ದಾರ್ಶನಿಕ ಕವಿಯೆಂದೇ ಖ್ಯಾತರಾಗಿದ್ದ ಶ್ರೀ ಕುವೆಂಪು ಅವರು ರಾಮಕೃಷ್ಣ ಪಂಥದ ಅನುಯಾಯಿಯೂ ಆಗಿದ್ದರು. ಸ್ವಾಮಿ ಶಿವಾನಂದರ ಶಿಷ್ಯರಾಗಿ ಅವರ ಗರಡಿಯಲ್ಲಿ ಅಧ್ಯಾತ್ಮವಿಚಾರಗಳನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಪ್ರತಿಯೊಂದು ಕೃತಿಯಲ್ಲೂ ಅಧ್ಯಾತ್ಮ ಸ್ಪರ್ಶ ಕಾಣಿಸುವ ಕುವೆಂಪು, ಸ್ವತಂತ್ರ ಆಧ್ಯಾತ್ಮಿಕ ಕೃತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ‘ಗುರುವಿನೊಡನೆ ದೇವರಡಿಗೆ’ ಕೂಡಾ ಒಂದು. ಶಿವಮಹಿಮ್ನಃ ಸ್ತೋತ್ರದ ಅನುವಾದವನ್ನು ಈ ಕೃತಿಯ ‘ಶಿವಸ್ತೋತ್ರ ಮತ್ತು ನಿರ್ವಿಕಲ್ಪ ಸಮಾಧಿ’ ಎಂಬ ಅಧ್ಯಾಯದಿಂದ ಆಯ್ದುಕೊಳ್ಳಲಾಗಿದೆ. ಮಹಿಮ್ನಃ ಪಾರಂ ತೇ ಪರಮವಿದುಷೋ ಯದ್ಯಸದೃಶೀ ಸ್ತುತಿರ್ಬ್ರಹ್ಮಾದಿನಾಮಪಿ ತದವಸನ್ನಾಸ್ತ್ವಯಿ ಗಿರಃ | […]
ಶಿವ ಪಂಚಾಕ್ಷರಿ ಸ್ತೋತ್ರ ಮತ್ತು ಭಾವಾರ್ಥ : ಶಿವರಾತ್ರಿ ವಿಶೇಷ
“ನಮಃ ಶಿವಾಯ” ಎಂಬ ಶಿವ ಪಂಚಾಕ್ಷರಿ ಮಂತ್ರದ ಪ್ರತಿ ಅಕ್ಷರದ ಮಹತ್ವ ಈ ಸ್ತೋತ್ರದಲ್ಲಿದೆ…
ಶಿವನ 10 ಪ್ರಮುಖ ಹೆಸರುಗಳು : ಅರ್ಥ ಮತ್ತು ಚಿತ್ರ ಸಹಿತ
ಪ್ರತಿಯೊಂದು ಹೆಸರೂ ಭಗವಂತನ ಹೆಸರೇ. ಹಾಗಿದ್ದೂ ಕೆಲವು ಗುಣವಿಶೇಷ ಮತ್ತು ರೂಪಗಳೊಡನೆ, ಅವತಾರಗಳೊಡನೆ ಭಗವಂತ ನಿರ್ದಿಷ್ಟವಾಗಿ ಗುರುತಿಸಲ್ಪಡುತ್ತಾನೆ. ಭಗವಾನ್ ಮಹಾಶಿವನ ಅಂತಹಾ ನೂರಾರು ಹೆಸರುಗಳಲ್ಲಿ 10 ಪ್ರಮುಖ ಹೆಸರುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ.
