ಒಂದು ಫಾರ್ಸಿ ದೃಷ್ಟಾಂತ ಕಥೆ : Tea time story

ಒಬ್ಬ ಕುರುಡ ಮತ್ತು ಒಬ್ಬ ವ್ಯಾಪಾರಿ ಮರುಭೂಮಿಯಲ್ಲಿ ಪ್ರಯಾಣಿಸುತ್ತಿದ್ದರು. ಹಾದಿಯಲ್ಲಿ ಪರಸ್ಪರ ಪರಿಚಿತರಾಗಿ, ಒಳ್ಳೆಯ ಗೆಳೆಯರೂ ಆಗಿಬಿಟ್ಟರು. ಆಮೇಲೆ ಆ ವ್ಯಾಪಾರಿಯೇ ಕುರುಡನ ಜವಾಬ್ದಾರಿ ತೆಗೆದುಕೊಂಡು, ಇಬ್ಬರೂ ಪ್ರಯಾಣ ಮುಂದುವರೆಸಿದರು. ಈ ಪ್ರಯಾಣದಲ್ಲಿ ಅವರ ಗೆಳೆತನ ಗಾಢವಾಗುತ್ತಾ ಹೋಯಿತು. ಅವರಿನ್ನೂ ತಾವು ತಲುಪಬೇಕಾದ ಸ್ಥಳ ತಲುಪಿರಲಿಲ್ಲ. ದಾರಿಯಲ್ಲಿ ಅವರಿಬ್ಬರೂ ಒಂದು ಕಡೆ ಮಲಗಿದ್ದರು. ಮುಂಜಾನೆ ಕುರುಡನಿಗೆ ಮೊದಲು ಎಚ್ಚರವಾಯಿತು. ಅವನು ತಡಕಾಡುತ್ತಲೇ ತನ್ನ ಊರುಗೋಲನ್ನು ಹುಡುಕಲಾರಂಭಿಸಿದ. ರಾತ್ರಿಯ ವೇಳೆ ಮರುಭೂಮಿಯಲ್ಲಿ ವಿಪರೀತ ಚಳಿ ಇರುತ್ತದೆ. ಈ ಚಳಿಗೆ […]

ನೀರಡಿಸಿದ ನಾಯಿ ಮತ್ತು ಜಿಪುಣ ವ್ಯಾಪಾರಿ : ಸೂಫಿ ಕಥೆ

ಒಬ್ಬ ಜಿಪುಣ ವ್ಯಾಪಾರಿ ತನ್ನ ನಾಯಿಯೊಡನೆ ಮರುಭೂಮಿಯಲ್ಲಿ ಸಾಗುತ್ತಿದ್ದ. ಅವನು ಬಹಳ ದೂರ ಹೋಗಬೇಕಾಗಿತ್ತು. ಹೆಗಲಲ್ಲಿ ಹೊತ್ತಿದ್ದ ಚರ್ಮದ ಚೀಲದಲ್ಲಿ ನೀರನ್ನೂ, ಬಗಲಿನ ಜೋಳಿಗೆಯಲ್ಲಿ ಆಹಾರವನ್ನೂ ಇರಿಸಿಕೊಂಡಿದ್ದ. ಮರುಭೂಮಿಯಲ್ಲಿ ಕಾಲೆಳೆಯುತ್ತಾ ನಡೆಯುತ್ತಿದ್ದ ನಾಯಿಯೊಡನೆ ಸಾಗುತ್ತಿದ್ದ ಈ ವ್ಯಾಒಆರಿ ದುಃಖಡಿಸಿ ದುಃಖಡಿಸಿ ಅಳುತ್ತಿದ್ದ. ದಾರಿಯಲ್ಲಿ ಎದುರಾದವನೊಬ್ಬ ಅವನನ್ನು ತಡೆದು, “ಯಾಕೆ ಇಷ್ಟೊಂದು ದುಃಖಿಸುತ್ತಿದ್ದೀಯ? ಏನಾಯಿತು?” ಎಂದು ಕೇಳಿದ. “ನನ್ನ ನಾಯಿ ವಿಪರೀತ ಬಾಯಾರಿದೆ. ಅದು ಇನ್ನೇನು ಸಾಯಲೂಬಹುದು. ಪಾಪ, ನನ್ನ ನಿಯತ್ತಿನ ನಾಯಿ ಅದು” ಅನ್ನುತ್ತಾ ಅಳು ಮುಂದುವರೆಸಿದ. […]

ತರುಣ ವ್ಯಾಪಾರಿಯನ್ನು ಸಮುದ್ರಕ್ಕೆಸೆದ ಸೂಫಿ

ಒಮ್ಮೆ ಒಂದು ಹಡಗಿನಲ್ಲಿ ಸುಲ್ತಾನ ಪ್ರಯಾಣ ಹೊರಟಿದ್ದ. ಅವನ ಜೊತೆ ರಾಜ ಪರಿವಾರವೂ ಇತ್ತು. ಅದೇ ಹಡಗಿನಲ್ಲಿ ಒಬ್ಬ ತರುಣ ವ್ಯಾಪಾರಿ ಮತ್ತು ಒಬ್ಬ ಸೂಫಿ ಕೂಡಾ ಪ್ರಯಾಣ ಹೊರಟಿದ್ದರು. ತರುಣ ವ್ಯಾಪಾರಿಗೆ ಅದು ಮೊದಲ ಹಡಗು ಪ್ರಯಾಣ. ಆತ ವಿಪರೀತ ಆತಂಕದಲ್ಲಿದ್ದ. ಹೊಸತಾಗಿ ಮದುವೆಯಾಗಿದ್ದ ಹೆಂಡತಿಯ ಮುಖ ಕಣ್ಮುಂದೆ ಬರುತ್ತಿತ್ತು. “ನಾನು ಹಡಗಿನಲ್ಲಿ ಮುಳುಗಿ ಸತ್ತು ಹೋದರೆ…” ಅನ್ನುವ ಯೋಚನೆ ಕಣ್ಣೀರಾಗಿ ಹರಿದು ಅವಳ ಬಿಂಬವನ್ನೂ ಕೆಳಗೆ ಚೆಲ್ಲುತ್ತಿತ್ತು. ಸೂಫಿ ಅವನ ದುಃಖವನ್ನು ಗಮನಿಸುತ್ತಲೇ ಇದ್ದ. […]