ದೀಪದಿನಂ ಹರತು ವೋ ದುರಿತಂ : ದೀಪಾವಳಿ ಶುಭಾಶಯಗಳು

‘ಅರಳಿಮರ’ದ ಎಲ್ಲ ಓದುಗರಿಗೂ ಮತ್ತು ಬರಹಗಾರರಿಗೂ ‘ಅರಳಿ ಬಳಗ’ದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸಾರುವ ಆಶಯ ಶ್ಲೋಕ ಇಲ್ಲಿದೆ…

2019 : ಅರಳಿಮರ exclusive calendar

ಕಾಲ, ಬೊಗಸೆಗೆ ದಕ್ಕದ ಒಮ್ಮುಖ ಹರಿವು. ಅದು ಅಳತೆಗೆ ನಿಲುಕದ್ದು. ಆದರೂ ನಮ್ಮ ಅನುಕೂಲಕ್ಕಾಗಿ ಸೂರ್ಯನ ಉದಯಾಸ್ತಮಾನಗಳ ಆಧಾರದಲ್ಲಿ ದಿನದಿಂದ ಹಿಡಿದು ವರ್ಷದ ವರೆಗೆ ಕಾಲಮಾನವನ್ನು ನಿಕ್ಕಿ ಮಾಡಿಕೊಂಡಿದ್ದೇವೆ.  ಈಗ ಮತ್ತೆ ಅಂಥದೇ ಕಾಲಮಾನದ ಮತ್ತೊಂದು ಗುಡ್ಡೆ ನಮ್ಮೆದುರಿದೆ. ಕಳೆದ ವರ್ಷದ ಸಮಯದ ಗುಡ್ಡೆ ಕರಗಿದೆ. ಅದರಲ್ಲಿ ಎಷ್ಟು ಬದುಕಿದೆವು ಅನ್ನುವುದು ನಮ್ಮನಮ್ಮ ವಿವೇಚನೆ ತೀರ್ಮಾನಿಸಬೇಕಾದ ವಿಷಯ. ಮುಂದಿನ ಒಂದಿಡೀ ವರ್ಷ ನಮ್ಮೆದುರಿದೆ. ನಮ್ಮ ಆಯಸ್ಸನ್ನು ಒಂದು ವರ್ಷ ಹೆಚ್ಚಿಸುವ, ಬದುಕುವ ಅವಧಿಯನ್ನು ಒಂದು ವರ್ಷ ತಗ್ಗಿಸುವ […]