ಇರುವಂತೆ ಪ್ರತಿಬಿಂಬಿಸುವವರೇ ನಿಜವಾದ ಪ್ರೇಮಿಗಳು : ಸೂಫಿ ಸಂದೇಶ

ಪ್ರೇಮವು ಸಂಗಾತಿಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುವುದಿಲ್ಲ. ನಿರೀಕ್ಷಿಸುವುದಿಲ್ಲ. ದಬ್ಬಾಳಿಕೆ ನಡೆಸುವುದಿಲ್ಲ. ಸಂಗಾತಿಯನ್ನು ತಾನು ತಾನೇ ಆಗಿ ಇರಗೊಡುವ ಸ್ವಾತಂತ್ರ್ಯವೇ ನಿಜವಾದ ಪ್ರೇಮ. ಸಂಗಾತದಲ್ಲಿ ನಾವು ಮಾಡುವ ಬಹಳ ದೊಡ್ಡ ತಪ್ಪೆಂದರೆ ನಿರೀಕ್ಷಿಸುವುದು. ಶುರುವಲ್ಲಿ ಸಂಗಾತಿಯನ್ನು ಒಲಿಸಿಕೊಳ್ಳುವಾಗ “ನೀನು ಹೇಗಿದ್ದರೂ ನನಗಿಷ್ಟ” ಎಂದು ದುಂಬಾಲು ಬೀಳುತ್ತೇವೆ. ನಂತರದಲ್ಲಿ “ನೀನು ಹೀಗಿರಬೇಡ, ಹಾಗಿದ್ದರೆ ಚೆಂದ…” ಎಂದೆಲ್ಲ ತಾಕೀತು ಮಾಡಲು ತೊಡಗುತ್ತೇವೆ. ನಮ್ಮ ನಿರೀಕ್ಷೆಯಂತೆ ಸಂಗಾತಿ ಇರಬೇಕೆಂದು ಬಯಸೋದು ಪ್ರೇಮವಲ್ಲ. ನಿರೀಕ್ಷೆ ಯಾವತ್ತೂ ಪ್ರೇಮವಾಗಲಾರದು. ಸಾಂಗತ್ಯಕ್ಕಾಗಿ ನಮಗೆ ಬೇಕಿರುವುದು ಸಹಾಯಕರಲ್ಲ. […]

ರೂಮಿ ಹೇಳಿದ್ದು : ನಿನ್ನ ಯಾತನೆಗಳು ಅವನ ಸಂದೇಶ, ಎಚ್ಚರದಲ್ಲಿ ಅನುಭವಿಸು

ಬದುಕಿನ ಪಯಣದಲ್ಲಿ ದಾರಿ ತಪ್ಪಿದಂತೆಲ್ಲ ನಮ್ಮ ಸುತ್ತ ಯಾತನೆಗಳು ಹುಟ್ಟಿಕೊಳ್ಳುತ್ತವೆ. ಆ ಯಾತನೆಗಳು ಪುನಃ ಸರಿ ದಾರಿಗೆ ಮರಳಲು ಇರುವ ಸಂದೇಶಗಳು ಎಂಬುದು ರೂಮಿಯ ಮಾತಿನ ಸಂಕ್ಷಿಪ್ತ ಅರ್ಥ  ~ ಸಾಕಿ ಈ ಭೂಮಿಯಲ್ಲಿ ಕಷ್ಟ ಕೋಟಲೆಗಳು ಇಲ್ಲದ ಮನುಷ್ಯರೇ ಇಲ್ಲ ಎಂದು ಹೇಳಬಹುದು. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸಂಕಷ್ಟಗಳನ್ನ ಎದುರಿಸಿಯೇ ಇರುತ್ತೇವೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ನಾವು ದೇವರ ಮೊರೆ ಹೋಗುತ್ತೇವೆ. ಹರೆಕೆಗಳನ್ನು ಹೊತ್ತು ಮಂದಿರ ಮಸೀದಿಗಳನ್ನು ಎಡತಾಕುತ್ತೇವೆ. ಇದು ನಮಗೆ ಮಾನಸಿಕ ನೆಮ್ಮದಿಯನ್ನು […]