ವಿದ್ಯಾಧಿದೇವತೆಯನ್ನು ಸ್ತುತಿಸುವ ಶಾರದಾ ಭುಜಂಗ ಪ್ರಯಾತ ಸ್ತೋತ್ರ

ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠವನ್ನು ಸ್ಥಾಪಿಸಿದ ಶ್ರೀ ಶಂಕರರು ಶಾರದಾಷ್ಟಕವನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ಜ್ಞಾನದಾಯಿನಿ ಶಾರದೆಯ ಈ ಸ್ತೋತ್ರವು ಶಾರದಾಭುಜಂಗಪ್ರಯಾತ ಸ್ತೋತ್ರವೆಂದೂ ಕರೆಯಲ್ಪಡುತ್ತದೆ. ಈ ಸ್ತೋತ್ರದ ಮೂಲ ಮತ್ತು ಕನ್ನಡ ಭಾವಾರ್ಥ ಇಲ್ಲಿದೆ. ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ | ಸದಾಸ್ಯೇಂದುಬಿಂಬಾಂ ಸದಾನೋಷ್ಠಬಿಂಬಾಂ ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || 1 || ಭಾವಾರ್ಥ : ಅಮೃತದಿಂದ ತುಂಬಿರುವ ವಕ್ಷವುಳ್ಳ, ತನ್ನ ಅನುಗ್ರಹವನ್ನು ಭಕ್ತರ ಮೇಲೆ ಹರಿಸಲು ಸದಾ ಸಿದ್ಧವಾಗಿರುವ; ಸತ್ಕಾರ್ಯ ನಡೆಸುವ ಸದ್ಭಕ್ತರ ಯೋಗಕ್ಷೇಮ ನೋಡಿಕೊಳ್ಳುವ; […]