ಎರೆಹುಳ ನುಂಗಿ ಹೊರಹಾಕಿದ ಮಣ್ಣು ನೆಲವಾಯ್ತು, ಹಂಸದ ಹೊಟ್ಟೆಯಲ್ಲಿ ಮನುಷ್ಯರು ಹುಟ್ಟಿದರು : ಸೃಷ್ಟಿಕಥನಗಳು #1

ವಿಜ್ಞಾನದ ವಿವರಣೆಯಂತೂ ಸರಿ; ಧರ್ಮಗ್ರಂಥಗಳು, ಶಾಸ್ತ್ರಗ್ರಂಥಗಳು ಹೇಳುವ ಸೃಷ್ಟಿ ಕಥನಗಳಾಚೆ ನೂರಾರು ಸ್ವಾರಸ್ಯಕರ, ಕುತೂಹಲಭರಿತ ಸೃಷ್ಟಿಗಾಥೆಗಳಿವೆ. ಜನಪದ ಕಥೆ, ಕಾವ್ಯಗಳ ರೂಪದಲ್ಲಿ ಮೌಖಿಕವಾಗಿ ತಲೆಮಾರುಗಳಿಂದ ಹರಿದುಬಂದ ಈ ಕಥನಗಳು ನಮಗೆ ಆಯಾ ಸಮುದಾಯದ ನಂಬಿಕೆ, ಪ್ರಾಮುಖ್ಯತೆ, ಭೌಗೋಳಿಕ  ವಿವರಗಳೇ ಮೊದಲಾದ ತಿಳಿವನ್ನೂ ನೀಡುತ್ತವೆ. ಆದ್ದರಿಂದಲೇ ‘ಅರಳಿ ಬಳಗ’ ಸೃಷ್ಟಿಕಥನಗಳ ಸರಣಿಯನ್ನು ಆರಂಭಿಸುತ್ತಿದೆ. ಹಲವು ಆಕರಗಳಿಂದ ಸಂಗ್ರಹಿಸಿದ ಕಥನಗಳನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿ ಅನುವಾದ ಮಾಡಲಾಗಿದೆ. ಈ ಸರಣಿ ನಿಮಗೆ ಇಷ್ಟವಾಗಲೆಂಬ ಆಶಯ ನಮ್ಮದು | ಅರಳಿ ಬಳಗ  ಸಂತಾಲಿ […]