ನಮ್ಮನ್ನು ನಿತ್ಯ ಕಾಯುವ 20 ಅಭಿಮಾನಿ ದೇವತೆಗಳು

ಮಾತು, ಮನಸ್ಸು, ವಿದ್ಯೆ, ಗಾಳಿ, ನೀರು, ಆಕಾಶ – ಹೀಗೆ ಪ್ರತಿಯೊಂದಕ್ಕೂ ಒಂದು ಅಭಿಮಾನಿ ದೇವತೆಯನ್ನು ಸನಾತನ ಸಾಹಿತ್ಯವು ಸೂಚಿಸುತ್ತದೆ. ಆಯಾ ವಸ್ತು/ ವಿಷಯವನ್ನು ಒಲಿಸಿಕೊಳ್ಳಲು ಈ ನಿರ್ದಿಷ್ಟ ದೇವತೆಗಳನ್ನು ಸ್ತುತಿಸಿ ಸಂಪ್ರೀತಗೊಳಿಸುವುದು ಮುಖ್ಯ. ಮಾನವ ಜೀವನದೊಡನೆ ಬೆಸೆದುಕೊಂಡ 20 ಮುಖ್ಯ ಸಂಗತಿಗಳು ಮತ್ತು ಅವುಗಳ ಅಭಿಮಾನಿ ದೇವತೆಗಳ ಪಟ್ಟಿ ಇಲ್ಲಿದೆ : ಮನೋಭಿಮಾನಿ ದೇವತೆ : ಶಿವ ಬುದ್ಧಿಯ ಅಭಿಮಾನಿ ದೇವತೆಯರು : ಸರಸ್ವತಿ-ಭಾರತಿ ಪಾಯು ಅಭಿಮಾನಿ ದೇವತೆ : ಯಮ ಮಾತಿನ ಅಭಿಮಾನಿ ದೇವತೆ […]

ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….

“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ ಮಹಾರಾಜನಿಗೆ ವಿವರಿಸುತ್ತಾನೆ | ಭಾವಾರ್ಥ : ಸಾ.ಹಿರಣ್ಮಯಿ ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರಿಸುತ್ತಾ ಹೀಗೆ ಹೇಳುತ್ತಾನೆ;  ನ ಪೃಥ್ವೀ ನ ಜಲಂ ನಾಗ್ನಿರ್ನವಾಯುರ್ದ್ಯೌನ ವಾ ಭವಾನ್ | ಯೇಷಾಂ ಸಾಕ್ಷಿಣಮಾತ್ಮಾನಂ […]

108 ಉಪನಿಷತ್ತು… ನಿಮಗೆಷ್ಟು ಗೊತ್ತು?

ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ… ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ […]

ಪ್ರಜಾಪತಿಗಳು ಮತ್ತು ಸಂತಾನ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #39

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 2ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/11/12/sanatana/ ಪುತ್ರರಲ್ಲಿ ಮತ್ತು ಪುತ್ರವಂತರಲ್ಲಿ ಶ್ರೇಷ್ಠ ಭಗವಾನ್ ಋಷಿ ದಕ್ಷನು ಬ್ರಹ್ಮನ ಎಡ ಅಂಗುಷ್ಠದಿಂದ ಜನಿಸಿದನು. ಆ ಮಹಾತ್ಮನ ಭಾರ್ಯೆಯು ಬಲ ಅಂಗುಷ್ಠದಿಂದ ಹುಟ್ಟಿದಳು. ಆ ಮುನಿಯು ಅವಳಿಂದ ಐವತ್ತು ಕನ್ಯೆಯರನ್ನು ಪಡೆದನು. ಆ ಎಲ್ಲ ಕನ್ಯೆಯರೂ ಅನವದ್ಯಾಂಗಿಯರೂ, ಕಮಲಲೋಚನೆಯರೂ ಆಗಿದ್ದರು. ಪುತ್ರಹೀನನಾಗಿದ್ದ ಪ್ರಜಾಪತಿಯು ಅವರನ್ನೇ ಪುತ್ರಿಕರನ್ನಾಗಿರಿಸಿಕೊಂಡನು. […]

ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #38

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಮಾಹಿತಿ ಕೃಪೆ : http://www.vyasaonline.com ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು. ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ದಕ್ಷಕನ್ಯೆಯರು. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ […]

ಅರವತ್ತನಾಲ್ಕು ವಿದ್ಯೆಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #32

ಪುರಾಣ ಕಥನಗಳಲ್ಲಿ, ಪ್ರಾಚೀನ ಸಾಹಿತ್ಯದಲ್ಲಿ 64 ವಿದ್ಯೆಗಳ ಉಲ್ಲೇಖ ನೋಡುತ್ತೇವೆ. ಈ 64 ವಿದ್ಯೆಗಳು ಯಾವುವು ಎಂದು ನೋಡೋಣ. ಒಂದು ಪಠ್ಯದ ಪ್ರಕಾರ : ಎಲ್ಲಾ ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳಲ್ಲಿ ಪ್ರಾವೀಣ್ಯ (4) + ಆರು ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪಗಳಲ್ಲಿ ಪರಿಣತಿ (6) + ಆರು ಶಾಸ್ತ್ರಗಳಾದ ವೇದಾಂತ, ಧರ್ಮ, ಕಾವ್ಯ, ಶಿಲ್ಪ, ಕಾಮ ಮತ್ತು ಅಲಂಕಾರಗಳಲ್ಲಿ ನೈಪುಣ್ಯ (6) + ಹದಿನೆಂಟು ಪುರಾಣಗಳಾದ […]