ಸಮಾಜ ಸುಧಾರಣೆಗೆ ಮುನ್ನ ಶಿಕ್ಷಣ ನೀಡುವುದು ಮುಖ್ಯ : ವಿವೇಕ ವಿಚಾರ

ಪ್ರತಿಯೊಬ್ಬರೂ ತಮ್ಮ ಮೋಕ್ಷಕ್ಕೆ ತಾವೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡಾ. ಉತ್ತಮ ಸಂಸ್ಥೆಗಳು ಬರುವವರೆಗೆ ಹಳೆಯ ಸಂಸ್ಥೆಗಳನ್ನು ನಾಶ ಮಾಡುವುದು ವಿನಾಶಕಾರಿ. ಆದ್ದರಿಂದ, ಯಾರಿಗೆ ಸುಧಾರಣೆ ಬೇಕಾಗಿದೆಯೋ ಮೊದಲು ಅವರನ್ನು ಅಣಿ ಮಾಡಿ. ಹಿತವಾದ ಸಾಮಾಜಿಕ ಬದಲಾವಣೆಗಳೆಲ್ಲ ನಮ್ಮ ಆಂತರ್ಯದಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಪ್ರವೃತ್ತಿಗಳ ಅಭಿವ್ಯಕ್ತಿಯೇ ಆಗಿವೆ. ಅವು ಬಲಶಾಲಿಯಾಗಿದ್ದರೆ, ಹೊಂದಿಕೊಂಡಿದ್ದರೆ, ಸಮಾಜ ಅದಕ್ಕೆ ಸರಿಯಾಗಿ ಅಣಿಯಾಗಿರುವುದು. ಸಮಾಜ ಸುಧಾರಣೆಯ ಗೋಜಿಗೆ ಹೋಗಬೇಡ. ಮೊದಲು ಆಧ್ಯಾತ್ಮಿಕ ಸುಧಾರಣೆಯಾಗಬೇಕು. ಅದಿಲ್ಲದೆ ಬೇರೆ ಯಾವ ಸುಧಾರಣೆಯೂ […]