ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಪುತ್ರಕನ ಜನನ

ಈವರೆಗೆ…. ಶಪಿತ ಪುಷ್ಪದಂತನು ಕೌಶಾಂಬಿಯಲ್ಲಿ ವರರುಚಿ ಎನ್ನುವ ಹೆಸರಿನಿಂದ ಜನಿಸಿದನು. ವಿಂಧ್ಯಾಟವಿಯಲ್ಲಿ ಕಾಣಭೂತಿ ಎಂಬ ಹೆಸರಿನ ಪಿಶಾಚವಾಗಿ ಜೀವಿಸುತ್ತಿದ್ದ ಶಪಿತ ಯಕ್ಷ ಸುಪ್ರತೀಕನನ್ನು ಭೇಟಿಯಾದನು. ಕಾಣಭೂತಿಯ ಕೋರಿಕೆಯಂತೆ ತನ್ನ ವರರುಚಿಯ ಜನ್ಮದ ವೃತ್ತಾಂತವನ್ನು ಹೇಳತೊಡಗಿದನು. ವರರುಚಿಗೆ ವ್ಯಾಡಿ ಮತ್ತು ಇಂದ್ರದತ್ತರ ಸಂಪರ್ಕ ದೊರೆತು, ಮೂವರೂ ವರ್ಷೋಪಾಧ್ಯಾಯ ಪಂಡಿತನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಮತ್ತು ವರರುಚಿಯು ವರ್ಷೊಪಾಧ್ಯಾಯನಲ್ಲಿ ಅವರು ನೆಲೆಸಿದ್ದ ಪಾಟಲೀಪುತ್ರ ನಗರದ ಕಥೆಯನ್ನು ಕೇಳಲಾಗಿ, ಗುರುವು ಹೇಳಲು ಆರಂಭಿಸಿದನು. ಬಹಳ ಹಿಂದೆ ಕಾಂಚನಪಾತ ಎಂಬ ದೇವಲೋಕದ ಆನೆಯು ಉಶೀನರ […]