ಬ್ರಹ್ಮ ದೇವನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ 6 ಅಪರೂಪದ ಮಾಹಿತಿ : ಅರಳಿಮರ ಪರಿಚಯ ಚಿತ್ರಿಕೆ

ಬ್ರಹ್ಮದೇವ ಸರಸ್ವತಿಯನ್ನು ಮದುವೆಯಾಗಿದ್ದೇಕೆ? ಭೃಗು ಮುನಿ ಬ್ರಹ್ಮನಿಗೆ ಕೊಟ್ಟ ಶಾಪವೇನು? ಬ್ರಹ್ಮನ ಜೀವಿತಾವಧಿ ಎಷ್ಟು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ….  ತ್ರಿಮೂರ್ತಿಗಳಲ್ಲಿ ಬ್ರಹ್ಮನ ಸ್ಥಾನವೇನು? ಬ್ರಹ್ಮ ತನ್ನ ಮಗಳನ್ನೇ ಮದುವೆಯಾಗಿದ್ದೇಕೆ? ಬ್ರಹ್ಮನಿಗೇಕೆ ಪೂಜೆಯಿಲ್ಲ? ಬ್ರಹ್ಮ ಕಪಾಲ ಎಂದರೇನು? ಬ್ರಹ್ಮನ ಮಕ್ಕಳು ಯಾರು? ಬ್ರಹ್ಮನ ಜೀವಿತಾವಧಿ ಎಷ್ಟು? Advertisements

ನಾವು ಶಾಪದಿಂದ ಭೂಮಿಗೆ ಬಂದವರಲ್ಲ, ಭೂಮಿಯನ್ನೆ ಶಾಪವಾಗಿಸಿಕೊಂಡವರು!

ಭೂಮಿಯಲ್ಲಿ ಹುಟ್ಟುವುದು ಅಂದರೆ ಅದೊಂದು ಘೋರ ಶಿಕ್ಷೆ. ಭಗವದ್ಧಾಮದ ನಿಜದ ನೆಲೆಯಿಂದ, ನಿತ್ಯಾನಂದದ ಒಡಲಿಂದ ಭೂಮಿಯ ಬೆಂಕಿಗೆ ಬೀಳುವುದು ಸುಮ್ಮನೆ ಮಾತಲ್ಲ. ಭಾರತೀಯ ಪುರಾಣಗಳಲ್ಲಷ್ಟೆ ಅಲ್ಲ, ಸೆಮೆಟಿಕ್ ಧರ್ಮಗಳಲ್ಲೂ ಆ್ಯಡಮ್ ಮತ್ತು ಈವ್ (ಅಥವಾ ಆದಮ್ – ಹೌವ್ವಾ) ಪಾಪ ಫಲ ತಿಂದುದಕ್ಕಾಗಿ ಭಗವಂತನಿಂದ ಶಿಕ್ಷೆ ಪಡೆದು ಭೂಮಿಗೆ ಬಂದು ಬೀಳುತ್ತಾರೆ. ಒಟ್ಟಾರೆ ಅದೊಂದು ಭಯಾನಕ ಎನ್‍ಕೌಂಟರ್  ~ ಆನಂದಪೂರ್ಣ ಭಗವಾನ್ ಮಹಾವಿಷ್ಣುವಿನ ನಾಲ್ಕನೇ ಅವತಾರ ಮಾನವಾಕೃತಿಯ ಸಿಂಹ – ನರಸಿಂಹಾವತಾರ. ಮನೆಯ ಒಳಗೂ, ಹೊರಗೂ, ಭೂಮಿಯ […]

