ಈ 10 ತ್ಯಾಜ್ಯ ನಿರ್ವಹಣೆ ಸಮರ್ಪಕವಾಗದಿದ್ದರೆ ನಗರ ನರಕ : ವಾಸ್ತುಶಾಸ್ತ್ರ

ಈ ಹತ್ತು ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗದೆ ಹೋದರೆ, ನಗರಗಳು ನರಕವಾಗುತ್ತವೆ ಎಂದು ವಾಸ್ತುಶಾಶ್ತ್ರ ಹೇಳುತ್ತದೆ. ವಾಸ್ತುಶಾಸ್ತ್ರದಲ್ಲಿ ಹೇಳಲಾಗಿರುವ ದಶ ಶೌಚಾದಿಗಳು ಹೀಗಿವೆ : ವಾತಜನ್ಯ : ಗಾಳಿಯಿಂದ ಹಾರಿಬಂದು ಸಂಗ್ರಹವಾಗುವ ಕಸ, ದೂಳು ಇತ್ಯಾದಿ ಕಾಲಜನ್ಯ : ಕಾಲಕ್ರಮದಲ್ಲಿ ಕಸ, ದೂಳು, ಕೆಸರು, ತರಗೆಲೆ ಇತ್ಯಾದಿಯಾಗಿ ಪರಿವರ್ತನೆಯಾಗುವಂಥವು ಪಕ್ಷಿಜನ್ಯ : ಆಯಾ ಪ್ರದೇಶಗಳಲ್ಲಿ ಪಕ್ಷಿಗಳು ತಂದೆಸೆಯುವ ಕಸಕಡ್ಡಿಗಳು ಪ್ರಾಣಿಜನ್ಯ : ಆಯಾ ಪ್ರದೇಶಗಳಲ್ಲಿ ಪ್ರಾಣಿಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳು ಮಾನವಜನ್ಯ : ಮನುಷ್ಯರ ನಿತ್ಯ ತ್ಯಾಜ್ಯ; ಬಳಸಿ […]

ಜ್ಞಾನದಿಂದ ಉಂಟಾಗುವ ಶುದ್ಧಿಯೇ ಸರ್ವಶ್ರೇಷ್ಠ : ಸುಭಾಷಿತ

ವೃತ್ತಶೌಚಂ ಮನಃಶೌಚಂ ತೀರ್ಥಶೌಚಮತಃ ಪರಂ | ಜ್ಞಾನೋತ್ಪನ್ನಂ ಚ ಯಚ್ಛೌಚಂ ತಚ್ಛೌಚಂ ಪರಮಂ ಸ್ಮೃತಂ || ಸುಭಾಷಿತ || “ನಡತೆಯಲ್ಲಿ ಶುಚಿತ್ವ, ಮನಸ್ಸಿನ ಶುಚಿತ್ವ – ಇವು ತೀರ್ಥಕ್ಷೇತ್ರ ದರ್ಶನಾದಿಗಳಿಗಿಂತ ಮಿಗಿಲಾದವು. ಆದರೆ ಜ್ಞಾನದಿಂದ ಉಂಟಾದ ಶುಚಿತ್ವವು ಪರಮಶ್ರೇಷ್ಠವಾದುದೆಂದು ಹೇಳಲಾಗಿದೆ”. ನಾವು ಶುಚಿಯಾಗಿರದೆ ತೀರ್ಥಕ್ಷೇತ್ರಗಳನ್ನು ಸುತ್ತುವುದರಿಂದ ಯಾವ ಪ್ರಯೋಜನವೂ ಇಲ್ಲ. ನಮ್ಮ ನಡೆನುಡಿಗಳು ಶುಚಿಯಾಗಿರಬೇಕು. ಮನಸ್ಸಿನಲ್ಲಿ ಯಾವುದೇ ರೀತಿಯ ಕಶ್ಮಲಗಳು ಇರಬಾರದು, ದುಷ್ಟ ಚಿಂತನೆಗಳು ಇರಬಾರದು. ಹೀಗೆ ನಾವು ಅಂತರಂಗದ ಶುಚಿತ್ವವನ್ನು ಕಾಯ್ದುಕೊಂಡರೆ, ಅದು ತೀರ್ಥಕ್ಷೇತ್ರ ಮಾಡುವುದಕ್ಕಿಂತ […]