ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #20

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಈ ಜಗತ್ತಿನಲ್ಲಿ ನಮ್ಮ ವಿಕಾಸಕ್ಕೆ ಕಾರಣವಾಗಿರುವುದು ನಮ್ಮ ನಡುವೆ ಇರುವ ಸಮಾನತೆಗಳಲ್ಲ, ಸಮಾನ ಹೋಲಿಕೆಗಳಲ್ಲ, ಬದಲಾಗಿ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು ನಮ್ಮ ನಡುವಿನ ವೈರುಧ್ಯಗಳು. ಬ್ರಹ್ಮಾಂಡದ ಎಲ್ಲ ವೈರುಧ್ಯಗಳು ಪ್ರತಿಯೊಬ್ಬರಲ್ಲೂ ಜಾಗ ಮಾಡಿಕೊಂಡಿವೆ. ಪ್ರತೀ ಆಸ್ತಿಕನೂ ತನ್ನೊಳಗಿರುವ ನಾಸ್ತಿಕನನ್ನು ಭೇಟಿ ಮಾಡಬೇಕು ಮತ್ತು, ಪ್ರತೀ ನಾಸ್ತಿಕನೂ ತನ್ನೂಳಗಿನ ಮೂಕ ಆಸ್ತಿಕನನ್ನು ಮುಟ್ಟಿ ಮಾತನಾಡಿಸಬೇಕು. ಮನುಷ್ಯ ತನ್ನ ಪರಿಪೂರ್ಣ ಸ್ಥಿತಿ ಮುಟ್ಟುವ ತನಕ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #19

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭೂತ ಕಾಲದ ವಿಷಯ ವ್ಯಾಖ್ಯಾನಕ್ಕೆ ಮಾತ್ರ ಯೋಗ್ಯ , ಭವಿಷ್ಯದ ನಿರೀಕ್ಷೆಗಳು ಭ್ರಮೆಯ ಭಾಗ. ಭೂತದಿಂದ ಭವಿಷ್ಯಕ್ಕೆ ಕಾಲದ ಮೂಲಕ ಸಾಗುವ ಜಗತ್ತಿನ ಪಯಣ ಸರಳ ರೇಖೆಯಲ್ಲಲ್ಲ ಬದಲಾಗಿ ಕಾಲದ ಚಲನೆ ನಮ್ಮ ಮೂಲಕ, ನಮ್ಮೊಳಗೆ ಕೊನೆಯಿಲ್ಲದ ಸುರುಳಿಯಾಕಾರದ ದಿವ್ಯ ಪಥದಲ್ಲಿ. ಶಾಶ್ವತ ಎಂದರೆ ಅನಂತ ಕಾಲವಲ್ಲ, ಬದಲಾಗಿ ಶಾಶ್ವತ ಕಾಲದ ಪರಿವೆಯೇ ಇಲ್ಲದ್ದು. ಭೂತ, ಭವಿಷ್ಯಗಳನ್ನು ಬುದ್ಧಿಯ ಪರೀಧಿಯಿಂದ ಹೊರಗಿಟ್ಟು ವರ್ತಮಾನದ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #18

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನರಕದ ಬಗ್ಗೆ ಚಿಂತೆ, ಸ್ವರ್ಗದ ಬಗ್ಗೆ ಕನಸು ಎರಡೂ ತಮಾಷೆಯ ಸಂಗತಿಗಳೇ. ನರಕ, ಬೇರೆಲ್ಲೂ ಇಲ್ಲ ನರಕದ ಅಸ್ತಿತ್ವ ಇಲ್ಲೇ, ಈ ಕ್ಷಣದಲ್ಲೆ. ಹಾಗೆಯೇ ಸ್ವರ್ಗ ಕೂಡ. ಪ್ರತೀ ಬಾರಿ ನಾವು ಪ್ರೀತಿಸಿದಾಗ ಸ್ವರ್ಗದ ಅಂಗಳದಲ್ಲಿ ದಾಖಲಾಗುತ್ತೇವೆ ಮತ್ತು ದ್ವೇಷ, ಅಸೂಯೆ, ಹಿಂಸೆಯಲ್ಲಿ ಒಂದಾದಾಗ ನರಕದ ಕೆನ್ನಾಲಿಗೆಗೆ ಆಹಾರವಾಗುತ್ತೇವೆ. 16ನೇ ನಿಯಮ ಇಲ್ಲಿ ನೋಡಿ: https://aralimara.com/2020/01/05/sufi-68/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #17

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಆವರಿಸಿಕೊಳ್ಳುತ್ತಿರುವ ಬದಲಾವಣೆಯ ಹೊಸ ಗಾಳಿಯನ್ನು ತಡೆದು ನಿಲ್ಲಿಸಬಯಸುವ ನಿಮ್ಮ ಉತ್ಸಾಹವನ್ನ ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಬದಲಾಗಿ ಬದುಕಿಗೆ, ನಿಮ್ಮ ಮೂಲಕ ಬಾಳುವ ಅವಕಾಶ ಮಾಡಿಕೊಡಿ. ಬದಲಾವಣೆ ಎಂದರೆ ಚಿಮ್ಮಲಾಗಿರುವ ಬದುಕಿನ ನಾಣ್ಯ. ನಿಮ್ಮ ಬದುಕು ತಲೆಕೆಳಗಾಗಿ ಬಿಡಬಹುದೆಂದು ಗಾಬರಿಯಾಗಬೇಡಿ. ಯಾರಿಗೆ ಗೊತ್ತು, ಈಗ ನಿಮ್ಮೆಡೆ ಮುಖ ಮಾಡಿರುವ ಬದುಕಿನ ಭಾಗ ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ ಅದ್ಭುತವಾಗಿರಬಹುದು. 16ನೇ ನಿಯಮ ಇಲ್ಲಿ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #16

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭೂಮಿಯ ಮೇಲಿರುವ ನಕಲೀ ಗುರುಗಳ ಮತ್ತು ಕಪಟಿ ಶಿಕ್ಷಕರ ಸಂಖ್ಯೆ ಬ್ರಹ್ಮಾಂಡದಲ್ಲಿರುವ ಒಟ್ಟು ನಕ್ಷತ್ರಗಳ ಸಂಖ್ಯೆಗಿಂತ ಹೆಚ್ಚು. ಅಧಿಕಾರದ ಲಾಲಸೆ, ಸ್ವಂತ ಹಿತಾಸಕ್ತಿಗಳೇ ಉಸಿರಾಗಿರುವ ಇಂಥ ಮೋಸಗಾರರನ್ನ ನಿಜದ ಮಾರ್ಗದರ್ಶಕರೆಂದು ಗೊಂದಲ ಮಾಡಿಕೊಳ್ಳಬೇಡಿ. ನಿಜದ ಅಧ್ಯಾತ್ಮ ಸಾಧಕ ನಿಮ್ಮ ಗಮನವನ್ನ ತನ್ನೆಡೆಗೆ ಬಯಸುವುದಿಲ್ಲ, ಸಂಪೂರ್ಣ ಶರಣಾಗತಿಯನ್ನ ನಿಮ್ಮಿಂದ ನಿರೀಕ್ಷಿಸುವುದಿಲ್ಲ, ನಿಮ್ಮ ಮೆಚ್ಚುಗೆ ಮತ್ತು ಹೊಗಳಿಕೆಯನ್ನ ಸಹಿಸುವುದಿಲ್ಲ. ನಿಜದ ಗುರು, ಗಾಜಿನಂತೆ ಪಾರದರ್ಶಕ, ಭಗವಂತನ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #6

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಬದುಕಿನಲ್ಲಿ ಏನೇ ಘಟಿಸಿದರೂ, ಎಂಥ ಸಂಕಟದ ಸಮಯಗಳು ಎದುರಾದರೂ, ದಯವಿಟ್ಟು ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ. ಎಲ್ಲ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿದ್ದರೂ, ಭಗವಂತ ಕೇವಲ ನಿನಗಾಗಿ ಎಂದೇ ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ. ಅವನ ಅಪಾರ ಕರುಣೆಯನ್ನು ಸ್ಮರಿಸು ! ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ. ಆದರೆ ತನಗೆ ಕೊಡಮಾಡಿರುವುದರ ಬಗ್ಗೆ ಮಾತ್ರ ಅಲ್ಲ ನಿರಾಕರಿಸಿದ್ದರ ಬಗ್ಗೆ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #5

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಸೂಲಗಿತ್ತಿಗೆ ಚೆನ್ನಾಗಿ ಗೊತ್ತು. ಹೆರಿಗೆ ಬೇನೆ ಶುರುವಾಗದ ಹೊರತು ಮಗು ಹೊರ ಬರುವ ದಾರಿ ಪೂರ್ತಿಯಾಗಿ ತೆರೆದುಕೊಳ್ಳುವುದಿಲ್ಲ ಮತ್ತು ತಾಯಿ, ಮಗುವಿಗೆ ಜನ್ಮ ನೀಡುವುದು ಸಾಧ್ಯವಾಗುವುದಿಲ್ಲ. ಪ್ರತೀ ಹೊಸ ಹುಟ್ಟಿನ ದಾರಿ ಯಾತನೆ ಮತ್ತು ಸಂಕಷ್ಟಗಳ ಮೂಲಕವೇ; ಹೇಗೆ ಗಟ್ಟಿಯಾಗಲು ಮಡಿಕೆ ಬೆಂಕಿಯ ಶಾಖ ಹಾಯ್ದು ಬರಬೇಕೋ, ಹಾಗೆ. ನೋವು ಮಾತ್ರ ಪ್ರೇಮವನ್ನು ಪರಿಪೂರ್ಣವಾಗಿಸಬಲ್ಲದು. 4ನೇ ನಿಯಮ ಇಲ್ಲಿ ನೋಡಿ :  https://aralimara.com/2019/11/24/sufi-51/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #4

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಒಂಟಿತನ ಮತ್ತು ಏಕಾಂತ ಎರಡೂ ಬೇರೆ ಬೇರೆ. ಒಂಟಿತನ ಕಾಡುತ್ತಿರುವಾಗ, ಸರಿಯಾದ ದಾರಿಯಲ್ಲಿದ್ದೇವೆಂದು ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು ಬಹಳ ಸುಲಭ. ಏಕಾಂತ ಒಳ್ಳೆಯದು. ಇಲ್ಲಿಯೂ ಇರುವುದು ಕೇವಲ ನಾವು ಮಾತ್ರ, ಆದರೆ ಒಂಟಿತನದ ಜಿಗುಪ್ಸೆ ಇಲ್ಲಿಲ್ಲ. ಕನ್ನಡಿಯಂಥ ಸಂಗಾತಿಯನ್ನ ಹುಡುಕಿ. ಆ ಇನ್ನೊಬ್ಬರ ಹೃದಯದಲ್ಲಿ ಮಾತ್ರ ನೀವು ನಿಮ್ಮ ನಿಜವನ್ನು ಕಾಣುವಿರಿ ಮತ್ತು ನಿಮ್ಮೊಳಗಿನ ಭಗವಂತನನ್ನು ಕೂಡ. 3ನೇ ನಿಯಮ ಇಲ್ಲಿ ನೋಡಿ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #3

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭಗವಂತನನ್ನು ನಾವು ಯಾವ ರೀತಿ ಕಾಣುತ್ತೇವೆ ಎನ್ನುವುದು, ನಮ್ಮನ್ನು ನಾವು ಯಾವ ರೀತಿ ಕಾಣುತ್ತೇವೆ ಎನ್ನುವುದರ ನೇರ ಪ್ರತಿಬಿಂಬ. ಭಗವಂತನ ನೆನಪು ನಮ್ಮಲ್ಲಿ ಭಯ ಮತ್ತು ದೂಷಣೆ ಹುಟ್ಟಿಸಿದರೆ, ನಮಗೆ ನಮ್ಮ ಬಗ್ಗೆ ಭಯ ಮತ್ತು ನಾವು ನಮ್ಮನ್ನೇ ದೂಷಣೆಗೆ ಗುರಿಮಾಡಿಕೊಂಡಿದ್ದೇವೆ ಎಂದೇ ಅರ್ಥ. ಭಗವಂತ ಪೂರ್ಣ ಪ್ರೇಮಮಯಿಯಾಗಿಯೂ, ಅಂತಃಕರಣದಿಂದ ಕಂಗೊಳಿಸುವವನಂತೆ ಕಂಡರೆ ನಾವೂ ಪ್ರೇಮದಲ್ಲಿ ಮುಳುಗಿದವರು ಮತ್ತು ಅಂತಃಕರಣ ತುಂಬಿಕೊಂಡವರು. 2ನೇ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #1

ಮೂಲ : ಶಮ್ಸ್ ತಬ್ರೀಝಿ | ಕನ್ನಡಕ್ಕೆ : ಚಿದಂಬರ ನರೇಂದ್ರ ಬುದ್ಧಿ ಮತ್ತು ಪ್ರೇಮ ಸಂಯೋಜನೆಗೊಂಡಿರೋದೇ ಬೇರೆ ಬೇರೆ ಧಾತುಗಳಿಂದ . ಬುದ್ಧಿ  ಜನರ ನಡುವೆ ಗಂಟು ಹಾಕುತ್ತದೆ ಆದರೆ  ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ. ಆದರೆ ಪ್ರೇಮ ಹಾಗಲ್ಲ ಅದು ಜನರ ನಡುವಿನ ಸಂಬಂಧಗಳಲ್ಲಿ ಉಂಟಾಗಿರುವ ಸಿಕ್ಕುಗಳನ್ನು ಬಿಚ್ಚುತ್ತದೆ ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ. ಬುದ್ದಿಯದು ಯಾವಾಗಲೂ ಜಾಗರೂಕತೆಯ ಸ್ವಭಾವ ಸಲಹೆ ನೀಡುವ ಹುಕಿ ಉತ್ಕಟ ಆನಂದ ಬಗ್ಗೆ ಸದಾ ಹಿಂಜರಿಕೆ. ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ […]