ಒಂಟಿತನ : ನಮಗೆ ನಾವೇ ಮಾಡಿಕೊಳ್ಳುವ ಗಾಯ! ~ ಅಧ್ಯಾತ್ಮ ಡೈರಿ

ಒಂಟಿತನದ ದುಃಖ ಒಂದು ರೀತಿಯಲ್ಲಿ, ನಮಗೆ ನಾವೇ ಗಾಯ ಮಾಡಿಕೊಂಡು ಅದರ ಉರಿ ತಗ್ಗಿಸಲು ನೆಕ್ಕುತ್ತಾ, ಗಾಯದ ರಕ್ತದ ರುಚಿಯನ್ನು ಸುಖಿಸುವಂತೆ! ~ ಅಲಾವಿಕಾ ಮನುಷ್ಯ ಸಂಘ ಜೀವಿ. ಆದ್ದರಿಂದಲೇ ಒಂಟಿತನ ಮನುಷ್ಯರಲ್ಲಿ ಜಿಗುಪ್ಸೆಯನ್ನೂ ಬೇಸರವನ್ನೂ ಮೂಡಿಸುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೆ ಸರಿಯಾಗಿ, ನಾವು ಅತಿ ಹೆಚ್ಚು ದುಃಖಿಸುವುದು ನಮ್ಮ ಒಂಟಿನತನದ ಕುರಿತು. ನಾವು ಬಹುತೇಕವಾಗಿ ಸ್ವಾನುಕಂಪ ತೋರುವುದೂ ನಮ್ಮ ಒಂಟಿತನದ ಕುರಿತಾಗಿಯೇ. ಪರಸ್ಥಳಕ್ಕೆ ಹೋದಾಗ ಗೆಳೆಯ ಗೆಳತಿಯರನ್ನು ಮಾಡಿಕೊಳ್ಳಲಾಗಿಲ್ಲವೆಂಬ ಒಂಟಿತನ; ವರ್ಗಾವಣೆ ಅಥವಾ ಹೆಚ್ಚಿನ ಓದಿಗಾಗಿ […]

ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #3 ~ ಪರಿವರ್ತನ ಪ್ರಕ್ರಿಯೆ

ಒನ್ ವೇ ಲವ್ ‘ನಿಂದ ಉಂಟಾಗುವ ಹತಾಶೆ ವ್ಯಕ್ತಿಯನ್ನು ಕ್ರೂರಿಯನ್ನಾಗಿಸುವ ಸಾಧ್ಯತೆ ಇರುತ್ತದೆ. ಅಥವಾ ಅದು ತೀವ್ರ ಖಿನ್ನತೆಗೆ ದೂಡುವುದೂ ಉಂಟು. ಇದರಿಂದ ಹೊರಬರಲು ಪರಿವರ್ತನ ಪ್ರಕ್ರಿಯೆಯ ಧ್ಯಾನ ಸಹಾಯ ಮಾಡುತ್ತದೆ  ~ ಚಿತ್ಕಲಾ ಪ್ರೇಮ ಏಕಮುಖ ಆಗಿರುವಾಗ, ಅದು ನೀಡುವ ನೋವು ಹತಾಶೆಗಳಿಂದ ಹೊರಬರಲು ‘ಪರಿವರ್ತನ’ ಧ್ಯಾನ ನಿಮಗೆ ಸಹಾಯ ಮಾಡುತ್ತದೆ. ಇದು ಕಠಿಣವಾದುದೇನೂ ಅಲ್ಲ. ಮುಖ್ಯವಾಗಿ ನೀವು ಅದರಿಂದ ಹೊರಕ್ಕೆ ಬರಲು ಮನಸ್ಸು ಮಾಡಬೇಕಷ್ಟೆ. ಪರಿವರ್ತನ ಪ್ರಕ್ರಿಯೆ, ಹೆಸರೇ ಹೇಳುವಂತೆ ಒಂದು ಪ್ರಕ್ರಿಯೆ. ಇದೊಂದು ಪ್ರೊಸೀಜರ್. […]

ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #2 ~ ಸಾಂತ್ವನ ಧ್ಯಾನ

ಪ್ರೇಮ ವೈಫಲ್ಯದ ಗಾಯವನ್ನು ಮಾಯಿಸುವ ‘ಸಾಂತ್ವನ ಧ್ಯಾನ’ ನಡೆಸುವ ವಿಧಾನ ಇಲ್ಲಿದೆ. ~ ಚಿತ್ಕಲಾ ಪ್ರೇಮ, ಯಾವುದೇ ವ್ಯಕ್ತಿಯ ಬದುಕಿನಲ್ಲಿ ಘಟಿಸುವ ಅತ್ಯಂತ ಮಧುರವಾದ ಸಂಗತಿ. ಆದ್ದರಿಂದ ಪ್ರೇಮ ವೈಫಲ್ಯ ಭಾವುಕವಾಗಿ ಆಳವಾದ ಗಾಯವನ್ನು ಉಂಟು ಮಾಡಿಬಿಡುತ್ತದೆ. ಪ್ರೇಮದ ಭಾವನೆ ನಮಗೆ ಅದೆಷ್ಟು ಪ್ರಿಯವೆಂದರೆ, ನಾವು ಅದರಿಂದ ಉಂಟಾಗುವ ಗಾಯವನ್ನೂ ಸುಖಿಸುತ್ತೇವೆ. ಅದನ್ನು ಮರೆಯದಂತೆ ಕಾಪಾಡಿಕೊಳ್ಳುತ್ತೇವೆ. ಎಲ್ಲಿಯವೆರೆಗೆ ಗಾಯದ ನೆನಪು ಅಳಿಯುವುದಿಲ್ಲವೋ ಅಲ್ಲಿಯವರೆಗೆ ಅದು ಮಾಯುವುದೂ ಇಲ್ಲ. ಅದನ್ನು ಹಾಗೇ ಉಳಿಸಿಕೊಂಡು, ಅದರಿಂದ ಉಂಟಾಗುವ ನೋವನ್ನು ಮತ್ತೆ […]