ಶ್ರೀ ಯಂತ್ರದ ಒಂಬತ್ತು ಚಕ್ರಗಳು

೧. ತೈಲೋಕ್ಯ ಮೋಹನ ಚಕ್ರ : ಮೊದಲನೆಯ ಭೂಪುರದ ಪಶ್ಚಿಮ ದಿಕ್ಕಿನಲ್ಲಿ ಸರ್ವಸಂಕ್ಷೋಭಿಣಿ , ಉತ್ತರದಲ್ಲಿ ವಿಧಾರಿಣಿ , ಪೂರ್ವದಲ್ಲಿ ಸರ್ವಾಕರ್ಷಿಣಿ , ದಕ್ಷಿಣದಲ್ಲಿ ಸರ್ವ ಶಂಕರಿ , ವಾಯುವ್ಯದಲ್ಲಿ ಸರ್ವೋನ್ಮಾದಿನಿ , ಈಶಾನ್ಯದಲ್ಲಿ ಸರ್ವ ಮಹಾಂಕುಶಾ , ಆಗ್ನೇಯದಲ್ಲಿ ಖೇಚರಿ , ನಿಋಋತಿಯಲ್ಲಿ ಸರ್ವಬೀಜಾ, ಅದೋಭಾಗದಲ್ಲಿ ಸರ್ವಯೋನಿ , ಊರ್ಧ್ವದಲ್ಲಿ ಸರ್ವೇಶ್ವರಿ ಎಂಬ ಮುದ್ರಾಶಕ್ತಿಗಳಿರುವರು. ೨. ಸರ್ವಾಶಾಪರಿಪೂರಕ ಚಕ್ರ : ಎರಡನೆಯ ಷೋಡಶದಳಪದ್ಮದಲ್ಲಿ ಪೂರ್ವದಿಂದ ಅಪ್ರದಕ್ಷಿಣವಾಗಿ – ಕಾಮಾಕರ್ಷಿಣಿ , ಸರ್ವಾಕರ್ಷಿಣೀ , ಬುದ್ದಾಕರ್ಷಿಣೀ, ಅಹಂಕಾರಾಕರ್ಷಿಣೀ, […]