ನೆರೆಯೊಂದಿಗೆ ಹರಿದ ಶರ್ಮಿಷ್ಟೆಯ ಮಾದರಿ

ಬಂಡಾಯ ಏಳುವುದೆಂದರೆ ಸತ್ಯವನ್ನು ನಿರಾಕರಿಸುವುದಲ್ಲ. ಪ್ರವಾಹದ ವಿರುದ್ಧ ಈಜಬೇಕಿರುವುದು, ವಿರುದ್ಧ ದಿಕ್ಕಿನಲ್ಲಿ ಗುರಿ ಇದೆಯೆಂದಾಗ ಮಾತ್ರವೇ ಹೊರತು ಕೈಗಳಲ್ಲಿ ಕಸುವಿದೆ ಎಂದಲ್ಲ. ಅನಗತ್ಯವಾಗಿ ವಿರುದ್ಧ ದಿಕ್ಕಿನ ದಾರಿಯಲ್ಲಿ – ಯಾವುದು ನಮಗಾಗಿ ಇಲ್ಲವೋ, ಯಾವುದು ಸುಳ್ಳೊ ಆ ದಾರಿಯಲ್ಲಿ ನಡೆಯುವ ರಿಸ್ಕ್ ಮೂರ್ಖತನ ಎನ್ನಿಸಿಕೊಳ್ಳುತ್ತದೆ. ~ ಚೇತನಾ ತೀರ್ಥಹಳ್ಳಿ ನಿಯತಿಯ ಆಟಕ್ಕೆ ನಿದರ್ಶನವಾಗಿ ಹಲವಾರು ಚಿತ್ರಣಗಳು ನಮ್ಮೆದುರಿಗಿವೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ಮಂಗಳ ಸ್ನಾನದಲ್ಲಿದ್ದ ರಾಮ, ನಾರುಮಡಿಯುಟ್ಟಿದ್ದು; ಪಣ ಗೆದ್ದ ಅರ್ಜುನನಿಗೆ ಮಾಲೆ ಹಾಕಿದ ದ್ರೌಪದಿ ಉಳಿದ ನಾಲ್ವರನ್ನೂ […]