ಶಿವಸ್ತುತಿ : ಚಿತ್ರ – ಸ್ತೋತ್ರ
ಕಾಲಭೈರವಾಷ್ಟಕದ ಹಿನ್ನೆಲೆಯಲ್ಲಿ ಸುಂದರವಾದ, ಮಂಗಳಕರ ಶಿವ ಮಹಾದೇವನ ಚಿತ್ರ ಬಿಡಿಸುವ ಈ ವಿಡಿಯೋ ನೋಡಿ…
ತಂ ವಂದೇ ಸಾತ್ವಿಕಂ ಶಿವಂ : ಶಿವ ಜಾಗರಕ್ಕೊಂದು ತಾತ್ತ್ವಿಕ ಚಿಂತನೆ
ತಾಂಡವ ನರ್ತನದ ಈ ರಾತ್ರಿಯಲ್ಲಿ, ಮೂರರಲ್ಲಿ ಒಂದಾಗಿಬಿಡುವ ಶಿವನ ರೂಪದ ಬಗ್ಗೆ ಚಿಂತಿಸುವುದಕ್ಕಾಗಿ ಕೆಲ ಕ್ಷಣಗಳನ್ನಾದರೂ ನಾವು ವಿನಿಯೋಗಿಸಬೇಕಿದೆ… | ಅಚಿಂತ್ಯ ಚೈತನ್ಯ
ಸೋಮಶೇಖರ ಶಿವನ 21 ಹೆಸರುಗಳು ಮತ್ತು ಅರ್ಥ
ಶಿವರಾತ್ರಿಯಂದು ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ ಎಂಬ ನಂಬಿಕೆ ಇದೆ. ಈ ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ :
ಗೌರಿ ಭೂಮಿಗೆ ಬಂದಿದ್ದೇಕೆ : ಹೀಗೊಂದು ಚೆಂದದ ಕಥೆ
ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ
ಪ್ರೇಮದಲಿ ಜಗವ ಲಯಗೊಳಿಸುವ ಶಿವ : ಅರಳಿಮರದಲ್ಲಿ ಪ್ರಕಟಗೊಂಡ ಮೊಟ್ಟಮೊದಲ ಲೇಖನ
ಶಿವನ ಈ ಎಲ್ಲ ಪ್ರೇಮಗಾಥೆಗಳು ವಾಚ್ಯವಾಗಿಯೂ ಸೂಚ್ಯವಾಗಿಯೂ ಮಹತ್ ತತ್ತ್ವವನ್ನು ಸಾರುವಂಥವು. ಆಧ್ಯಾತ್ಮಿಕ ಸಾಧಕರಿಗೆ ಶಿವ ಶಿವೆಯರ ಸಾಂಗತ್ಯ ತಾವು ಪರಮತತ್ತ್ವದಲ್ಲಿ ಲೀನವಾಗುವ ಅಥವಾ ಲಯಗೊಳ್ಳುವ ಬಗೆಗೊಂದು ಪಾಠ. ಹಾಗೆಂದೇ ಶಿವ ಶಿಷ್ಟಕ್ಕೆ ಎಷ್ಟೋ ಜನಪದಕ್ಕೂ ಅಷ್ಟೇ ಇಷ್ಟದ ದೈವ ~ ಚೇತನಾ ತೀರ್ಥಹಳ್ಳಿ ಬಹುಶಃ ಪ್ರಾಚೀನ ಭಾರತದ ಪ್ರೇಮಕಥೆಗಳಲ್ಲಿ ಶಿವ ಮಹಾಕಾಲನ ಪ್ರೇಮಗಾಥೆಯಷ್ಟು ವಿಶಿಷ್ಟವೂ ವಿಭಿನ್ನವೂ ಆದುದು ಮತ್ತೊಂದಿಲ್ಲ. ಶಿವ ಅತ್ಯಂತ ಪ್ರೇಮಮಯಿ. ಭಕ್ತವತ್ಸಲ. ಕೇಳಿದ್ದೆಲ್ಲ ನಿಂತ ಕಾಲಲ್ಲೇ ಕೊಟ್ಟು ಸಂತೋಷಪಡಿಸುವ ಆಶುತೋಷನೆಂದೇ ಪ್ರಸಿದ್ಧ. ಶಿವನ […]
