ತಾವೋ ತಿಳಿವು #46 : ಯಾರು ಈ ಸಂಯಮಿಗಳು?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ದೇಶವನ್ನು ಮುನ್ನಡೆಸಲು ತಕ್ಕಡಿ ಎಷ್ಟು ಮುಖ್ಯವೋ ತಕ್ಕಡಿ ಹಿಡಿಯುವವನ ಸಂಯಮವೂ ಅಷ್ಟೇ ಮುಖ್ಯ. ಯಾರು ಈ ಸಂಯಮಿಗಳು? ರುಚಿಯ ಬಗ್ಗೆ ತಕರಾರು ಮಾಡದವರು, ಆಕಾಶವನ್ನು ಮೈತುಂಬ ಹೊದ್ದವರು, ಬೆಳಕಿನಂತೆ ಹಬ್ಬಿಕೊಳ್ಳುವವರು, ಪರ್ವತಗಳಂತೆ ನೆಲಕ್ಕೆ ಕಾಲೂರಿ ನಿಂತವರು, ಬದುಕು ಕಟ್ಟಿಕೊಟ್ಟ ಬುತ್ತಿಯನ್ನೆಲ್ಲ ಕಣ್ಣಿಗೊತ್ತಿಕೊಂಡು ಉಣ್ಣುವವರು. ಕಣ್ಣಳತೆಯಲ್ಲಿ ಯಾವ ಮೈಲಿಗಲ್ಲೂ ಇಲ್ಲದವರು. ಅವರು ಯಾವುದನ್ನೂ ಕಟ್ಚಿಹಾಕುವುದಿಲ್ಲ ಅಂತೆಯೇ ಅವರಿಗೆ ಯಾವುದೂ ಅಸಾಧ್ಯವಲ್ಲ. ತಾಯಿ ಮಗುವನ್ನು ಕಾಡುವಂತೆ ಅವರು […]

ಝೆನ್ ಗುರು ಸುಜುಕಿ ರೋಶಿಯ ಸಂಯಮ

ಝೆನ್ ಗುರು ಸುಜುಕಿ ರೋಶಿ ನೋಡಲು ಆಕರ್ಷಕನಾಗಿದ್ದ. ಬಹಳ ಬುದ್ಧಿವಂತನೂ, ಮಹಾ ಧ್ಯಾನಿಯೂ ಆಗಿದ್ದ. ಅವನ ಕೀರ್ತಿಯನ್ನು ಕೇಳಿ, ಅವನನ್ನು ಕಾಣಲು ದಕ್ಷಿಣದಿಂದ ಯುವತಿಯೊಬ್ಬಳು ಬಂದಳು. ಝೆನ್ ಕಲಿಕೆಯ ಉದ್ದೇಶದಿಂದ ಅವನಲ್ಲಿ ಶಿಷ್ಯವೃತ್ತಿ ಸ್ವೀಕರಿಸಿದಳು. ಶ್ರದ್ಧೆಯಿಂದ ಅಭ್ಯಾಸ ನಡೆಸುತ್ತಲೇ ಆಕೆಗೆ ರೋಶಿಯಲ್ಲಿ ಪ್ರೇಮ ಉಂಟಾಯಿತು. ಸೂಕ್ತ ಸಮಯ ನೋಡಿ ರೋಶಿಯ ಬಳಿ ಬಂದ ತರುಣಿ, ಆತನಲ್ಲಿ ತನಗಿರುವ ಪ್ರೇಮವನ್ನು ಹೇಳಿಕೊಂಡಳು. “ಈಗ ನಾನೇನು ಮಾಡಲಿ? ನನಗೆ ನಿಮ್ಮ ಶಿಷ್ಯಳಾಗಿಯೂ ಮುಂದುವರೆಯಬೇಕಿದೆ” ಎಂದು ಕೋರಿದಳು. “ಚಿಂತಿಸಬೇಡ”, ಸುಜುಕಿ ಹೇಳಿದ. […]