ನಮ್ಮನ್ನು ನಾವು ಮತ್ತೊಬ್ಬರಾಗಿ ಭಾವಿಸಿಕೊಳ್ಳಲು ಆರಂಭಿಸಿದರೆ ಏನಾಗುತ್ತೇವೆ? ನಿಜವಾದ ನಾವು ಇಲ್ಲವಾಗಿಬಿಡುತ್ತೇವೆ. ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ. ಸ್ವಂತಿಕೆಯನ್ನು ಕಳೆದುಕೊಂಡರೆ ನಾವು ನಾಶವಾದಂತೆಯೇ.
ಬರೀ ಮಾತಿನಿಂದ ಪ್ರಯೋಜನವಿಲ್ಲ : ಶಾಂಕರ ಸುಭಾಷಿತ
“ಮಾತಿನಿಂದ ಲೌಕಿಕ ಫಲಗಳನ್ನೇನೋ ಪಡೆಯಬಹುದು, ಆದರೆ ಅದು ಮುಕ್ತಿ ಕೊಡಿಸಲಾರದು…”
ಶ್ರೀ ಶಂಕರಾಚಾರ್ಯರ ‘ಮನೀಷಾ ಪಂಚಕಮ್’
ಶಂಕರಾಚಾರ್ಯರು ರಚಿಸಿದ ಶ್ರೀ ರಾಮ ಸ್ತೋತ್ರ
ಶಿವೋsಹಮ್ ಸರಣಿ ~ 6 : ಸತ್ ಅನ್ನು ಚಿತ್ನಿಂದ, ಚಿತ್ ಅನ್ನು ಆನಂದದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ…
ನೀವು ಪ್ರವಚನ ಕೇಳಿ ಮನೆಗೆ ಮರಳಿದ ಮೇಲೆ ನಿಮ್ಮ ತಾಯ್ತಂದೆಯರಿಗೆ, `ನೀವು ನಮ್ಮ ಅಪ್ಪ, ಅಮ್ಮ ಅಲ್ಲ’ ಎಂದು ಹೇಳಬೇಡಿ ಮತ್ತೆ! ಅಥವಾ ನಿಮ್ಮ ಮಕ್ಕಳಿಗೆ ‘ನಾವು ನಿಮ್ಮ ಅಪ್ಪ – ಅಮ್ಮ ಅಲ್ಲ’ ಅಂತಲೂ ಹೇಳಲು ಹೋಗಬೇಡಿ!! ಶಂಕರರು ಹೀಗೆ ಹೇಳಿದ್ದಾರೆ, ಗುರುದೇವ ಕೂಡ ಅದನ್ನು ಸಮರ್ಥಿಸಿದ್ದಾರೆಂದು ನೀವು ಹಾಗೆಲ್ಲ ಮಾಡಿಬಿಡಬೇಡಿ!! ಈ ಮಾತುಗಳನ್ನು ಬಲ್ಲಿದನಾದ ಜ್ಞಾನಿ ಮಾತ್ರವೇ ಹೇಳಬಲ್ಲ. ಮತ್ತು, ಇದು ಇದು ಕೇವಲ ಕೇಳಿ ಹೇಳುವಂಥ ಘೋಷಣೆಯಲ್ಲ, ಸ್ವತಃ ಅನುಭವಿಸಿ ಕಂಡುಕೊಳ್ಳುವಂಥದ್ದು ~ […]
ಶಿವೋsಹಮ್ ಸರಣಿ ~ 4 : ಸಾಕ್ಷೀಭಾವದಿಂದ ನೋಡುವುದು…
ಒಂದೊಮ್ಮೆ ಹೀಗೆ ಮಾಡಲು ಸಾಧ್ಯವಾಗುವುದಾ ನೋಡಿ. ಸಿಟ್ಟು ಬಂದಾಗ ನೀವು ಸಿಟ್ಟು ಮಾಡಿಕೊಂಡೆ ಅನ್ನುವ ಬದಲು ಸಿಟ್ಟು ಉಂಟಾಯ್ತೆಂದು ಯೋಚಿಸಿ. ಇಷ್ಟಾದರೂ ಮಾಡಲು ಸಾಧ್ಯವಾದರೆ ನಿಮಗೆ ಸಾಕಷ್ಟು ದೊರೆತಂತಾಯ್ತು. ಇಷ್ಟು ಮಾತ್ರ ಮಾಡಲು ನಾನು ನಿಮಗೆ ಹೇಳ್ತಿದ್ದೀನಿ. – ಕೇವಲ ನೋಡಿ, ಸಾಕು ~ Whosoever Ji ಸದ್ಗುರುವಿನ ಸನ್ನಿಧಿಯಲ್ಲಿ ಸಮ್ಯಕ್ ಪ್ರಯಾಸದಿಂದ, ಸಮ್ಯಕ್ ಅಭ್ಯಾಸ ನಡೆಸುವುದರಿಂದ ಇಂತಹ ವಿವೇಕ ಬುದ್ಧಿಯು ದೊರೆಯುವುದು. ಇಂತಹ ವಿವೇಕ ಬುದ್ಧಿಯನ್ನು ಹೊಂದಿದ ವ್ಯಕ್ತಿಯು […]
ಶಿವೋsಹಮ್ ಸರಣಿ ~ 2 : ಚಿಂತನ ಮನನ ಧ್ಯಾನ ವಿಧಿ
ವ್ಯಕ್ತ ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಎರಡು ಮಗ್ಗಲುಗಳಿರುತ್ತವೆ. ಆಂತರ್ಯ ಮತ್ತು ಬಾಹ್ಯ, ಸೂಕ್ಷ್ಮ ಮತ್ತು ಸ್ಥೂಲ. ಮನೋಬುದ್ಧಿ ಚಿತ್ತಾಹಂಕಾರಗಳು ಶರೀರದೊಳಗಿನ ಸೂಕ್ಷ್ಮ ಸಂಗತಿಗಳು. ಎಲ್ಲ ಬಗೆಯ ಮಾಹಿತಿ, ಜ್ಞಾನ ಹಾಗೂ ಅನುಭವಗಳ ಮೇಲೆ ಇವುಗಳ ಆಧಿಪತ್ಯ. ಮತ್ತು ಕಿವಿ, ನಾಲಗೆ, ಮೂಗು ಮತ್ತು ಕಣ್ಣುಗಳು – ಇವು ಶರೀರದ ಬಾಹ್ಯ ಅಥವಾ ಸ್ಥೂಲ ಸಂಗತಿಗಳು. ಇವುಗಳಿಂದ ಧ್ವನಿ, ಸ್ವಾದ, ಗಂಧ ಹಾಗೂ ದೃಶ್ಯಗಳನ್ನು ಗ್ರಹಿಸಬಹುದು. ಶಂಕರರು ಹೇಳುತ್ತಾರೆ, “ನಾನು ಈ ಎರಡೂ ಮಗ್ಗಲುಗಳಿಗೂ ಅತೀತನಾದವನು. ಮನೋಬುದ್ಧಿ ಚಿತ್ತಾಹಂಕಾರಗಳಿಗೆ […]
ಚಿಂತನ ಮನನದ ಧ್ಯಾನ ವಿಧಿ: ಶಿವೋsಹಮ್ ಸರಣಿ ~1
ಇಲ್ಲೊಂದು ತಮಾಷೆಯಿದೆ… ಈ ಹಾಡನ್ನು ನೀವು ಎಷ್ಟು ಬೇಕಾದರೂ ಕೇಳಿ. ಉರು ಹೊಡೆಯಿರಿ. ಕಂಟಸ್ಥಗೊಳಿಸಿಕೊಳ್ಳಿ. ಇದನ್ನು ನೀವು ಹಾಡುತ್ತಲೇ ಇರಿ. ಅಷ್ಟಾದರೂ ನಿಮಗೆ ನೀವು ಯಾರೆಂದು ಅರಿವಾಗುವುದಿಲ್ಲ! ಮತ್ತೊಬ್ಬರ ಹೇಳಿಕೆಯಿಂದ ನಮಗಿದು ಗೊತ್ತಾಗಿಬಿಡುವ ಹಾಗೆ ಇದ್ದಿದ್ದರೆ, ನಮಗೆಲ್ಲರಿಗೂ ನಾವಾರೆಂದು ಯಾವತ್ತೋ ತಿಳಿದುಹೋಗಿರುತ್ತಿತ್ತು. ಆದರೆ ಈ ಅನುಭಾವ ಗೀತೆಯನ್ನು ಕೇಳಿ – ಅರ್ಥೈಸಿಕೊಂಡ ನಂತರವೂ ನಮಗೆ ನಾವು ಯಾರೆಂದು ಅರಿವಾಗುವುದಿಲ್ಲ. ~ Whosoever Ji ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ […]