ದೈನಂದಿನ ಬದುಕಿಗೆ ಭಗವದ್ಗೀತೆಯ ಸೂತ್ರಗಳು

ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ. ಆಧುನಿಕ ಧಾವಂತದ ಬದುಕಿನಲ್ಲಿ ಮಾನವನ ಮುಖ್ಯ ಸಮಸ್ಯೆ ಎಂದರೆ ನಿರ್ವಹಣೆಯದ್ದು. ನಾವು ಇಂದು ಯಾವುದನ್ನೂ ಸರಿಯಾಗಿ, ಸಮರ್ಥವಾಗಿ ನಿರ್ವಹಿಸಲಾಗದ ಅಶಕ್ತ ಸ್ಥಿತಿಯಲ್ಲಿದ್ದೇವೆ. ನಾವು ನಮ್ಮ ಆರ್ಥಿಕತೆಯನ್ನು ನಿರ್ವಹಿಸಲಾರೆವು. ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲಾರೆವು. ಸಂಬಂಧಗಳಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲಾರೆವು. […]

ವ್ಯಕ್ತಿತ್ವ ವಿಕಸನ – Personality development ಯಾಕೆ ಮುಖ್ಯ?

ನಮ್ಮೊಳಗಿನ ಎಲ್ಲ ಸಕಾರಾತ್ಮಕ ಸಾಧ್ಯತೆಗಳನ್ನರಿತು, ಸಂಕುಚಿತಗೊಂಡಿರುವ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯೇ ವ್ಯಕ್ತಿತ್ವ ವಿಕಸನ ~ ಆನಂದಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ಅಧ್ಯಾತ್ಮಕ್ಕೂ ಏನು ಸಂಬಂಧ? ಯಾರಾದರೂ ಪ್ರಶ್ನಿಸಬಹುದು. ಸಂಬಂಧವಿದೆ. ಒಬ್ಬ ವ್ಯಕ್ತಿ ತನ್ನ ಬದುಕಿನ ರೀತಿ ನೀತಿಗಳನ್ನು ಸರಿಯಾಗಿ ಇಟ್ಟುಕೊಳ್ಳದೆ, ಸಹಜೀವಿಗಳ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳದೆ ಅಧ್ಯಾತ್ಮವನ್ನು ಆಚರಿಸಿದರೆ ಅದರಿಂದ ಲಾಭವಂತೂ ಇಲ್ಲ, ನಷ್ಟವೇ ಹೆಚ್ಚು. ಪುರಾಣ ಕಥನಗಳಲ್ಲಿ ಬರುವ ಅಸುರಾದಿಗಳಲ್ಲಿ ಬಹುತೇಕರು ತಪೋನಿಷ್ಠರಾಗಿದ್ದರು. ಸಜ್ಜನ ಭಕ್ತರಿಂದಲೂ ಸಾಧ್ಯವಾಗದಷ್ಟು ಕಠಿಣ ವ್ರತಗಳನ್ನು ಕೈಗೊಂಡು ದೀರ್ಘಕಾಲ ಧ್ಯಾನ – […]

ವ್ಯಕ್ತಿತ್ವ ವಿಕಸನದ ಪಾಠಗಳು : ಪರಮಹಂಸ – ವಿವೇಕಾನಂದರ ಒಂದು ಸಂಭಾಷಣೆ

ಅದ್ಭುತ ಗುರು, ಅದ್ವಿತೀಯ ಶಿಷ್ಯ ಜೋಡಿಯಾದ ರಾಮಕೃಷ್ಣ ಪ್ರಮಹಂಸ ಮತ್ತು ವಿವೇಕಾನಂದರ ಸಂಭಾಷಣೆಗಳು ವ್ಯಕ್ತಿತ್ವ ವಿಕಸನ, ತನ್ಮೂಲಕ ಆತ್ಮವಿಕಸನಕ್ಕೆ ಇಂಬು ಕೊಡುವಂತೆ ಇರುತ್ತಿದ್ದವು. ಅಂತಹ ಸಂಭಾಷಣೆಗಳಲ್ಲಿ ಒಂದು ತುಣುಕನ್ನು ಆಯ್ದು ಇಲ್ಲಿ ನೀಡಿದ್ದೇವೆ.  ಸ್ವಾಮಿ ವಿವೇಕಾನಂದ : ಗುರುದೇವ! ನನಗೆ ಬಿಡುವೇ ಸಿಗುತ್ತಿಲ್ಲ. ಬದುಕು ದುಸ್ತರವಾಗುತ್ತಿದೆ. ರಾಮಕೃಷ್ಣ ಪರಮಹಂಸ : ಕೇವಲ ಚಟುವಟಿಕೆಗಳು ನಿನ್ನನ್ನು ವ್ಯಸ್ತವಾಗಿಡುತ್ತವೆ. ಅಲ್ಲಿ ಉತ್ಪಾದನೆ ನಡೆಯುತ್ತಿದ್ದರೆ, ನಿನಗೆ ಬಿಡುವು ದೊರೆಯುತ್ತದೆ. (ಸುಮ್ಮನೆ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇದ್ದರೆ ಸಮಯ ತಿನ್ನುತ್ತದೆ ಹೊರತು ಪ್ರಯೋಜನವಿಲ್ಲ. […]