ಅಪ್ರತಿಮ ರಾಜನೀತಿಜ್ಞ ಚಾಣಕ್ಯ, ಶತ್ರುಗಳನ್ನು ಹೇಗೆ ಮಣಿಸಬೇಕು ಎಂಬುದರ ಜೊತೆಗೆ, ಯುದ್ಧ ಹೂಡುವ ಮುನ್ನ ಯಾವುದೆಲ್ಲ ಸಂಗತಿಗಳ ಕಡೆ ಗಮನ ಹರಿಸಬೇಕೆಂದೂ ಸಲಹೆ ನೀಡುತ್ತಾನೆ. ಅಂತಹಾ ಸಲಹೆಗಳಲ್ಲಿ 5 ಇಲ್ಲಿವೆ: 1. ಕೆರಳಬೇಡಿ, ಸಂಯಮ ವಹಿಸಿ 2. ಅಧ್ಯಯನ ಮಾಡಿ, ತಂತ್ರ ಹೆಣೆಯಿರಿ 3. ಸಂದರ್ಭ ಬರುವವರೆಗೆ ಕಾಯಿರಿ 4. ದ್ವೇಷದಲ್ಲಿ ಕುರುಡಾಗಬೇಡಿ 5. ಕೊನೆಯ ಆಯ್ಕೆಯಾಗಿರಲಿ
ನಮ್ಮ ಬಹು ದೊಡ್ಡ ಶತ್ರು ಯಾರು?
ಯಾವುದು ನಮ್ಮನ್ನು ನರಳಿಸುತ್ತದೆಯೋ, ಬೇಸರ ಪಡಿಸುತ್ತದೆಯೋ ಅದನ್ನು ಕಾಪಾಡಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ಆದರೆ ನಾವು ಅದೇ ತಪ್ಪನ್ನು ಮಾಡುತ್ತೇವೆ. ಯಾರದೋ ಟೀಕೆಯನ್ನು, ಗೇಲಿಯನ್ನು ಮನಸ್ಸಿನಲ್ಲಿ ನಿಧಿಯ ಹಾಗೆ ಕಾಪಾಡಿಕೊಂಡು ಹೋಗುತ್ತೇವೆ. ಅದರ ಜೊತೆಗೇ ನಮಗೆ ಅರಿವಿಲ್ಲದಂತೆ ನರಳಿಕೆಯನ್ನೂ ಕಾಪಾಡಿಕೊಂಡು ಹೋಗುತ್ತೇವೆ. ~ ವಿದ್ಯಾಧರ ನಮ್ಮ ಬಹು ದೊಡ್ಡ ಶತ್ರು ಯಾರು? ಪ್ರತಿಯೊಬ್ಬರ ಬಹುದೊಡ್ಡ ಶತ್ರು ಆತನೇ / ಆಕೆಯೇ ಆಗಿರುತ್ತಾರೆ. ಅದು ಹೇಗೆ? ಯಾವುದೇ ಊಹೆಯಿಲ್ಲದೆ, ಪೂರ್ವಾಗ್ರಹವಿಲ್ಲದೆ ಅದನ್ನು ನಾವೇ ಕಂಡುಕೊಳ್ಳೋಣ. ಒಂದು ಅತ್ಯಂತ ಸರಳ ವಿಧಾನದ ಮೂಲಕ […]