ದೊರೆ ‘ವೂ’ ಮತ್ತು ಬೋಧಿಧರ್ಮ : ಕಿರು ಸಂಭಾಷಣೆ

ಚೀನಾದ ದೊರೆ ವೂ, ಬೌದ್ಧ ಧರ್ಮ ಪ್ರಚಾರಕ್ಕಾಗಿ ದಕ್ಷಿಣ ಭಾರತದಿಂದ ಆಗಮಿಸಿದ್ದ ಬೋಧಿಧರ್ಮನ ಬಗ್ಗೆ ಸಾಕಷ್ಟು ಕೇಳಿದ್ದ. ಆಗ ಚೀನಾದಲ್ಲಿ ಸುಪ್ರಸಿದ್ಧನಾಗಿದ್ದ ಅಧ್ಯಾತ್ಮ ಗುರು ಹ್ಯೊ ಕಿ ಕೂಡಾ ಬೋಧಿಧರ್ಮನಿಂದ ಜ್ಞಾನ ಪಡೆದಿದ್ದ. ಹೀಗಾಗಿ ವೂ ಬೋಧಿಧರ್ಮನನ್ನು ಭೇಟಿ ಮಾಡಿ ತನ್ನ ಅಶಾಂತಮನಸ್ಕತೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಹೀಗಿದೆ: ವೂ : ಬೋಧಿಧರ್ಮ, ನನ್ನ ಮನಸ್ಸು ತುಂಬಾ ಅಶಾಂತವಾಗಿದೆ. ದಯವಿಟ್ಟು ನನ್ನ ಮನಸ್ಸನ್ನು ಶಾಂತಗೊಳಿಸು ಬೋಧಿಧರ್ಮ : ಆಗಲಿ. ನೀನು ಬೆಳಗಿನ […]