ಮಾಧವ ಲಾಲನ ಷಾ ಹುಸೇನ : ಸೂಫೀ ಸೌಹಾರ್ದದ ಕನ್ನಡಿ

ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಅವನು ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ ಆತನನ್ನು ‘ಪೀರ್’ (ಗುರು) ಎಂದು ಕರೆದರೆ ಅದನ್ನು ನಿರಾಕರಿಸುತ್ತಾ, ‘ಫಕೀರನನ್ನು ಪೀರನೆನ್ನುವೆ ಏಕೆ?’ ಎಂದು ಗದರುತ್ತಿದ್ದ! ~ ಅಲಾವಿಕಾ ಅದು ಹದಿನಾರನೆಯ ಶತಮಾನ. ವಿಶ್ವಾದ್ಯಂತ ಸಂಸ್ಕೃತಿಗಳ ಕೊಡು ಕೊಳ್ಳುವಿಕೆ ಮಾತ್ರವಲ್ಲ, ಹೇರುವಿಕೆ – ದಬ್ಬಾಳಿಕೆಗಳೂ ತಾರಕಕ್ಕೇರಿದ್ದ ಅವಧಿಯದು. ಅದರಲ್ಲಿಯೂ ಇನ್ನೂ ಒಂದು ರಾಷ್ಟ್ರವಾಗಿ ಗುರುತು ಪಡೆಯದೆ ಇದ್ದ ಭಾರತ […]