ಸಾವನ್ನು ನೋಡಿಯೂ ಶಾಶ್ವತರಂತೆ ವರ್ತಿಸುವ ಮೂರ್ಖತನ : ಸುಭಾಷಿತ

ಪ್ರತಿದಿನವೂ ಸಾವಿಗೆ ಸಾಕ್ಷಿಯಾಗುತ್ತಲೇ ಇರುವ ನಾವು ಚಿರಂಜೀವಿಗಳಂತೆ ಕಾಮಿಸುತ್ತೇವೆ. ಇದಕ್ಕಿಂತ ಆಶ್ಚರ್ಯದ ಸಂಗತಿ ಯಾವುದಿದೆ? ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಂ | ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || ಮಹಾಭಾರತ, ವನಪರ್ವ || “ಪ್ರತಿದಿನವೂ ಅಸಂಖ್ಯ ಪ್ರಾಣಿಗಳು ಯಮಪುರಿಗೆ ತೆರಳುತ್ತಲೇ ಇರುತ್ತವೆ. ಇದನ್ನು ನೋಡಿಯೂ ಉಳಿದವರು ತಾವು ಶಾಶ್ವತವಾಗಿರಬೇಕೆಂದು ಇಚ್ಛಿಸುತ್ತಾರೆ. ಲೋಕದಲ್ಲಿ ಇದಕ್ಕಿಂತ ಹೆಚ್ಚಿನ ಆಶ್ಚರ್ಯ ಯಾವುದಿದೆ?” – ಇದು ಮಹಾಬಾರತದ ವನಪರ್ವದಲ್ಲಿ ಬರುವ ಸುಭಾಷಿತ.  ನಾವು ಪ್ರತಿನಿತ್ಯ ಒಂದಲ್ಲ ಒಂದು ಸಾವಿನ ಸುದ್ದಿ ಕೇಳುತ್ತಲೇ ಇರುತ್ತೇವೆ. […]

ಗುರುತೆಂಬುದು ಕಡಲ ತಡಿಯ ಗೂಡು

ಶಾಶ್ವತತೆಯ ವ್ಯಸನವು ನಮ್ಮಲ್ಲಿ ಸ್ವಾರ್ಥ ಬುದ್ಧಿಯನ್ನೂ ಮಾತ್ಸರ್ಯವನ್ನೂ ಬೆಳೆಸುತ್ತದೆ. ನಮ್ಮ ಅಪೇಕ್ಷೆ ಕೈಗೂಡದೆ ಹೋಗಬಹುದು ಎನ್ನುವ ಅಸ್ಥಿರತೆ ನಮ್ಮನ್ನು ಕ್ರೋಧಕ್ಕೆಡೆ ಮಾಡುತ್ತದೆ. ಎಷ್ಟೆಂದರೂ ಅಸಹಾಯಕತೆಯೇ ಕೋಪಕ್ಕೆ ಮೂಲವಲ್ಲವೆ? ಈ ಎಲ್ಲದರ ಮೊತ್ತವಾಗಿ ಖಿನ್ನತೆ, ಸಂಕುಚಿತತೆಗಳು ನಮ್ಮಲ್ಲಿ ಮೊಳೆಯುತ್ತವೆ ~ ಆನಂದಪೂರ್ಣ ಚಿಕ್ಕ ಮಕ್ಕಳು ಕಡಲ ತಡಿಯಲ್ಲಿ ಕಪ್ಪೆ ಗೂಡು ಕಟ್ಟಿ ನಲಿಯುತ್ತವೆ. ಎಷ್ಟು ಬಾರಿ ಸಾಗರದಲೆಗಳು ಬಂದು ಮರಳಿನ ಗೂಡು ಕೆಡವಿ ಸೆಳೆದೊಯ್ದರೂ ಅವಕ್ಕೆ ಬೇಸರವಿಲ್ಲ. ಅದೇ ಹಿಂದಿನ ಉತ್ಸಾಹದಲ್ಲಿ ಚಪ್ಪಾಳೆ ತಟ್ಟುತ್ತ ಪುನಃ ಗೂಡು ಕಟ್ಟುವ […]

ನಿಮಿಷದಲ್ಲಿ ಕರಗುವ ಮಂಜುಗಡ್ಡೆಯೂ ಕೀಟಕ್ಕೆ ಶಾಶ್ವತವೇ!

ಮನುಷ್ಯನ ಶಾಶ್ವತದ ಪರಿಕಲ್ಪನೆ ಎಂಬುದು ಸಾಪೇಕ್ಷವಾದುದು. ಈ ಸಾಪೇಕ್ಷವಾದ ಶಾಶ್ವತದ ಪರಿಕಲ್ಪನೆಯಿಂದ ಬಿಡುಗಡೆ ಪಡೆದು ನಿರಪೇಕ್ಷವಾದ ಶಾಶ್ವತ ಯಾವುದು ಎಂಬುದನ್ನು ಕಂಡುಕೊಳ್ಳುವುದಕ್ಕೆ ಎಲ್ಲಾ ಆಚಾರ್ಯರು ಪ್ರಯತ್ನಿಸಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ~ ಅಚಿಂತ್ಯ ಚೈತನ್ಯ ಜಗತ್ತು ಸತ್ಯವೇ ಅಥವಾ ಮಿಥ್ಯೆಯೇ? ಭಾರತೀಯ ತತ್ವಪರಂಪರೆಯನ್ನು ಬೆಳೆಸಿದ ಹಲವು ಆಚಾರ್ಯರು ಈ ಪ್ರಶ್ನೆಗೆ ಬಹಳ ಸುದೀರ್ಘವಾದ ಉತ್ತರಗಳನ್ನೇ ನೀಡಿದ್ದಾರೆ. ಅವುಗಳದ್ದೊಂದು ಸಮೀಕ್ಷೆಯನ್ನು ನಡೆಸುವುದಕ್ಕೇ ವರ್ಷಗಳ ಅಧ್ಯಯನ ಅಗತ್ಯವಿದೆ. ಆ ಸಂಕೀರ್ಣ ಚರ್ಚೆಗೆ ಹೋಗದೆ ಸರಳವಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. […]

ತಾವೋ ತಿಳಿವು #13 : ತಾವೋ ಯಾಕೆ ಶಾಶ್ವತ?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಶಾಶ್ವತ, ಅನಂತ. ಯಾಕೆ ಶಾಶ್ವತ ? ಅದು ಹುಟ್ಟೇ ಇಲ್ಲ ಎಂದಮೇಲೆ ಸಾಯುವ ಮಾತೆಲ್ಲಿಂದ ಬಂತು. ಯಾಕೆ ಅನಂತ ? ಸ್ವಂತದ್ದು ಏನೂ ಇಲ್ಲ ಎಂದಮೇಲೆ ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ. ಸಂತ ಹಿಂದಿದ್ದಾನೆ, ಹಾಗೆಂದೇ ತಾವೋ ಮುಂದಿದೆ. ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ ಎಲ್ಲದರಲ್ಲೂ ಒಂದಾಗಿದೆ. ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ ಪರಿಪೂರ್ಣವಾಗಿ ಮೈದುಂಬಿಕೊಂಡಿದೆ.