ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 3| ಗಾಂಧೀಜಿಯ ದೇಶ ಸೇವೆ ಮತ್ತು ಪರಮಹಂಸ ಪರಂಪರೆಯ ಚಿಂತನೆ

“ಮಹಾತ್ಮಾ ಗಾಂಧಿ ಮತ್ತು ಇತರ ದೇಶಭಕ್ತರಾದ ಮುಂದಾಳುಗಳು ನಿಜವಾದ ಸೇವಾಕಾರ್ಯದಲ್ಲಿ ತೊಡಗುತ್ತಿಲ್ಲ ಎನ್ನುತ್ತೀರಾ?” ಎಂದು ಭಕ್ತ ಕೇಳಿದ ಪ್ರಶ್ನೆಗೆ ಸ್ವಾಮಿ ಶಿವಾನಂದರು ಉತ್ತರಿಸತೊಡಗಿದರು…  ಹಿಂದಿನ ಲೇಖನವನ್ನು ಇಲ್ಲಿ ಓದಿ : https://aralimara.com/2019/01/02/kuvempu-3/ “ಛೆ ಎಲ್ಲಾದರೂ ಉಂಟೆ? ಅದಲ್ಲ ನನ್ನ ಮಾತಿನ ಅರ್ಥ” ಅಂದರು ಸ್ವಾಮೀಜಿ. “ಅವರ ತ್ಯಾಗ, ಅವರ ಮನೋದಾರ್ಢ್ಯ, ಅವರ ರಾಷ್ಟ್ರಸೇವೆ ಎಲ್ಲವೂ ಸ್ತುತ್ಯರ್ಹವೇ. ಅವರ ಜೀವನ ನಿಜವಾಗಿಯೂ ಮಹಿಮಾಮಯವಾದದ್ದೇ; ಅನುಸರಣೀಯವಾದದ್ದೇ; ಭರತ ಖಂಡಕ್ಕೆ ಯಾವುದು ಶ್ರೇಯಸ್ಕರ ಎಂದು ಅವರು ಭಾವಿಸಿದ್ದಾರೋ ಅದಕ್ಕಾಗಿ ಅವರು ಮನಃಪೂರ್ವಕವಾಗಿ ಸೇವೆ […]

ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ ~ 2| ಶಿವಾನಂದರ ಉತ್ತರ

ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ (ಇಲ್ಲಿ ನೋಡಿ : https://aralimara.com/2019/01/01/kuvempu-2/) ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು ಹೀಗೆ ದಾಖಲಿಸಿದ್ದಾರೆ | ಕನ್ನಡಕ್ಕೆ : ಕುವೆಂಪು ಸ್ವಾಮಿ ಶಿವಾನಂದರ ಮುಖಮಂಡಲದಪ್ರಶಾಂತಿ ಒಯ್ಯನೆ ಪರಿವರ್ತಿತವಾಯಿತು. ಒಂದು ಗುರುತರವಾದ ಗಂಭೀರಮುದ್ರೆ ಅಲ್ಲಿ ಸಿಂಹಾಸನಸ್ಥವಾದಂತೆ ತೋರಿತು. ತುಸು ಹೊತ್ತಾದ ಮೇಲೆ ಅವರ ಮೌನ ಮೊಳಗಿತಿಂತು : “ನೋಡು, ಕಾ… ಭಗವದವತಾರದ ನಡೆನುಡಿ ರೀತಿನೀತಿ ಸಾಂಆನ್ಯ ಮಾನವನ ವಿಚಾರಬುದ್ಧಿಗೆ ಮೀರಿವೆ. ನೀನಾಗಲೀ ರಾಷ್ಟ್ರವಾಗಲೀ […]