ಶೂದ್ರಕ ಮತ್ತು ವೀರವರ : ಕಥಾಸರಿತ್ಸಾಗರದಿಂದ ಒಂದು ಕಥೆ

ಪಾಟಲೀಪುರದಲ್ಲಿ ಶೂದ್ರಕ ಮಹಾರಾಜನೆಂಬುವನು ಆಳುತ್ತಿದ್ದ. ಅವನು ಉತ್ತಮ ಪ್ರಜಾಪಾಲಕನೆಂದು ಹೆಸರು ಪಡೆದಿದ್ದ. ಶೂದ್ರಕನ ಪ್ರಜೆಗಳೂ ಅವನನ್ನು ಗೌರವಾದರಗಳಿಂದ ಕಾಣುತ್ತಿದ್ದರು.  ಒಂದು ದಿನ ವೀರವರನೆಂಬ ರಾಜಕುಮಾರನೊಬ್ಬ ಅವನ ಬಳಿಗೆ ಬಂದು ‘ಮಹಾಪ್ರಭೂ, ನನ್ನಿಂದ ನಿಮಗೆ ಉಪಯೋಗವಾಗುವುದಿದ್ದರೆ ನನ್ನನ್ನು ಸಂಬಳಕ್ಕೆ ನಿಮ್ಮಲ್ಲಿ ಇಟ್ಟುಕೊಳ್ಳಬಹುದು’ ಎಂದ. ವೀರವರ ಒಬ್ಬ ಉತ್ತಮ ವಂಶದ ತರುಣ. ದುರದೃಷ್ಟವಶಾತ್ ಯಾರದೋ ವಂಚನೆಗೆ ಸಿಲುಕಿ ರಾಜ್ಯವನ್ನು ಕಳೆದುಕೊಂಡಿದ್ದ.  ವೀರವರನ ಆಳ್ತನ, ವಿನಯವಂತಿಕೆಗಳನ್ನು ನೋಡಿ ಸಂತಸಪಟ್ಟ ಶೂದ್ರಕನು, ‘ನಿನ್ನ ವೇತನ ಎಷ್ಟು ಬಯಸುತ್ತೀಯಾ?’ ಎಂದು ಕೇಳಿದ. ‘ಐನೂರು ವರಹಗಳು’ […]