ತಾವೋ ತಿಳಿವು #14 ~ ಸಚ್ಚಾರಿತ್ರದ ಮೂಲ ಬೇರುಗಳು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅಂಡಲೆಯುವ ಮನಕೆ ಆಮಿಷ ತೋರಿ ಸ್ವಂತದಲಿ ಒಂದಾಗಿಸುವುದು ಸಾಧ್ಯವೆ? ನಿಮ್ಮ ದೇಹವ ನೆನಸಿ ನೆನಸಿ ಹಸು ಕಂದನ ಕೋಮಲ ಶರೀರ ದಿವ್ಯವಾಗಿಸಬಹುದೆ? ಕಾಣುವ ಕಣ್ಣಿಗೆ ಸಾಣೆ ಹಿಡಿದು ಬರೀ ಬೆಳಕ ನೋಡುವುದು ಸಾಧ್ಯವೆ ? ಚಾಟಿ-ಹುಕುಮು ಮೂಗುದಾಣವಿಲ್ಲದೆಯೇ ಮೈ ನೇವರಿಸುತ್ತ ಬಂಡಿ ಓಡಿಸಬಹುದೆ? ಎಲ್ಲ ನಿಚ್ಚಳವಾಗಿ ಕಾಣುತ್ತಿರುವಾಗಲೂ ಒಂದು ಹೆಜ್ಜೆ ಹಿಂದೆ ಸರಿದು ನಿಶ್ಚಯ ಮಾಡಬಹುದೆ? ಬೀಜ ಬಿತ್ತಿ, ಪಾತಿ ಮಾಡಿ, ನೀರು ಹಾಕಿ […]