […]

ಭಗವಾನ್ ವಿಷ್ಣುವನ್ನು ‘ವಷಟ್ಕಾರ’ ಎಂದೇಕೆ ಕರೆಯುತ್ತಾರೆ? : ವಿಷ್ಣುಸಹಸ್ರನಾಮದ ವಿಶಿಷ್ಟ ಹೆಸರುಗಳು #1

ಭಗವಂತನನ್ನು ಹಲವು ಹೆಸರುಗಳಿಂದ ಸ್ತುತಿಸುವಾಗ ನಮಗೆ ಆ ಹೆಸರನ್ನು ಏಕೆ ಬಳಸುತ್ತಿದ್ದೇವೆ ಎಂಬ ಅರಿವಿದ್ದರೆ, ನಮ್ಮ ಪ್ರಾರ್ಥನೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ…. ವಿಷ್ಣು ಸಹಸ್ರನಾಮವು ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ  ಎಂದು ಆರಂಭವಾಗುತ್ತದೆ. ಇಲ್ಲಿ ವಿಶ್ವ, ವಿಷ್ಣು, ವಷಟ್ಕಾರ ಮತ್ತು ಭೂತಭವ್ಯಭವತ್ಪ್ರಭು – ಎಂಬ ನಾಲ್ಕು ಹೆಸರುಗಳಿವೆ. ಇಲ್ಲಿ ಮೂರನೆ ಹೆಸರಾಗಿ ಬರುವ  ವಷಟ್ಕಾರ ಎನ್ನುವ ಹೆಸರಿನ ಅರ್ಥವೇನು ನೋಡೋಣ…  ವಷಟ್ಕಾರ ಎಂದು ಆರು ಮುಖಗಳಿರುವ ಭಗವಂತ. ಜ್ಞಾನ, ಶಕ್ತಿ, ಬಲ – ರಕ್ಷಣೆ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಇವೇ […]