ಚೇತನ ಇರುವಲ್ಲಿ ಅಸ್ತಿತ್ವ, ಅಸ್ತಿತ್ವ ಇರುವಲ್ಲಿ ಅರಿವು

ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ ಅದು ಮಾತ್ರ ಅಸೀಮವೂ ಅನಂತವೂ ಆಗಿರಲು ಸಾಧ್ಯ ~ Whosoever Ji ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ ದೇಹವು ನಾಲ್ಕು ಗೋಡೆಗಳಂತೆ ಇದೆ. ಚೇತನವು ನಡುವಣ ಆಕಾಶದಂತೆ. ನಾಲ್ಕು ಗೋಡೆಗಳ ನಡುವೆ ಬಂಧಿತವಾದ ಆಕಾಶಕ್ಕೆ ತಾನು ಕೋಣೆಯೇ ಎನ್ನಿಸುವಂತೆ, […]

ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಇರುವುದು

ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ ಬರುವುದಕ್ಕೆ ಮುನ್ನ `ಇರುವುದು’ ಅಗತ್ಯವಿರುತ್ತದೆ. ಯಾವುದು `ಇರು’ವುದೋ ಅದು ಮಾತ್ರ ಮರಳಿ ಬರಬಲ್ಲದು. ಯಾವುದು ಇಲ್ಲವಾಗುವುದೋ ಅದು ಮರಳಿ ಬರಲಾದರೂ ಹೇಗೆ ಸಾಧ್ಯ? ~ Whosoever JI ಪ್ರತಿ ಬೆಳಗ್ಗೆ ಗಾಢ ನಿದ್ರೆಯಿಂದ ಎಚ್ಚೆತ್ತ ಮೇಲೆ, ಎಲ್ಲಕ್ಕಿಂತ ಮೊದಲು ಅರಿವಿಗೆ ಬರುವುದೇ ಇದು – ನಾನು ಇದ್ದೀನಿ ಅನ್ನುವುದು. […]