ನಮ್ಮ ಇಚ್ಛೆಗೂ ವಿರುದ್ಧವಾಗಿ ನಾವು ದುಷ್ಕೃತ್ಯ ನಡೆಸುವುದು ಹೇಗೆ? ಈ ಒತ್ತಡ ಮಣಿಸುವುದು ಹೇಗೆ?

‘ಓ ಕೃಷ್ಣ, ಮನುಷ್ಯನು ತನ್ನ ಇಚ್ಛೆಗೂ ವಿರುದ್ಧವಾಗಿ, ಯಾವುದೋ ಶಕ್ತಿಯ ಒತ್ತಡಕ್ಕೊಳಗಾದವನಂತೆ ದುಷ್ಕಾರ್ಯ ಮಾಡುತ್ತಾನಲ್ಲ ಅದು ಯಾವ ಶಕ್ತಿ?’ ಈ ಸಮಸ್ಯೆ ಪ್ರತಿಯೊಬ್ಬ ಮನುಷ್ಯನದೂ ಕೂಡ. ಇದಕ್ಕೆ ಶ್ರೀಕೃಷ್ಣ ಉತ್ತರಿಸುತ್ತಾನೆ … | ಸ್ವಾಮಿ ರಂಗನಾಥಾನಂದರ ಆದರ್ಶ ಗೃಹಸ್ಥ ಕೃತಿಯಿಂದ ನಮ್ಮ ಪುರಾತನ ಗುರುಗಳು ಒಂದು ಸುಂದರ ವಿಚಾರ ಧಾರೆಯನ್ನು ನಮ್ಮ ಮುಂದಿರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆರು ಜನ ಶತ್ರುಗಳು – ಷಡ್ರಿಪುಗಳು – ಇದ್ದಾರೆ ಎಂದಿದ್ದಾರೆ ಅವರು. ಆ ಶತ್ರುಗಳು ನಮ್ಮ ಹೊರಗಡೆ ಇಲ್ಲ. ನಮ್ಮೊಳಗೇ […]

ಬಯಲಿಗೆ ಬಾಗಿಲಿಟ್ಟ ಕ್ಷಣ ಗೋಡೆಗಳು ಎದ್ದುನಿಲ್ಲುತ್ತವೆ : ಅರಳಿಮರ POSTER

ಬಯಲಿಗೆ ಬಾಗಿಲಿಟ್ಟ ಕ್ಷಣ ಗೋಡೆಗಳು ಎದ್ದುನಿಲ್ತವೆ. ದಂಡೆತ್ತಿ ಹೋಗಬೇಕೆಂದೇನೂ ಇಲ್ಲ; ಬೇಲಿ ಕಟ್ಟಿಕೊಂಡ ಕ್ಷಣ ಶತ್ರುಗಳು ಹುಟ್ಟಿಕೊಳ್ತಾರೆ ~ ಅಲಾವಿಕಾ ಬದುಕು ಬಯಲಿನಂತಿರಬೇಕು. ವಿಸ್ತಾರವೂ ವಿಶಾಲವೂ ಆಗಿದ್ದು ಎಲ್ಲರನ್ನೂ ತೆರೆದ ತೋಳುಗಳಿಂದ ಸ್ವಾಗತಿಸುವಂತೆ ಇರಬೇಕು. ಆದರೆ ನಾವು ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ನಮ್ಮ ಸ್ವಾರ್ಥಕ್ಕೆ ತಕ್ಕಂತೆ ಕೆಲವರಿಗಷ್ಟೆ ಪ್ರವೇಶ ಕೊಟ್ಟು ಬಾಗಿಲಿಡುತ್ತೇವೆ. ಹಾಗೆ ಬಾಗಿಲಿಟ್ಟಕೂಡಲೇ ಉಳಿದವರ ಪಾಲಿಗೆ ತಡೆ ಉಂಟಾಗುತ್ತದೆ. ಅದನ್ನೇ “ಗೋಡೆಗಳು ಎದ್ದುನಿಲ್ಲುತ್ತವೆ” ಅನ್ನುವುದು.  ನಾವು ಬಾಗಿಲಿಟ್ಟು ಗೋಡೆಗಳಿಗಷ್ಟೆ ಕಾರಣವಾಗುವುದಿಲ್ಲ, ಬೇಲಿಯನ್ನೂ ಕಟ್ಟಿಕೊಳ್ಳುತ್ತೇವೆ. ನಮ್ಮ ಜಾತಿ, ನನ್ನ […]