ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ

ಶಿಕ್ಷಣ ಪಡೆದ ವ್ಯಕ್ತಿ ಹೆಚ್ಚು ಜ್ಞಾನಿಯೂ ವಿನೀತನೂ ಧೀರನೂ ಆಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚು ಶಿಕ್ಷಣದಿಂದ ಹೆಚ್ಚು ಅಹಂಕಾರ ಎನ್ನುವುದಾದರೆ ಅಂತಹ ಶಿಕ್ಷಣವಾದರೂ ಏಕೆ ಹೇಳಿ!? ಸ್ವಾಮಿ ವಿವೇಕಾನಂದರ ಮಾತೊಂದಿದೆ. “ಅನಕ್ಷರಸ್ಥರಿಗೆ ಬೆಳಕು ಕೊಡಿ, ಅಕ್ಷರಸ್ಥರಿಗೆ ಸ್ವಲ್ಪ ಹೆಚ್ಚಿನ ಬೆಳಕು ಕೊಡಿ” ಎಂದು ~ ಆನಂದಪೂರ್ಣ ‘ಶಿಕ್ಷಣವೆಂಬುದು ಮಾನವನೊಳಗೆ ಅದಾಗಲೇ ಹುದುಗಿದ್ದ ಪರಿಪೂರ್ಣತೆಯನ್ನು ವ್ಯಕ್ತಗೊಳಿಸುವ ಪ್ರಯತ್ನ’ ಹಾಗೆಂದವರು ಸ್ವಾಮಿ ವಿವೇಕಾನಂದರು. ಹೊರಗಿನಿಂದ ತಲೆಯೊಳಗೆ ಒತ್ತಾಯವಾಗಿ ತುರುಕಿದ್ದು ಶಿಕ್ಷಣವಾಗಲಾರದು. ಕಂಠಸ್ಥ ಮಾಡಿಕೊಂಡು ಮರು ಒಪ್ಪಿಸಿದ ಪಾಠ ಶಿಕ್ಷಣವಾಗಲಾರದು. […]

ವಿವೇಕ ವಿಚಾರ : ವಿದ್ಯಾಭ್ಯಾಸದ ಮಹತ್ವ

ಜನರಿಗೆ ವಿದ್ಯಾಭ್ಯಾಸ ಅತ್ಯಗತ್ಯವಾಗಿ ಬೇಕು. ಈ ದಿನಗಳಲ್ಲಿ ಡೆಮಾಕ್ರಸಿಯ ಮಾತನಾಡುತ್ತಿರುವರು. ಡೆಮಾಕ್ರಸಿ ಎಂದರೆ ಜನರೆಲ್ಲ ಒಂದೇ ಸಮಾನವಾಗಿರುವ ವ್ಯವಸ್ಥೆ. ಯಾವುದೇ ವ್ಯಕ್ತಿ ತಾನು ಇತರರಿಗೆ ಸರಿಸಮಾನ ಎಂದು ತಿಳಿಯುವುದು ಹೇಗೆ? ಅವರ ಬುದ್ಧಿ ಚುರುಕಾಗಿರಬೇಕು, ಮೂಢನಂಬಿಕೆಗಳಿಂದ ಮುಕ್ತವಾಗಿರಬೇಕು. ತನ್ನ ಸತ್ಯವನ್ನು, ತನ್ನ ಶಕ್ತಿಯನ್ನು ಅರಿತಿರಬೇಕು. ಮತ್ತು ತನ್ನೊಳಗಿನ ಶಕ್ತಿಯನ್ನು ಹೊರಗಿನವರಾರೋ ಕೊಟ್ಟಿರುವುದಲ್ಲ, ಅದನ್ನು ತಾನೇ ಗಳಿಸಿರುವುದು ಎಂಬ ಅರಿವಿರಬೇಕು. ಈ ಅರಿವನ್ನು ಹೊಂದುವ ಕ್ಷಣವೇ ವ್ಯಕ್ತಿಯು ಸ್ವತಂತ್ರರಾಗುವರು. ಮತ್ತು ಈ ಸ್ವಾತಂತ್ರ್ಯ ಅವರಿಗೆ ಸಮಾನತೆಯ ಅರಿವನ್ನು ತಂದುಕೊಡುವುದು. […]

ಸಮಾಜ ಸುಧಾರಣೆಗೆ ಮುನ್ನ ಶಿಕ್ಷಣ ನೀಡುವುದು ಮುಖ್ಯ : ವಿವೇಕ ವಿಚಾರ

ಪ್ರತಿಯೊಬ್ಬರೂ ತಮ್ಮ ಮೋಕ್ಷಕ್ಕೆ ತಾವೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡಾ. ಉತ್ತಮ ಸಂಸ್ಥೆಗಳು ಬರುವವರೆಗೆ ಹಳೆಯ ಸಂಸ್ಥೆಗಳನ್ನು ನಾಶ ಮಾಡುವುದು ವಿನಾಶಕಾರಿ. ಆದ್ದರಿಂದ, ಯಾರಿಗೆ ಸುಧಾರಣೆ ಬೇಕಾಗಿದೆಯೋ ಮೊದಲು ಅವರನ್ನು ಅಣಿ ಮಾಡಿ. ಹಿತವಾದ ಸಾಮಾಜಿಕ ಬದಲಾವಣೆಗಳೆಲ್ಲ ನಮ್ಮ ಆಂತರ್ಯದಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಪ್ರವೃತ್ತಿಗಳ ಅಭಿವ್ಯಕ್ತಿಯೇ ಆಗಿವೆ. ಅವು ಬಲಶಾಲಿಯಾಗಿದ್ದರೆ, ಹೊಂದಿಕೊಂಡಿದ್ದರೆ, ಸಮಾಜ ಅದಕ್ಕೆ ಸರಿಯಾಗಿ ಅಣಿಯಾಗಿರುವುದು. ಸಮಾಜ ಸುಧಾರಣೆಯ ಗೋಜಿಗೆ ಹೋಗಬೇಡ. ಮೊದಲು ಆಧ್ಯಾತ್ಮಿಕ ಸುಧಾರಣೆಯಾಗಬೇಕು. ಅದಿಲ್ಲದೆ ಬೇರೆ ಯಾವ ಸುಧಾರಣೆಯೂ […]