ವಿಚಾರಶೀಲತೆ: ಕುರುಡು ನಂಬಿಕೆಯ ಕಗ್ಗತ್ತಲಲ್ಲಿ ದಾರಿ ತೋರುವ ಕಂದೀಲು ~ ಯೋಗ ವಾಸಿಷ್ಠ #2

“ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ” ಅನ್ನುತ್ತದೆ ಯೋಗ ವಾಸಿಷ್ಠ ~ ಗಾಯತ್ರಿ ನಿತ್ಯಂ ವಿಚಾರಯುಕ್ತೇನ ಭವಿತವ್ಯಂ ಮಹಾತ್ಮನಾ | ತಥಾಂಧಕೂಪೇ ಪತತಾಂ ವಿಚಾರೋ ಹ್ಯವಲಂಬನಮ್ || ಯೋಗ ವಾಸಿಷ್ಠ || ಅರ್ಥ : ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. […]

ಭಕ್ತಿಯ ಭಂಡಾರ ಶರಣ ಗುರು ಬಸವೇಶ್ವರ

ಬಸವಣ್ಣನವರನ್ನು ಮೊದಲನೆಯದಾಗಿ ಧಾರ್ಮಿಕ ಕ್ರಾಂತಿಯ ಹರಿಕಾರನಾಗಿ ಗುರುತಿಸಲಾಗುತ್ತದೆ. ಬಸವಣ್ಣನವರ ಕ್ರಾಂತಿಯ ಮೂಲ ಬೇರುಗಳು ಇರುವುದು ಅಧ್ಯಾತ್ಮ, ವೈಚಾರಿಕ ಧಾರ್ಮಿಕತೆ ಹಾಗೂ ಭಕ್ತಿಯಲ್ಲಿ.  ಬಸವಣ್ಣ ‘ಕ್ರಾಂತಿ ಯೋಗಿ’ ಹೇಗೋ ಹಾಗೇ ‘ಭಕ್ತಿ ಭಂಡಾರಿ’ಯೂ ಹೌದು. ಸಾಮಾನ್ಯವಾಗಿ ಭಕ್ತಿ ಮತ್ತು ಕ್ರಾಂತಿ ವಿರುದ್ಧ ದಿಕ್ಕಿನತ್ತ ಸಾಗುವ ಸಂಗತಿಗಳು ಎಂಬ ತಿಳಿವಳಿಕೆಯಿದೆ. ಏಕೆಂದರೆ, ಭಕ್ತಿ ಇರುವಲ್ಲಿ ವಿಚಾರಕ್ಕೆ ಅವಕಾಶ ಇರುವುದಿಲ್ಲ. ಭಕ್ತಿ ಎಂದರೆ ಶರಣಾಗತಿ. ಶರಣಾಗತರಾದವರು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ವಿಚಾರ ಮಾಡದೆ, ಪ್ರಶ್ನೆ ಎತ್ತದೆ ಕ್ರಾಂತಿ ಸಂಭವಿಸುವುದು ಹೇಗೆ? ಅದಕ್ಕೇ […]