ಮೈದಾಸನ ಜೀವಕ್ಕೆರವಾದ ಕತ್ತೆ ಕಿವಿ  :  ಗ್ರೀಕ್ ಪುರಾಣ ಕಥೆಗಳು ~ 23

ನಿಮಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ವರ ಪಡೆದಿದ್ದ ಮೈದಾಸನ ಕಥೆ ಗೊತ್ತಿದೆ. ಆದರೆ ಅದೇ ಮೈದಾಸ್ ಶಾಪ ಪಡೆದು, ಕತ್ತೆ ಕಿವಿ ಮೂಡಿ, ಅದೇ ಕಾರಣಕ್ಕೆ ಜೀವವನ್ನೇ ಕಳೆದುಕೊಂಡ ಕಥೆ ಗೊತ್ತಿದೆಯೇ? ಇಲ್ಲಿದೆ, ದೊರೆ ಮೈದಾಸನ ಕತ್ತೆ ಕಿವಿಯ ಪ್ರಸಂಗ…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಒಮ್ಮೆ ಮೈದಾಸ್ ಅಪೋಲೋ ದೇವತೆಗೂ ಭೂಮಿಯ ಸಂಗೀತಗಾರ ಮಾರ್ಸಿಯಸ್’ನಿಗೂ ನಡೆದ ವಾದ್ಯ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಹೋಗಿದ್ದ. ಉಳಿದವರೆಲ್ಲ ಅಪೋಲೋ ದೇವತೆ ಪರ ತೀರ್ಪು ಕೊಟ್ಟರೆ, ಮೈದಾಸ್ ಮಾರ್ಸಿಯಸ್ ಪರ […]

ತಂದೆಯನ್ನೇ ಮೋಹಿಸಿದ ಮಿರ್ರಾ ಮಿರ್ ಮರವಾದಳು : ಗ್ರೀಕ್ ಪುರಾಣ ಕಥೆಗಳು ~ 14

ಮಿರ್ರಾ ವೆಸ್ಟರ್ನ್ ಕ್ಲಾಸಿಕ್’ಗಳಲ್ಲಿ ಹಲವು ಬಗೆಯಲ್ಲಿ ಕಥೆಯಾಗಿ ಹೆಣೆಯಲ್ಪಟ್ಟವಳು. ಸೈಪ್ರಸ್ ದ್ವೀಪದ ಈ ರಾಜಕುಮಾರಿ ಸುಗಂಧ ಸೂಸುವ ಮಿರ್ರ್ ಮರವಾಗಿದ್ದು ಹೇಗೆ ಗೊತ್ತೇ?  ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಸಿನಿರಸ್ ದೊರೆ ಸೈಪ್ರಸ್ ದ್ವೀಪವನ್ನು ಆಳುತ್ತಿದ್ದ. ಅವನಿಗೆ ಮಿರ್ರಾ ಎಂಬ ಚೆಂದದ ಮಗಳಿದ್ದಳು. (ಪಾಠಾಂತರಗಳಲ್ಲಿ ಅವಳಿಗೆ ಸ್ಮಿರ್ನಾ ಎಂಬ ಹೆಸರೂ ಇದೆ). ಅವಳು ಅದೆಷ್ಟು ಚೆಂದವೆಂದರೆ, ಮಿರ್ರಾಳ ತಾಯಿ “ನನ್ನ ಮಗಳು ಅಫ್ರೋದಿತೆಗಿಂತಲೂ ಸುಂದರಿ” ಎಂದು ಬೀಗುತ್ತಿದ್ದಳು. ಇದು ಶೃಂಗಾರ – ಸೌಂದರ್ಯಗಳ ಅಧಿದೇವತೆ […]

ಗ್ಲಾಕಸನನ್ನು ಕೊಂದು ತಿಂದ ನರಭಕ್ಷಕ ಕುದುರೆಗಳು : ಗ್ರೀಕ್ ಪುರಾಣ ಕಥೆಗಳು ~ 9

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಗ್ಲಾಕಸ್, ಕಾರಿಂಥದ ದೊರೆ ಸಿಸಿಫಸ್ ನ ಮಗ. ತಂದೆಯ ನಂತರ ಪಟ್ಟಕ್ಕೇರಿದ ಗ್ಲಾಕಸ್ ಒಬ್ಬ ಕ್ರೀಡಾ ವ್ಯಸನಿ ಕುದುರೆಗಳನ್ನು ರಥಕ್ಕೆ ಹೂಡಿ ಕಣಕ್ಕೆ ಇಳಿದನೆಂದರೆ ಸ್ಪರ್ಧೆಯಲ್ಲಿ ಅವನನ್ನು ಮೀರಿಸಲು ಯಾರಿಂದಲೂ ಆಗುತ್ತಿರಲಿಲ್ಲ. ಗ್ಲಾಕಸ್ ಗೆ ತನ್ನ ಕುದುರೆಗಳೆಂದರೆ ವಿಪರೀತ ಮೋಹ. ಅವನ ಲಾಯದಲ್ಲಿ ನೂರಾರು ಉನ್ನತ ತಳಿಯ ಕುದುರೆಗಳಿದ್ದವು. ಅವನು ಅವುಗಳಲ್ಲಿ ಕೆಲವನ್ನು ಆಯ್ದು ನರ ಮಾಂಸ ತಿನ್ನಿಸಿ ಬೆಳೆಸಿದ್ದ. ಆ ನರಭಕ್ಷಕ ಕುದುರೆಗಳು ಉನ್ಮತ್ತವೂ ಕ್ರೂರಿಯೂ ಆಗಿದ್ದವು. […]

ಪ್ರಪಂಚದ ಮೊಟ್ಟ ಮೊದಲ ಜೇಡ ಹುಟ್ಟಿದ ಕಥೆ : ಗ್ರೀಕ್ ಪುರಾಣ ಕಥೆಗಳು ~ 2

ಅಥೆನಾಳ ಶಾಪದಿಂದ ಭೂಮಿಯ ಮೇಲೆ ಮೊದಲ ಜೇಡದ ಸೃಷ್ಟಿಯಾಯಿತು. ಇಡ್ಮೊನ್ನ ಮಗಳು, ಶಪಿತ ಅರಕ್ನೆಯ ಹೆಸರಿನಿಂದಲೇ ಜೇಡ ಮತ್ತು ಎಂಟು ಕಾಲುಗಳ ಕೀಟಪ್ರಭೇದಕ್ಕೆ ‘ಅರಾಕ್ನಿಡಾ’ ಎಂಬ ಹೆಸರು ಬಂದಿರುವುದು! ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ ಕಲೆ ಮತ್ತು ಕರಕುಶಲ ದೇವತೆ ಅಥೆನಾಗೆ ತನ್ನಷ್ಟು ಚೆಂದ ಕಸೂತಿ ಹಾಕುವವರು ಯಾರೂ ಇಲ್ಲವೆಂದು ಜಂಭವಿತ್ತು. ಹಾಗೆ ಯಾರೂ ಇರಲೂಕೂಡದು ಅನ್ನೋದು ಅವಳ ಹೆಬ್ಬಯಕೆ. ಭೂಮಿಯಲ್ಲಿ ಅರಕ್ನೆ ಎಂಬ ಹುಡುಗಿಯುಬ್ಬಳಿದ್ದಳು. ಅವಳು ಇಡ್ಮೊನ್ ಎಂಬ ಕುರಿಗಾಹಿಯ ಮಗಳು. ಚಿಕ್ಕವಳಿರುವಾಗಿಂದಲೂ ಕಸೂತಿ ಹಾಕುವುದು ಅವಳ […]

ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಪುತ್ರಕನ ಜನನ

ಈವರೆಗೆ…. ಶಪಿತ ಪುಷ್ಪದಂತನು ಕೌಶಾಂಬಿಯಲ್ಲಿ ವರರುಚಿ ಎನ್ನುವ ಹೆಸರಿನಿಂದ ಜನಿಸಿದನು. ವಿಂಧ್ಯಾಟವಿಯಲ್ಲಿ ಕಾಣಭೂತಿ ಎಂಬ ಹೆಸರಿನ ಪಿಶಾಚವಾಗಿ ಜೀವಿಸುತ್ತಿದ್ದ ಶಪಿತ ಯಕ್ಷ ಸುಪ್ರತೀಕನನ್ನು ಭೇಟಿಯಾದನು. ಕಾಣಭೂತಿಯ ಕೋರಿಕೆಯಂತೆ ತನ್ನ ವರರುಚಿಯ ಜನ್ಮದ ವೃತ್ತಾಂತವನ್ನು ಹೇಳತೊಡಗಿದನು. ವರರುಚಿಗೆ ವ್ಯಾಡಿ ಮತ್ತು ಇಂದ್ರದತ್ತರ ಸಂಪರ್ಕ ದೊರೆತು, ಮೂವರೂ ವರ್ಷೋಪಾಧ್ಯಾಯ ಪಂಡಿತನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಮತ್ತು ವರರುಚಿಯು ವರ್ಷೊಪಾಧ್ಯಾಯನಲ್ಲಿ ಅವರು ನೆಲೆಸಿದ್ದ ಪಾಟಲೀಪುತ್ರ ನಗರದ ಕಥೆಯನ್ನು ಕೇಳಲಾಗಿ, ಗುರುವು ಹೇಳಲು ಆರಂಭಿಸಿದನು. ಬಹಳ ಹಿಂದೆ ಕಾಂಚನಪಾತ ಎಂಬ ದೇವಲೋಕದ ಆನೆಯು ಉಶೀನರ […]

ಕಥಾ ಸರಿತ್ಸಾಗರ : ವರರುಚಿಯಾದ ಪುಷ್ಪದಂತ ಮತ್ತು ಕಾಣಭೂತಿಯಾದ ಸುಪ್ರತೀಕರ ಭೇಟಿ

ಕಥೆಗಳನ್ನು ಕದ್ದು ಕೇಳಿದ ಪುಷ್ಪದಂತ ಮತ್ತು ಆತನ ಪರವಹಿಸಿದ ಮಾಲ್ಯವಂತರು ಪಾರ್ವತಿಯಿಂದ ಶಾಪ ಪಡೆದುದನ್ನೂ ಕಾಣಭೂತಿ ಎಂಬ ಪಿಶಾಚದೊಡನೆ ವ್ಯವಹರಿಸುವ ಮೂಲಕ ಶಾಪವಿಮೋಚನೆ ಆಗುವುದೆಂಬ ಅಭಯ ಪಡೆದುದನ್ನೂ ಹಿಂದಿನ ಕಥೆಯಲ್ಲಿ ಓದಿದ್ದೀರಿ. ಈಗ ಶಪಿತ ಪುಷ್ಪದಂತನು ಭೂಮಿಯಲ್ಲಿ ಎಲ್ಲಿ ಹುಟ್ಟಿದನು, ಮತ್ತು ಕಾಣಭೂತಿಯನ್ನು ಭೇಟಿಯಾದಾಗ ನಡೆದುದೇನು ಎಂದು ನೋಡೋಣ. ಪಾರ್ವತಿಯಿಂದ ಶಾಪ ಪಡೆದ ಪುಷ್ಪದಂತನು ಕೌಶಾಂಬಿ ಎಂಬ ಮಹಾನಗರದಲ್ಲಿ ಕಾತ್ಯಾಯನ ವಂಶದಲ್ಲಿ ವರರುಚಿ ಎಂಬ ಹೆಸರಿನಿಂದ ಹುಟ್ಟಿದನು ಹಾಗೂ ಮಾಲ್ಯವಂತನು ಸುಪ್ರತಿಷ್ಠಿತ ಎಂಬ ನಗರದಲ್ಲಿ ಗುಣಾಢ್ಯನೆಂಬ ಹೆಸರಿನಿಂದ […]

ಕಥಾಸರಿತ್ಸಾಗರ : ಕದ್ದು ಕಥೆ ಕೇಳಿದ ಪುಷ್ಪದಂತನಿಗೆ ಶಾಪ

ಸೋಮದೇವನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರವು 21,500 ಶ್ಲೋಕಗಳುಳ್ಳ ಕೃತಿ. ನೂರಾರು ಕಥೆಗಳು ಬಂದು ಸೇರಿ ಉಂಟಾದ ಕಥಾ ಸಮುದ್ರವಿದು. ಆದ್ದರಿಂದಲೇ ಇದಕ್ಕೆ ‘ಕಥಾ ಸರಿತ್ಸಾಗರ’ ಎಂಬ ಹೆಸರು. ಈ ಕಥೆಗಳನ್ನು ಹಲವು ಆಕರಗಳಿಂದ ಸಂಗ್ರಹಿಸಿ, ಸರಳವಾಗಿ ಅನುವಾದಿಸಿ ನೀಡುವ ಪ್ರಯತ್ನವಿದು…  ಕೈಲಾಸದಲ್ಲಿ ಒಮ್ಮೆ ಪಾರ್ವತಿಯು ಶಿವನಿಗೆ ಕಥೆ ಹೇಳೆಂದು ಪೀಡಿಸಿದಳು. ಶಿವನು ತನ್ನ ಪ್ರೀತಿಯ ಮಡದಿಯ ಕೋರಿಕೆಯನ್ನು ನಿರಾಕರಿಸಲಾಗದೆ, ವಿದ್ಯಾಧರರ ಕಥೆ ಹೇಳುವುದಾಗಿ ಒಪ್ಪಿಕೊಂಡನು. ಆಗ ಪಾರ್ವತಿಯು, “ನೀನು ಹೇಳುವ ಕಥೆಯನ್ನು ನಾನೊಬ್ಬಳೇ ಕೇಳಬೇಕು” ಎಂದು ತಾಕೀತು ಮಾಡಿ, […]