ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲ : ಅಧ್ಯಾತ್ಮ ಡೈರಿ

ಸಂಗಾತಿಗೆ ‘ನಿನ್ನ ಬಿಟ್ಟಿರಲಾರೆ…’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ! ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!? ~ ಅಲಾವಿಕಾ ‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ. ‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು. ~ ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ […]

ಇರುವಂತೆ ಪ್ರತಿಬಿಂಬಿಸುವವರೇ ನಿಜವಾದ ಪ್ರೇಮಿಗಳು : ಸೂಫಿ ಸಂದೇಶ

ಪ್ರೇಮವು ಸಂಗಾತಿಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುವುದಿಲ್ಲ. ನಿರೀಕ್ಷಿಸುವುದಿಲ್ಲ. ದಬ್ಬಾಳಿಕೆ ನಡೆಸುವುದಿಲ್ಲ. ಸಂಗಾತಿಯನ್ನು ತಾನು ತಾನೇ ಆಗಿ ಇರಗೊಡುವ ಸ್ವಾತಂತ್ರ್ಯವೇ ನಿಜವಾದ ಪ್ರೇಮ. ಸಂಗಾತದಲ್ಲಿ ನಾವು ಮಾಡುವ ಬಹಳ ದೊಡ್ಡ ತಪ್ಪೆಂದರೆ ನಿರೀಕ್ಷಿಸುವುದು. ಶುರುವಲ್ಲಿ ಸಂಗಾತಿಯನ್ನು ಒಲಿಸಿಕೊಳ್ಳುವಾಗ “ನೀನು ಹೇಗಿದ್ದರೂ ನನಗಿಷ್ಟ” ಎಂದು ದುಂಬಾಲು ಬೀಳುತ್ತೇವೆ. ನಂತರದಲ್ಲಿ “ನೀನು ಹೀಗಿರಬೇಡ, ಹಾಗಿದ್ದರೆ ಚೆಂದ…” ಎಂದೆಲ್ಲ ತಾಕೀತು ಮಾಡಲು ತೊಡಗುತ್ತೇವೆ. ನಮ್ಮ ನಿರೀಕ್ಷೆಯಂತೆ ಸಂಗಾತಿ ಇರಬೇಕೆಂದು ಬಯಸೋದು ಪ್ರೇಮವಲ್ಲ. ನಿರೀಕ್ಷೆ ಯಾವತ್ತೂ ಪ್ರೇಮವಾಗಲಾರದು. ಸಾಂಗತ್ಯಕ್ಕಾಗಿ ನಮಗೆ ಬೇಕಿರುವುದು ಸಹಾಯಕರಲ್ಲ. […]