ಬಾದಶಾಹ್ ಕೇಳಿದ ಎರಡು ಪ್ರಶ್ನೆಗಳು

ಪರ್ಷಿಯಾದ ಬಾದಶಾಹ್’ನಿಗೆ ಒಮ್ಮೆ ತನ್ನ ರಾಜ್ಯದ ಪ್ರಖ್ಯಾತ ಸೂಫಿ ಪೀರ್ (ಗುರು) ಎಷ್ಟು ಬುದ್ಧಿವಂತ ಎಂದು ಪರೀಕ್ಷಿಸುವ ಹುಕಿ ಬಂತು. ಸೂಫಿ ಪೀರನನ್ನು ಆಸ್ಥಾನಕ್ಕೆ ಕರೆಸಲಾಗುವುದಿಲ್ಲ. ಕರೆದರೆ ಆತ ಬರುವುದೂ ಇಲ್ಲ! ಹೀಗಾಗಿ ಬಾದಶಾಹ್ ತಾನೇ ಖುದ್ದಾಗಿ ಅವನ ಬಳಿ ಹೋದ. ಹೀಗೆ ಅಚಾನಕ್ಕಾಗಿ ಬಾದಶಾಹ್’ನನ್ನು ಸ್ವಾಗತಿಸಿದ ಸೂಫಿ ಪೀರ್, ಹಣ್ಣುಹಂಪಲು ನೀಡಿ ಸತ್ಕರಿಸಿದ. ಬಾದಶಾಹ್ ಎಲ್ಲವನ್ನೂ ಸ್ವೀಕರಿಸಿ, ನಿಧಾನವಾಗಿ ಪೀಠಿಕೆ ಹಾಕುತ್ತಾ ಹೇಳಿದ. “ಪೀರ್, ಅಲ್ಲಾಹನ ಕುರಿತು ನನಗೆ ಕೆಲವು ಅನುಮಾನಗಳು ಕಾಡುತ್ತಿವೆ. ಇದನ್ನು ನೀವು […]