ಬಡತನ ನಿವಾರಿಸುವ ದಾರಿದ್ರ್ಯದಹನ ಶಿವಸ್ತೋತ್ರ : ನಿತ್ಯಪಾಠಗಳು
ದಾರಿದ್ರ್ಯವು ಭೌತಿಕ ಅಥವಾ ಸಂಪತ್ತಿಗೆ ಹಾಗೂ ಆಧ್ಯಾತ್ಮಿಕ ಬಡತನಕ್ಕೂ ಅನ್ವಯಿಸುತ್ತದೆ. ಮಹರ್ಷಿ ವಸಿಷ್ಠರ ‘ದಾರಿದ್ರ್ಯ ದಹನ ಶಿವ ಸ್ತೋತ್ರ’ವು ಈ ಎಲ್ಲ ವಿಧದ ಬಡತನದ ದುಃಖಗಳನ್ನು ನಾಶಮಾಡೆಂದು ಮಹಾದೇವನಲ್ಲಿ ಬೇಡುವ ಪ್ರಾರ್ಥನೆಯಾಗಿದೆ. ವಿಶ್ವೇಶ್ವರಾಯ ನರಕಾರ್ಣವ ತಾರಣಾಯ ಕರ್ಣಾಮೃತಾಯ ಶಶಿಶೇಖರ ಧಾರಣಾಯ ಕರ್ಪೂರಕಾಂತಿಧವಲಾಯ ಜಟಾಧರಾಯ ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 1 || ತಾತ್ಪರ್ಯ : ಯಾರು ಸಮಸ್ತ ವಿಶ್ವದ ಅಧಿಪತಿಯೋ, ಯಾರು ನಮ್ಮನ್ನು ನರಕ ಸದೃಶವಾದ ಸಂಸಾರ ಸಾಗರವನ್ನು ದಾಟಲು ಸಹಕರಿಸುತ್ತಾರೋ, ಯಾರ ಪರಮ […]
ಶಿವ ಸುಪ್ರಭಾತ ಪೂರ್ಣ ಪಾಠ
ತ್ರಿಮೂರ್ತಿಗಳಲ್ಲಿ ಮಹಾದೇವ ಮತ್ತು ಮಹಾವಿಷ್ಣು ಪೂಜೆಗೊಳ್ಳುವ ಜನಪ್ರಿಯ ದೇವತೆಗಳು. ವಿಷ್ಣುವನ್ನು ಸ್ತುತಿಸುವ ವೆಂಕಟೇಶ್ವರ ಸುಪ್ರಭಾತವಿರುವಂತೆ ಶಿವಸ್ತುತಿಯ ಶಿವ ಸುಪ್ರಭಾತವೂ ಇದೆ. ಅದರ ಸಂಪೂರ್ಣ ಪಾಠ ಇಲ್ಲಿದೆ. ಇದನ್ನು ರಚಿಸಿದವರ ಕುರಿತು ಮಾಹಿತಿ ಇಲ್ಲ. ಸ್ನಾತ್ವಜಲೇ ಶೀತಲೀತಾನ್ತರಂಗಃ ಸ್ಪ್ರುಷ್ಟ್ವಾಚಾ ಪುಷ್ಪಾಣಿಸುವಾಸಿತಾನ್ಗಃ ದ್ವಿಜಂತಿ ಪ್ರಭಾತ್ತ ಮರುತ್ತರಂಗಾಃ ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೧।। ನಂದೀಶ್ಚರಾಮ್ಭ ನಿನಾದಮ ಮನೋಗ್ಯಾಮ ವರ್ಷಾಬ್ಧ ಗರ್ಜ್ಯಾಮ ಇವ ಮಾನ್ಯ ಮಾನಃ ಕೇಕೀಕುಮಾರಸ್ಯ ಕರೋತಿ ಅಮೃತಾಂ ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೨।। ಲೋಕೈಕಬಂಧುಂ ಪ್ರಸವಿಷ್ಯತೀತಿ ಪ್ರಾಚೀನ […]